ನೆಲಮಂಗಲ: ಕದ್ದ ಚಿನ್ನವನ್ನು ಖರೀದಿ ಮಾಡಿದ್ದ ಹಿನ್ನೆಲೆಯಲ್ಲಿ ಚಿನ್ನವನ್ನು ಜಪ್ತಿ ಮಾಡಲು ನಗರದ ಆಭರಣ ಮಳಿಗೆಗೆ ಆರೋಪಿಯೊಂದಿಗೆ ಆಗಮಿಸಿದ್ದ ಪೊಲೀಸರು ಹಾಗೂ ಅಂಗಡಿ ಮಾಲೀಕನ ನಡುವೆ ಮಾತಿನ ಚಕಮಕಿ ನಡೆದಿದೆ. ಕೋರ್ಟ್ ನೋಟಿಸ್ ಮತ್ತು ಸಮವಸ್ತ್ರ ಧರಿಸದೇ ಆಗಮಿಸಿ ಚಿನ್ನವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ ಎಂದು ಪೊಲೀಸರ ವಿರುದ್ಧ ಚಿನ್ನ, ಬೆಳ್ಳಿ ವರ್ತಕರ ಸಂಘ ಆಕ್ರೋಶ ಹೊರ ಹಾಕಿದ್ದಾರೆ.
ನಗರದ ಪೇಟೆ ಬೀದಿಯಲ್ಲಿ ಜಗದೀಶ್ ಎಂಬುವವರ ನವಜ್ಯೋತಿ ಜ್ಯುವೆಲರಿ ಮಳಿಗೆಯಲ್ಲಿ ಮಹಿಳೆಯೊಬ್ಬರು ಕದ್ದ ಚಿನ್ನವನ್ನು ಮಾರಾಟ ಮಾಡಿದ್ದರು. ಹೀಗಾಗಿ ಚಿನ್ನವನ್ನು ಜಪ್ತಿ ಮಾಡಲು ಆವಲಹಳ್ಳಿ ಪೊಲೀಸರು, ಅಂಗಡಿಗೆ ಭಾನುವಾರ ತೆರಳಿ ಚಿನ್ನ ವಾಪಸ್ ನೀಡುವಂತೆ ಕೇಳಿದ್ದಾರೆ. ಚಿನ್ನ ಖರೀದಿ ವೇಳೆ ಅದು ಕದ್ದ ಆಭರಣ ಎಂದು ಹೇಗೆ ತಿಳಿದಿರುತ್ತದೆ? ಕೋರ್ಟ್ ನೋಟಿಸ್ ಮತ್ತು ಸಮವಸ್ತ್ರ ಧರಿಸದೇ ಆಗಮಿಸಿ ಚಿನ್ನವನ್ನು ಕೇಳಿದ್ದಾರೆ ಎಂದು ಚಿನ್ನ, ಬೆಳ್ಳಿ ವರ್ತಕರ ಸಂಘ ಅಸಮಾಧಾನ ಹೊರಹಾಕಿದೆ.
ಕಳೆದ 3 ದಿನಗಳ ಹಿಂದೆ ಇದೇ ರೀತಿ ಧನಲಕ್ಷ್ಮೀ ಜ್ಯುವೆಲರಿ ಶಾಪ್‌ಗೆ ನುಗ್ಗಿ ನಂದಗುಡಿ ಪೊಲೀಸರು ಸುಖಾಸುಮ್ಮನೆ 1 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಹೀಗೆ ಪದೇಪದೇ ಪೊಲೀಸರು ಯಾವುದೇ ಕೋರ್ಟ್ ನೋಟಿಸ್ ಇಲ್ಲದೆ ಮಫ್ತಿಯಲ್ಲಿ ಬಂದು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವರ್ತಕರು ಆರೋಪಿಸಿದ್ದಾರೆ. ಈ ಬಗ್ಗೆ ನೆಲಮಂಗಲ ಠಾಣೆಗೆ ವರ್ತಕರ ಸಂಘ ದೂರು ನೀಡಿದೆ.
ಇದನ್ನೂ ಓದಿ | Black Magic | ಪತಿಯ ಮೇಲೆ ನಿಯಂತ್ರಣ ಸಾಧಿಸಲು ಜ್ಯೋತಿಷಿಗೆ 59 ಲಕ್ಷ ರೂ. ನೀಡಿದ ಮಹಿಳೆ, ಮುಂದೇನಾಯ್ತು?