ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯ ಟಿವಿ ಶೋ ʼಡಾನ್ಸಿಂಗ್ ಚಾಂಪಿಯನ್ʼ ಫಿನಾಲೆ ಕಾರ್ಯಕ್ರಮ ಮುಗಿದಿದೆ. ಚಾಂಪಿಯನ್ ಟ್ರೋಫಿಯನ್ನು ಅನ್ಮೋಲ್ ಹಾಗೂ ಆದಿತ್ಯ ಪಡೆದಿದ್ದಾರೆ. ಈ ಬಾರಿ ವಿಶೇಷ ಅಂದರೆ ನಟ ಪುನೀತ್ ರಾಜ್ಕುಮಾರ್ ಅವರ ನೆನಪಿಗೆ ವಿಶೇಷ ಕಾರ್ಯಕ್ರಮಕ್ಕೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ವಿಶೇಷ ಟ್ರೋಫಿಯನ್ನು ನೀಡಿದ್ದಾರೆ.
ಇದನ್ನೂ ಓದಿ | ಪುನೀತ್ ರಾಜಕುಮಾರ್ ಪೋಟೋ ಸಮ್ಮುಖದಲ್ಲಿ ಮದುವೆಯಾದ ಜೋಡಿ
ಈ ಬಾರಿಯ ವಿಶೇಷ ಅಂದರೆ ಪುನೀತ್ ಅವರ ರೀತಿಯಲ್ಲೇ ಕಾಣುವ ಟ್ರೋಫಿ ನೀಡುವುದರ ಜತೆ ಜತೆಗೆ ₹5 ಲಕ್ಷ ಬಹುಮಾನವನ್ನು ವಿಜೇತರಿಗೆ ನೀಡಿದ್ದಾರೆ. ಅಂದಹಾಗೆ ಅನ್ಮೋಲ್ ಅವರು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಟ ಧ್ರುವ ಸರ್ಜಾ, ಪ್ರಶಸ್ತಿ ಪ್ರದಾನ ಮಾಡಲು ಆಗಮಿಸಿ, ‘ಪೊಗರು’ ಸಿನಿಮಾ ಹಾಡಿಗೆ ಕುಣಿದರು. ಚಂದನಾ-ಅಕ್ಷತಾ, ಅದಿತಿ-ಸಾಗರ್, ಆರ್ಜುನ್-ರಾಣಿ, ಆರಾಧ್ಯಾ-ನಿವೇದಿತಾ ಮತ್ತು ಅನ್ಮೋಲ್-ಆದಿತ್ಯ ಇವರು ಫಿನಾಲೆಯಲ್ಲಿದ್ದರು.
ಪುನೀತ್ ರಾಜ್ಕುಮಾರ್ ಹಾಗೂ ಕಲರ್ಸ್ ಕನ್ನಡ ವಾಹಿನಿಗೆ ಕನ್ನಡ ಕೋಟ್ಯಾಧಿಪತಿಯಿಂದಲೂ ಒಳ್ಳೆಯ ನಂಟಿತ್ತು.
ಇದನ್ನೂ ಓದಿ | ʼಅಪ್ಪುʼಗೆ ಮರಣೋತ್ತರ ಪ್ರಶಸ್ತಿ ; ಗದ್ಗದಿತರಾದ ಅಶ್ವಿನಿ