ಬೆಂಗಳೂರು: ರಷ್ಯಾ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದೇಶದ ಪ್ರಮುಖ ಬಹುರಾಷ್ಟ್ರೀಯ ನಿಗಮವಾಗಿರುವ ಚೆವಲಿಯರ್ ಗ್ರೂಪ್, ರಷ್ಯಾದ ಪೆನ್ಜಾ ಸ್ಟೇಟ್ ಯೂನಿವರ್ಸಿಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಚೆವೆಲಿಯರ್ ಗ್ರೂಪ್‌ನ ಸಂಸ್ಥಾಪಕ ಮತ್ತು ಸಿಇಒ ಡಾ. ಯುವರಾಜ್ ಸಿಂಗ್ ಸೋಲಂಕಿ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾನು ರಷ್ಯಾದಲ್ಲಿ ಅಧ್ಯಯನ ಮಾಡಿದ್ದು, ನನಗೆ 20 ವರ್ಷಗಳ ಅನುಭವವಿದೆ. ಅಲ್ಲದೇ, ಪೆನ್ಜಾ ಸ್ಟೇಟ್ ಯೂನಿವರ್ಸಿಟಿಯ ಗೌರವ ಉಪನ್ಯಾಸಕರು ಮತ್ತು ಸಲಹೆಗಾರ ಆಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ಈ ವಿವಿ ಕೇವಲ ಎಂಬಿಬಿಎಸ್ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಭರ್ತಿಮಾಡಿಕೊಳ್ಳುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಸಮಗ್ರ ಬೆಂಬಲ ಮತ್ತು ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂದರು.
ಇದನ್ನೂ ಓದಿ | Job Alert: ಪದವೀಧರರಿಗೆ ಗುಡ್‌ನ್ಯೂಸ್; 93 ಬ್ಯಾಂಕ್ ಸಹಾಯಕ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
2013 – 2023ರ ದಶಕದಲ್ಲಿ 370 ವಿದ್ಯಾರ್ಥಿಗಳು ಪೆನ್ಜಾ ಸ್ಟೇಟ್ ಯೂನಿವರ್ಸಿಟಿಯಿಂದ ಪದವಿ ಪಡೆದಿದ್ದು, 1200 ಕ್ಕೂ ಅಧಿಕ ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಪೈಕಿ 245 ವಿದ್ಯಾರ್ಥಿಗಳು ಯಶಸ್ವಿಯಾಗಿ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ (ಎಫ್.ಎಂ.ಜಿ.ಇ) ಯಲ್ಲಿ ಉತ್ತೀರ್ಣರಾಗಿದ್ದು, ತೇರ್ಗಡೆ ಪ್ರಮಾಣ ಶೇ.65 ರಷ್ಟಿದೆ. 65 ಮಂದಿ ವೈದ್ಯರು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಇದು ಚೆವೆಲಿಯರ್ ಗ್ರೂಪ್‌ನೊಂದಿಗೆ ಸಹಭಾಗಿತ್ವ ಹೊಂದಿರುವ ಪೆನ್ಜಾ ಸ್ಟೇಟ್ ಯೂನಿವರ್ಸಿಟಿಯ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಹಿತ ರಕ್ಷಣೆ ಚೆವೆಲಿಯರ್ ಗ್ರೂಪ್‌ನ ಪ್ರಧಾನ ಆದ್ಯತೆಯಾಗಿದ್ದು, ವಿದ್ಯಾರ್ಥಿಯ ಪ್ರತಿಯೊಂದು ಶೈಕ್ಷಣಿಕ ಆಯಾಮಗಳನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತದೆ. ದಾಖಲಾತಿ ಸಲ್ಲಿಕೆಯಿಂದ ಹಿಡಿದು ಪ್ರವೇಶ ಪ್ರಕ್ರಿಯೆಯ ಪ್ರತಿಯೊಂದು ಚಟುವಟಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ವಸತಿ ನಿಲಯದ ಕೊಠಡಿ ಮಂಜೂರಾತಿ, ವಿವಿಗೆ ಭೇಟಿ, ಹೀಗೆ ಸಣ್ಣ ವಿಷಯಗಳಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ. ಪೆನ್ಜಾದಲ್ಲಿ ಚೆವೆಲಿಯರ್ ಗ್ರೂಪ್ ಎರಡು ಭಾರತೀಯ ವಸತಿ ನಿಲಯಗಳು ಮತ್ತು ಮೂರು ಹೋಟೆಲ್‌ಗಳನ್ನು ನಡೆಸುತ್ತಿದ್ದು, ಮೂರು ಹೊತ್ತು ಭಾರತೀಯ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದೆ. ವೈದ್ಯಕೀಯ ತುರ್ತುಪರಿಸ್ಥಿತಿ ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಒದಗಿಸುತ್ತಿದೆ ಎಂದು ವಿವರಿಸಿದರು.
ದಕ್ಷಿಣ ಭಾರತದಲ್ಲಿ ಚೆವಲಿಯರ್ ಗ್ರೂಪ್‌ನ ಅಧಿಕೃತ ಪಾಲುದಾರ IT&CS PVT LTDನ ವ್ಯವಸ್ಥಾಪಕ ನಿರ್ದೇಶಕರಾದ ಕ್ಷತ್ರಧಾರಿ ಮಂಡಲ್ ಮಾತನಾಡಿ, ಚೆವೆಲಿಯರ್ ಗ್ರೂಪ್ ಮುಂದಿನ ಪೆನ್ಜಾ ಸ್ಟೇಟ್ ಯೂನಿವರ್ಸಿಟಿಯ ಪರೀಕ್ಷೆಗೆ ಭಾರತೀಯ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು 10 ಮಂದಿ ಖ್ಯಾತ ಬೋಧಕ ಸಿಬ್ಬಂದಿಯನ್ನು ಸಹ ನಿಯೋಜಿಸಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆ ಹೆಚ್ಚಾಗುವ ಜೊತೆಗೆ ತಮ್ಮ ಅಧ್ಯಯನದಲ್ಲಿ ವಿಶೇಷತೆ ಸಾಧಿಸಲು ಸಾಧ್ಯವಾಗಲಿದೆ.
ಇದನ್ನೂ ಓದಿ | Scholarship : 6 ಲಕ್ಷ ಸ್ಕಾಲರ್ಶಿಪ್ ಸಮೇತ ಆಸ್ಟ್ರೇಲಿಯಾದಲ್ಲಿ ಪದವಿ ಮಾಡುವ ಆಸೆಯೆ? ಇಲ್ಲಿದೆ ಸುವರ್ಣಾವಕಾಶ
ಚೆವೆಲಿಯರ್ ಗ್ರೂಪ್ ಇದೀಗ ವಡೋದರದ ಪರ್ಲ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಪೆನ್ಜಾ ಸ್ಟೇಟ್ ಯೂನಿರ್ವಸಿಟಿಯ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುತ್ತಿದೆ. ವೈದ್ಯಕೀಯ ಶಿಕ್ಷಣದ ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸನ್ನದ್ಧರಾಗಲು ನೆರವಾಗುತ್ತಿದೆ ಎಂದರು.