ಬೆಂಗಳೂರು: ಡ್ಯಾನಿಶ್ ಸೇಠ್ ಯಾರಿಗೆ ಗೊತ್ತಿಲ್ಲ ಹೇಳಿ.. ಒಳ್ಳೆ ಕಾಮೆಡಿಯನ್ ಮತ್ತು ಒಳ್ಳೆ ನಟ. ಅವನು ಏನೇ ಹೇಳಿದರೂ ನಗು ಉಕ್ಕಿಸುವಂತೆಯೇ ಇರುತ್ತದೆ. ಸದಾ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುವ ಈ ನಟ ಈ ಬಾರಿ ಒಂದು ದೇಸೀ ಸ್ಟಾರ್ಟಪ್ ಹೇಗೆ ಯುನಿಕಾರ್ನ್ ಆಗುತ್ತದೆ ಎಂಬುದನ್ನು ರಸವವತ್ತಾಗಿ ವಿವರಿಸಿದ್ದಾರೆ. ಇಬ್ಬರು ಗೆಳೆಯರು ಒಬ್ಬ ಹೂಡಿಕೆದಾರನ ಜತೆ ಮಾತನಾಡಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇಬ್ಬರು ಗೆಳೆಯರ ಪಾತ್ರದಲ್ಲಿ ನಟಿಸಿರುವ ಡ್ಯಾನಿಶ್ ಸೌತ್ ಇಂಡಿಯನ್ ಆಕ್ಸೆಂಟ್ ಮಾತುಗಳೊಂದಿಗೆ ಕಂಪನಿ ಆರಂಭಿಸುವ ಕುರಿತು ಮಾತನಾಡಿದ್ದಾರೆ. ನಂತರ ಹೂಡಿಕೆದಾರನಾಗಿಯೂ ಡ್ಯಾನಿಶ್ ಬರ್ತಾರೆ.
ʻʻಬ್ರೊ.. ಒಂದು ಸ್ಟಾರ್ಟಪ್ ಮಾಡೋಣ..ʼ ಅಂತ ಗೆಳೆಯರ ನಡುವೆ ಮಾತುಕತೆ ಶುರುವಾಗುತ್ತದೆ. ನಿನಗೇನಾದರೂ ಐಡಿಯಾ ಇದೆಯಾ ಅಂತ ಫ್ರೆಂಡ್ ಕೇಳುತ್ತಾನೆ.. ಆಗ ʻಬಾರೋ ಮಚ್ಚಾ.. ನನ್ನ ಅಂಕಲ್ ಹತ್ರ ಒಂದು ʻವಿ ಸಿʼ ಇದೆ ಅಂತಾನೆ. ʻಈ ವಿಸಿ ಅಂದ್ರೆ ಏನೋʼ ಅಂತ ಇನ್ನೊಬ್ಬ ಕೇಳ್ತಾನೆ. ಅದೆಲ್ಲ ಆಮೇಲೆ ಹೇಳ್ತೀನಿ ಇರು ಅಂತಾನೆ!
ಇಬ್ಬರೂ ಸೇರಿ ಅಂಕಲ್ ಹತ್ರ ಹೋಗಿ ʻಅಂಕಲ್ ನಾವೊಂದು ಸ್ಟಾರ್ಟಪ್ ಮಾಡಲು ಹೊರಟಿದ್ದೇವೆʼ ಅಂತಾರೆ. ಆಗ ಅಂಕಲ್ ʻಗುಡ್ ಐಡಿಯಾ.. ಭಾರತವು ಉದಯೋನ್ಮುಖ ಮಾರುಕಟ್ಟೆಯಾಗಿದೆ. ಹಾಗಾದರೆ, ನಿಮ್ಮ ಪ್ಲ್ಯಾನ್ ಏನು? ಏನು? ಮತ್ತು ಕಂಪನಿಯ USP (ಮೂಲ ಆಶಯ) ಏನುʼ ಎಂದು ಕೇಳುತ್ತಾನೆ.
ಆಗ ಇವನು, ʻʻಪರಿಣಾಮಕಾರಿ ಕಂಪನಿ, ಸುಸ್ಥಿರ ಅಭಿವೃದ್ಧಿ, ಪೇಪರ್ ಬ್ಯಾಗ್ ಹಿಡಿದುಕೊಂಡು, ಮನೆ ಮನೆಗೆ ತಿರುಗಾಡಿ, ದಿನಕ್ಕೆ ೧೦೦೦೦ ಸ್ಟೆಪ್ ನಡೆದು..ʼ ಅಂತೆಲ್ಲ ಸಂಬಂಧವಿಲ್ಲದ ಪದಗಳನ್ನು ಸೇರಿಸಿ ಕೊನೆಗೊಂದು ಸೆಂಟಿಮೆಂಟಲ್ ಲೈನ್ ಸೇರಿಸುತ್ತಾನೆ.. ನನ್ನಮ್ಮ ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆದು ಪಕ್ಕದ ಊರಿಗೆ ಹೋಗುತ್ತಿದ್ದಳು ಅಂತ.
ಆಗ ಇನ್ವೆಸ್ಟರ್ ತನ್ನ ಅಮ್ಮನನ್ನು ನೆನೆದು ಕಣ್ಣೀರಾಗುತ್ತಾನೆ. ತಕ್ಷಣವೇ, ʻʻತಗೊಳ್ಳಿ ಒಂದು ಬಿಲಿಯನ್ ಡಾಲರ್.. ಈ ಸ್ಟಾರ್ಟಪ್ ಯುನಿಕಾರ್ನ್ ಆಗಲಿʼ ಎನ್ನುತ್ತಾನೆ. ಆಗ ಪಕ್ಕದಲ್ಲಿದ್ದ ಗೆಳೆಯರಲ್ಲಿ ಒಬ್ಬ ʻಮಗಾ ಯುನಿಕಾರ್ನ್ ಅಂದ್ರೇನೋʼ ಅಂತ ಕೇಳುತ್ತಾನೆ.
ಅದೂ ʻʻಮಾಮಾ ಅದು ಡೈನೋಸಾರ್ ಮತ್ತು ಕತ್ತೆಗೆ ಮಕ್ಕಳಾದರೆ ಅದನ್ನು ಯುನಿಕಾರ್ನ್ ಅಂತಾರೆʼ ಅನ್ನುತ್ತಾನೆ. ಅಷ್ಟು ಹೊತ್ತಿಗೆ ಇನ್ವೆಸ್ಟರ್ ʻʻಹುಡುಗ್ರೇ.. ಈ ಹಣವನ್ನು ನೀವು ಈ ಹಣವನ್ನು ಬೀನ್ ಬ್ಯಾಗ್, ಟಿವಿ ಟೇಬಲ್ಸ್, ಕಾಫಿ ವೆಂಡಿಂಗ್ ಮೆಷಿನ್, ಮೆಡಿಟೇಷನ್ ರೂಮಿನಲ್ಲೆಲ್ಲ ಇನ್ವೆಸ್ಟ್ ಮಾಡಿʼ ಅಂತಾನೆ!
ಕೊನೆಗೆ ಎರಡನೇ ಫ್ರೆಂಡ್ ಕೇಳ್ತಾನೆ.. ಅಲ್ಲಾ ಕಣೋ ಆಗ ವಿಸಿ, ವಿಸಿ ಅಂತ ಹೇಳ್ತಾ ಇದ್ಯಲ್ಲಾ.. ಏನೋ ಅದು ಅಂತ.
ಆಗ ಇವನು ಹೇಳ್ತಾನೆ: ವೆರಿ ಚೂತಿಯಾ.. ಸಿಕ್ಕಾಪಟ್ಟೆ ಮೂರ್ಖ ಅಂತ!
ತಲೆಬುಡವಿಲ್ಲದ ಐಡಿಯಾಗಳನ್ನು ಬಣ್ಣದ ಮಾತುಗಳಿಂದಲೇ ಹೇಗೆ ಮಾರಾಟ ಮಾಡಲಾಗುತ್ತದೆ ಎನ್ನುವುದನ್ನು ಡ್ಯಾನಿಶ್ ಸೇಟ್ ತುಂಬ ಸೊಗಸಾಗಿ ಮಾರ್ಕೆಟ್ ಮಾಡಿದ್ದಾರೆ. ಇದು ಡ್ಯಾನಿಶ್ ಅವರ ಬೆಸ್ಟ್ ವಿಡಿಯೊ ಎಂದು ಹೆಚ್ಚಿನವರು ಕಮೆಂಟ್ ಮಾಡಿದ್ದಾರೆ. ಈಗ ಜಗತ್ತಿನಲ್ಲಿ ನಡೆಯುತ್ತಿರುವುದನ್ನು ಚೆನ್ನಾಗಿ ಹೇಳಿದ್ದೀರಾ ಎನ್ನುವುದು ಹೆಚ್ಚಿನವರ ಪ್ರತಿಕ್ರಿಯೆ.
ಅವರು ಬಳಸಿದ ವಿಸಿ, ಮಾಮಾ, ಯುನಿಕಾರ್ನ್ ವ್ಯಾಖ್ಯಾನಗಳು ಎಲ್ಲ ಕಡೆ ಸದ್ದು ಮಾಡುತ್ತಿವೆ.
ಇದನ್ನೂ ಓದಿ: Online Beauty Trend: ವೈರಲ್ ಆದ ಹೇರ್ ಕಲರ್ ಸ್ಟೈಲ್