ಬೆಂಗಳೂರು: ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಣೆಗಾಗಿ ಡಕಾಯಿತಿ ಪ್ರಕರಣದಲ್ಲಿ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಸಂಘಟನೆಯ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ. ತಲಾ 7 ವರ್ಷ ಸಜೆ ಹಾಗೂ ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ(NIA Special court) ತೀರ್ಪು ನೀಡಿದೆ.
ಆರೋಪಿಗಳಾದ ನಜೀರ್ ಶೇಖ್‌ಗೆ(೨೫) 7 ವರ್ಷ ಜೈಲುಶಿಕ್ಷೆ, 48 ಸಾವಿರ ರೂಪಾಯಿ ದಂಡ, ಹಬೀಬುರ್ ರಹಮಾನ್‌ಗೆ(೨೮) 7 ವರ್ಷ ಜೈಲು, 49 ಸಾವಿರ ರೂಪಾಯಿ ದಂಡ ಹಾಗೂ ಮೊಸರಫ್ ಹುಸೈನ್‌ಗೆ(೨೨) 7 ವರ್ಷ ಜೈಲು ಹಾಗೂ 41 ಸಾವಿರ ರೂಪಾಯಿ ದಂಡದ ಶಿಕ್ಷೆ ನೀಡಲಾಗಿದೆ.
ಆರೋಪಿಗಳು ನಿಷೇಧಿತ ಜೆಎಂಬಿ ಸಂಘಟನೆಯ ಸದಸ್ಯರಾಗಿದ್ದಾರೆ. ಇವರಲ್ಲಿ ಹಬೀಬುರ್ ರೆಹಮಾನ್ ಎಂಬಾತ 2014ರ ಬುರ್ದ್ವಾನ್ ಸ್ಫೋಟ ಪ್ರಕರಣದಲ್ಲಿಯೂ ಭಾಗಿಯಾಗಿದ್ದ. 2018ರಲ್ಲಿ ಬೆಂಗಳೂರಿನ ವಿವಿಧೆಡೆ ದರೋಡೆ ಮಾಡಿದ್ದ ಆರೋಪಿಗಳು, ಅತ್ತಿಬೆಲೆಯ 2, ಕೆ.ಆರ್.ಪುರಂ, ಕೊತ್ತನೂರಿನ ತಲಾ 1 ಮನೆಗಳಲ್ಲಿ ದರೋಡೆ ಮಾಡಿದ್ದರು. ಡಕಾಯಿತಿ ಹಣದಲ್ಲಿ ಸ್ಫೋಟಕ ತಯಾರಿಕೆಗೆ ಬೇಕಾಗುವ ಸಾಮಗ್ರಿಯನ್ನು ಇವರು ಖರೀದಿಸುತ್ತಿದ್ದರು. 2019ರಲ್ಲಿ ಚಿಕ್ಕಬಾಣಾವರ ಬಳಿ ಮನೆಯೊಂದರಲ್ಲಿ ಹಬೀಬುರ್‌ನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ | Video| ಶ್ರದ್ಧಾ ಹತ್ಯೆ ಮಾದರಿಯಲ್ಲೇ ನಡೆದ ಮರ್ಡರ್; ಪತಿಯನ್ನು ಕೊಂದು, 22 ಪೀಸ್ಗಳಾಗಿ ಕತ್ತರಿಸಿ ಫ್ರಿಜ್ನಲ್ಲಿಟ್ಟ ಮಹಿಳೆ!