ಬೆಂಗಳೂರು: ಕನ್ನಡದ ಮೊದಲ ಮೋಷನ್ ಕ್ಯಾಪ್ಚರ್ ಚಿತ್ರ “ಸಾರಿ” (ಕರ್ಮ ರಿಟರ್ನ್) ನಿರ್ದೇಶಕ ಬ್ರಹ್ಮ ಅವರಿಗೆ ಬೆಂಗಳೂರು ಮೂಲದ ಸಂಸ್ಥೆಯೊಂದು ನೀಡುವ “ದಾದಾಸಾಹೇಬ್ ಫಾಲ್ಕೆ ಅಚೀವ್‌ಮೆಂಟ್ 2024 ಪ್ರಶಸ್ತಿ” (Dadasaheb Phalke Achievement Award) ಲಭಿಸಿದೆ.
ನಿರ್ದೇಶಕ ಬ್ರಹ್ಮ ಅವರಿಗೆ ಬೆಂಗಳೂರಿನ ಸಂಸ್ಥೆಯೊಂದು ಭಾರತೀಯ ಚಿತ್ರರಂಗದ ಮೇರು ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಇದೇ ಪ್ರಥಮ ಬಾರಿಗೆ ಸ್ಥಾಪಿಸಿರುವ ಪ್ರಶಸ್ತಿಯನ್ನು ನೀಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಿರುವ ಸಿನಿಮಾ ‘ಸಾರಿ’ (ಕರ್ಮ ರಿಟರ್ನ್ಸ್). ಬ್ರಹ್ಮ ಈ ಚಿತ್ರದ ನಿರ್ದೇಶಕ. ರಾಗಿಣಿ ದ್ವಿವೇದಿ ಹಾಗೂ ಅಫ್ಜಲ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ನಿರ್ದೇಶಕರಿಗೆ ಪ್ರಶಸ್ತಿ ಬಂದಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿ, ಅವರನ್ನು ಅಭಿನಂದಿಸಿದೆ. ಈ ಹಿಂದೆ 2014ರಲ್ಲಿ ತೆರೆಕಂಡ ಸೌಂದರ್ಯ ರಜನಿಕಾಂತ್ ನಿರ್ದೇಶನದ, ರಜನಿಕಾಂತ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದ “ಕೊಚಾಡಿಯನ್” ಭಾರತದ ಮೊದಲ ಮೋಷನ್ ಕ್ಯಾಪ್ಚರ್ ಚಿತ್ರವಾಗಿತ್ತು.
ಇದನ್ನೂ ಓದಿ: Job Alert: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ, ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಿ
ಕನ್ನಡದಲ್ಲಿ “ಸಾರಿ” (ಕರ್ಮ ರಿಟರ್ನ್) ಈ ವಿಶೇಷ ತಂತ್ರಜ್ಞಾನ ಬಳಸಿಕೊಂಡು ಮಾಡಿರುವ ಮೊದಲ ಚಿತ್ರವಾಗಿದೆ. “ಸಾರಿ” ಚಿತ್ರ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಾಗಿದೆ.