Site icon Vistara News

ಆ.27ಕ್ಕೆ ಕೊಲ್ಯಾಬೊರೇಟಿವ್‌ ಇನೋವೇಷನ್ ವೆಬಿನಾರ್‌

ವೆಬಿನಾರ್‌

ಬೆಂಗಳೂರು: ಅನಂತಕುಮಾರ್‌ ಪ್ರತಿಷ್ಠಾನದ ‘ದೇಶ ಮೊದಲು’ ೧೦ನೇ ಸಂವಾದ ಕಾರ್ಯಕ್ರಮದ ಭಾಗವಾಗಿ ಆಗಸ್ಟ್‌ 27ರಂದು 4.30 ರಿಂದ 6ಗಂಟೆ ವರೆಗೆ ಕೊಲ್ಯಾಬೊರೇಟಿವ್‌ ಇನೋವೇಷನ್‌ (Collaborative Innovation: Win-Win for all not Zero sum game) ವಿಷಯದ ಕುರಿತ ವೆಬಿನಾರ್‌ ಆಯೋಜಿಸಲಾಗಿದೆ.

ವೆಬಿನಾರ್‌ನಲ್ಲಿ ದಿ ಅಗ್ರಿ ಕೊಲ್ಯಾಬೊರೇಟರಿ ಸಂಸ್ಥೆ ಸ್ಥಾಪಕ ನಿಪುಣ್ ಮೆಹ್ರೋತ್ರ, ಹಿರಿಯ ಪತ್ರಕರ್ತ, ಹಿಂದು ಬಿಜಿನೆಸ್‌ ಲೈನ್ ನಿವೃತ್ತ ಸಂಪಾದಕ ರಾಘವನ್‌ ಶ್ರೀನಿವಾಸನ್‌ ಹಾಗೂ‌ ಎಐಸಿಟಿಇ ಮುಖ್ಯ ಸಮನ್ವಯ ಅಧಿಕಾರಿ ಡಾ.ಬುದ್ಧ ಚಂದ್ರಶೇಖರ್ ಅವರು ಮಾತನಾಡಲಿದ್ದಾರೆ. ಆನ್‌ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ವೆಬ್‌ಸೈಟ್ https://akp.org.in/NFD10 Collaborativelnnovation-registration/ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

“ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಅನುಸಂಧಾನ” ಎಂಬ ಘೋಷಣೆ ಮೂಲಕ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಂಶೋಧನೆ ಹಾಗೂ ನಾವೀನ್ಯತೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಕರೆ ನೀಡಿದ್ದರು. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಹೊಸತನವನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ ಎಂದು ಅನಂತಕುಮಾರ್ ಪ್ರತಿಷ್ಠಾನ ತಿಳಿಸಿದೆ.

ಇದನ್ನೂ ಓದಿ | ದಾದಾಪೀರ್‌ ಜೈಮನ್‌, ತಮ್ಮಣ್ಣ ಬೀಗಾರಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ

Exit mobile version