Site icon Vistara News

ಸಂಯೋಜಿತ ವಾರ್ಷಿಕ ಶಿಬಿರ; ಐ.ಟಿ.ಐ. ಸೆಂಟ್ರಲ್‌ ಶಾಲೆಯ ಎನ್‌ಸಿಸಿ ತಂಡದ ಅಮೋಘ ಸಾಧನೆ

nss camp

ಬೆಂಗಳೂರು: ಜಾಲಹಳ್ಳಿ ಪೂರ್ವ ವಾಯುನೆಲೆಯಲ್ಲಿ ನಂ. 2 ಕರ್ನಾಟಕ ಏರ್‌ (ಟೆಕ್ನಿಕಲ್)‌ ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್‌ನ ವತಿಯಿಂದ ಆಯೋಜಿಸಿದ್ದ ಸಂಯೋಜಿತ ವಾರ್ಷಿಕ ಶಿಬಿರದಲ್ಲಿ ಐ.ಟಿ.ಐ ಸೆಂಟ್ರಲ್‌ ಶಾಲೆಯ 27 ಕೆಡೆಟ್‌ಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

8 ದಿನಗಳ ಈ ಶಿಬಿರದಲ್ಲಿ ಬೆಂಗಳೂರಿನ ಸುಮಾರು 15 ಶಾಲೆಗಳ 530ಕ್ಕೂ ಹೆಚ್ಚು ಕೆಡೆಟ್‌ಗಳು ಭಾಗವಹಿಸಿದ್ದರು. ಪ್ರತಿ ನಿತ್ಯ ಹಲವು ತರಬೇತಿ ಚಟುವಟಿಕೆ ನಡೆಯುತ್ತಿದ್ದವು. ಈ ವೇಳೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.

ಎನ್.ಸಿ.ಸಿ. ಸಹ ಅಧಿಕಾರಿ ಬಾಲಕೃಷ್ಣ ವಿ.ಎಚ್. ಐ.ಟಿ.ಐ. ಸೆಂಟ್ರಲ್‌ ಶಾಲೆಯ ಮಕ್ಕಳ ನೇತೃತ್ವ ವಹಿಸಿದ್ದರು. ಸಮೂಹ ನೃತ್ಯ ಚಟುವಟಿಕೆಯಲ್ಲಿ ಪ್ರಥಮ, ಏಕವ್ಯಕ್ತಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ಅತ್ಯುತ್ತಮ ಕೆಡೆಟ್‌ ಸ್ಪರ್ಧೆಯಲ್ಲಿ ಪ್ರಥಮ, ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ, ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ, 100 ಮೀಟರ್‌ ಓಟದಲ್ಲಿ ತೃತೀಯ ಹಾಗೂ ರಿಲೆ ಓಟದ ಸ್ಪರ್ಧೆಯಲ್ಲಿ ಬಾಲಕಿಯರು ಹಾಗೂ ಬಾಲಕರ ಎರಡೂ ತಂಡಗಳು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ವಿಜೇತರಾದ ಎಲ್ಲ ವಿದ್ಯಾರ್ಥಿಗಳನ್ನು ಪ್ರಶಂಸಿಸಿದ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಆರ್‌. ರಾಧಾ, ಪ್ರಾಂಶುಪಾಲೆ ಲಕ್ಷ್ಮಿ ಎಂ.ರಾವ್, ಉಪ ಪ್ರಾಂಶುಪಾಲೆ ಶೈಲಜಾ ಆರಾಧ್ಯ, ಮುಖ್ಯಶಿಕ್ಷಕಿ ಸುಮತಿ ಜಿ.ಎಸ್.‌ ಹಾಗೂ ಐ.ಟಿ.ಐ. ವಿದ್ಯಾ ಸಮಿತಿಯ ಪದಾಧಿಕಾರಿಗಳು ಮಕ್ಕಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | School timings | ಬೇಕಾಬಿಟ್ಟಿ ತರಗತಿಗೆ ಶಿಕ್ಷಣ ಇಲಾಖೆ ಬ್ರೇಕ್‌, ವೇಳಾಪಟ್ಟಿ ಪಾಲಿಸಲು ಖಡಕ್‌ ಸೂಚನೆ

Exit mobile version