Site icon Vistara News

Republic day 2023: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ

Changes in road traffic in Bangalore in the wake of Republic Day

ಬೆಂಗಳೂರು: ಗಣರಾಜ್ಯೋತ್ಸವ (Republic day 2023) ಪ್ರಯುಕ್ತ ಬೆಂಗಳೂರು ನಗರದ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ವಿವರ ಇಂತಿದೆ. 8.30 ರಿಂದ 10.30 ರವರೆಗೂ ಕಬ್ಬನ್ ರಸ್ತೆಯಲ್ಲಿ ಬಿಆರ್ ವಿ ಜಂಕ್ಷನ್ ನಿಂದ ಕಾಮರಾಜ್ ರಸ್ತೆ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧ‌ ಇರಲಿದೆ. ಇನ್ ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಹೋಗುವ ವಾಹನಗಳು – ಇನ್ ಫೆಂಟ್ರಿ ರೋಡ್-ಸಫೀನಾ ಪ್ಲಾಜಾ- ಬಲಕ್ಕೆ ತಿರುವು ಪಡೆದು ಕಾಮರಾಜ ರೋಡ್ ತಲುಪಬಹುದು.
ಕಬ್ಬನ್ ರೋಡ್ – ಮಣಿಪಾಲ್ ಸೆಂಟರ್ ಜಂಕ್ಷನ್ ನಿಂದ ಬಿಆರ್ ವಿ ಬರುವ ವಾಹನಗಳು- ಎಂಜಿ ರೋಡ್, ಮೇಯೋಹಾಲ್ ,ಕಾವೇರಿ ಎಂಪೋರಿಯಂ – ಅನಿಲ್ ಕುಂಬ್ಳೆ ರೋಡ್ ಮೂಲಕ ಹೋಗಬಹುದು.

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು:

ಸೆಂಟ್ರಲ್ ಸ್ಟ್ರೀಟ್ – ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣವರೆಗೆ,
ಕಬ್ಬನ್ ರೋಡ್ – ಸಿಇಟಿ ವೃತ್ತದಿಂದ ಕೆಆರ್ ರೋಡ್ & ಕಬ್ಬನ್ ರೋಡ್.
ಎಂಜಿ ರೋಡ್ – ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಸರ್ಕಲ್.

Exit mobile version