Site icon Vistara News

Coronavirus | ಸೆಪ್ಟೆಂಬರ್‌ನಲ್ಲೇ ಬೆಂಗಳೂರಿಗೆ ಕಾಲಿಟ್ಟಿತ್ತು ಬಿಎಫ್.7 ರೂಪಾಂತರಿ!

coronavirus

ಬೆಂಗಳೂರು: ಇದೀಗ ಚೀನಾ ಸೇರಿ ವಿಶ್ವದ ವಿವಿಧೆಡೆ ಆತಂಕ ಸೃಷ್ಟಿಸುತ್ತಿರುವ ಕೋವಿಡ್‌ ವೈರಸ್‌ ರೂಪಾಂತರಿ ಬಿಎಫ್.7 ಬೆಂಗಳೂರಿಗೆ ಅದಾಗಲೇ ಕಾಲಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೇಶಾದ್ಯಂತ ಕೋವಿಡ್ ಮತ್ತೊಂದು ಅಲೆಯ ಭೀತಿ ಎದುರಾಗುತ್ತಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳೂ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿವೆ.

ಒಮಿಕ್ರಾನ್ ಬಿಎಫ್.7 ರೂಪಾಂತರಿ ತಳಿ ಬೆಂಗಳೂರಿಗೆ ಜುಲೈ ಕಾಲಿಟ್ಟಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಬಿಬಿಎಂಪಿ ಆಯುಕ್ತರು ಬಿಎಫ್.7 ಪತ್ತೆ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಸಪ್ಟೆಂನರ್‌ನಲ್ಲಿಯೇ ಬೆಂಗಳೂರಿನಲ್ಲಿ ನಿತ್ಯ 200 ರಿಂದ 300 ಸೋಂಕಿತರು ಪತ್ತೆ ಆಗುತ್ತಿದ್ದರು.

ಶೇ.20 ರಷ್ಟು ಅಂದರೆ 3 ಜನರ ಗಂಟಲು ದ್ರವವನ್ನು ಜಿನೋಮಿಕ್ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಇದರಲ್ಲಿ 2 ಜನರಿಗೆ ಬಿಎಫ್ 7 ಧೃಡವಾಗಿತ್ತು. ಆದರೆ ಬಿಎಫ್ 7 ಗೆ ತುತ್ತಾದವರು ಆರೋಗ್ಯವಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವ್ಯಾಕ್ಸಿನೇಷನ್‌ ಪ್ರಭಾವದಿಂದ ಬಿಎಫ್ 7 ನಿಂದ ಹಾನಿಯಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಎಫ್.7 ವೈರಸ್‌ಗೆ ಭಯ ಪಡುವ ಆತಂಕವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಈ ಹಿಂದೆ ಬೆಂಗಳೂರಿನಲ್ಲಿ ಪ್ರತಿದಿನ 1500- 1600 ಪರೀಕ್ಷೆ ನಡೆಸುತ್ತಿದ್ದೆವು. ಈಗ ಕೇಂದ್ರ ಸರ್ಕಾರ ಸೂಚನೆ ನೀಡಿದ ನಂತರ 5000-6000 ಮಾಡುತ್ತಿದ್ದೇವೆ. ಸದ್ಯಕ್ಕೆ ಭಯಪಡುವ ಅಗತ್ಯವಿಲ್ಲ. ಹೊರಾಂಗಣಕ್ಕೆ ಮಾಸ್ಕ್‌ ಕಡ್ಡಾಯ ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ | coronavirus | ಒಮಿಕ್ರಾನ್ ಬಿಎಫ್.7ನಿಂದ ಭಾರತೀಯರಿಗೆ ಗಂಭೀರ ಅಪಾಯ ಇಲ್ಲ ಎಂದ ತಜ್ಞರು

Exit mobile version