Site icon Vistara News

Deepika Das: ಸದ್ದಿಲ್ಲದೆ ಹಸೆಮಣೆ ಏರಿದ ನಟಿ ದೀಪಿಕಾ ದಾಸ್; ಮದುವೆ ಫೋಟೊಸ್‌ ವೈರಲ್‌

Deepika Das

ಬೆಂಗಳೂರು: ನಾಗಿಣಿ ಹಾಗೂ ಬಿಗ್‌ಬಾಸ್‌ ಖ್ಯಾತಿಯ ನಟಿ ದೀಪಿಕಾ ದಾಸ್‌ (Deepika Das) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ಸಿನಿಮಾ ಹಾಗೂ ಸೀರಿಯಲ್‌ಗಳಿಂದ ದೂರ ಉಳಿದಿದ್ದ ನಟಿ, ಸದ್ದಿಲ್ಲದೆ ಹಸೆಮಣೆ ಏರಿದ್ದು, ಮದುವೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಗಾಗ ಬೋಲ್ಡ್‌ ಫೋಟೊಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸುತ್ತಿದ್ದ ದೀಪಿಕ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೊಸ್‌ ಹರಿದಾಡುತ್ತಿವೆ. Mr. Mr D ಅಂತ ಕ್ಯಾಪ್ಶನ್ ಕೊಡುವ ಮೂಲಕ ಮದುವೆ ಫೋಟೊಗಳನ್ನು ಹಂಚಿಕೊಂಡಿರುವ ಬಿಗ್ ಬಾಸ್ ಸುಂದರಿ, ಹುಡುಗ ಯಾರು ಎನ್ನುವ ಗುಟ್ಟು ರಟ್ಟು ಮಾಡಿಲ್ಲ.

ನಾಗಿಣಿ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ದೀಪಿಕಾ ದಾಸ್‌ ಅವರು ಬೀಚ್‌ ಸೈಡ್‌ ವೆಡ್ಡಿಂಗ್‌ ಫೋಟೊಶೂಟ್‌ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್‌ ಸೀಸನ್‌ 9ರಲ್ಲಿ ಶೈನ್‌ ಶೆಟ್ಟಿ ಗೆಲುವು ಪಡೆದಿದ್ದರು. ಶೈನ್‌ ಶೆಟ್ಟಿ ಮತ್ತು ದೀಪಿಕಾ ದಾಸ್‌ ಆತ್ಮೀಯರಾಗಿದ್ದರು. ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಇತ್ತು. ಆದರೆ, ಈಗ ಮದುವೆಯ ಫೋಟೊ ಹಂಚಿಕೊಂಡಿದ್ದಾರೆ. ಜತೆಗೆ “ಮಿಸ್ಟರ್‌ ಆಂಡ್‌ ಮಿಸ್‌ ಡಿ,  ವೆಲ್‌ಕಂ ಟು ಅಡ್ವೇಂಚರ್‌ ವರ್ಲ್ಡ್‌” ಎಂದು ಬರೆದಿರುವ ಕ್ಯಾಪ್ಷನ್‌ ಹಲವು ಸಂದೇಹಗಳನ್ನು ಹುಟ್ಟುಹಾಕಿದೆ.

ಇತ್ತೀಚೆಗೆ ಸಿನಿಮಾ ಹಾಗೂ ಸೀರಿಯಲ್‌ನಿಂದ ದೂರ ಉಳಿದಿದ್ದ ನಾಗಿಣಿ, ಸದ್ದಿಲ್ಲದೆ ಮದ್ವೆಯಾಗುವುದರ ಮೂಲಕ ಪಡ್ಡೆ ಹುಡುಗರಿಗೆ ಶಾಕ್ ಕೊಟ್ಟಿದ್ದಾರೆ. ಆದರೆ, ಇದು ನಿಜವಾದ ಮದುವೆಯೇ ಅಥವಾ ಯಾವುದಾದರೂ ಜಾಹೀರಾತಿನ ಫೋಟೊಶೂಟ್‌ ಆಗಿರಬಹುದಾ ಎಂಬ ಅನುಮಾನಗಳು ಮೂಡಿವೆ.

ಇತ್ತೀಚೆಗೆ ಬಿಗ್‌ ಬಾಸ್‌ ವಿನ್ನರ್ ಕಾರ್ತಿಕ್ ಮಹೇಶ್‌ ಮತ್ತು ನಮ್ರತಾ ಗೌಡ ಅವರ ಮದುವೆ ಫೋಟೊಗಳು ವೈರಲ್‌ ಆಗಿದ್ದವು. ಆದರೆ, ನಂತರ ಅದು ಜ್ಯುವೆಲ್ಲರಿ ಜಾಹೀರಾತಿಗಾಗಿ ನಡೆಸಿದ ಫೋಟೊಶೂಟ್‌ ಎಂದು ತಿಳಿದುಬಂದಿತ್ತು. ಅದೇ ರೀತಿ ನಟಿ ದೀಪಿಕಾ ದಾಸ್‌ ಅವರು ಕೂಡ ಜಾಹೀರಾತಿಗಾಗಿ ಮದುಮಗಳು ಆಗಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ | Karthik-Namratha: ಹಸೆಮಣೆ ಮೇಲೆ ಕಾರ್ತಿಕ್‌-ನಮ್ರತಾ: ಸಂಗೀತಾಗೆ `ಕರಿಮಣಿ ಮಾಲೀಕ’ ಯಾರು?

ವರನ ಕೈಯನ್ನು ಹಿಡಿದು ದೀಪಿಕಾ ದಾಸ್ ಅವರು ತುಂಬಾ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ. ಬೀಚ್‌ ಸೈಡ್‌ನಲ್ಲಿ ಮದುವೆ ಮಂಟಪ, ಸಾಂಪ್ರದಾಯಿಕ ಶೈಲಿಯಲ್ಲಿ ರೆಡಿಯಾಗಿರುವ ದೀಪಿಕಾ ಅವರ ಲುಕ್ ಆಕರ್ಷಕವಾಗಿದೆ. ಆದರೆ, ಫೋಟೊಗಳನ್ನು ನೋಡಿ ಅಭಿಮಾನಿಗಳು ಮಾತ್ರ ಗೊಂದಲದಲ್ಲಿದ್ದಾರೆ.

Exit mobile version