ಬೆಂಗಳೂರು: ಮುಂಬೈನ ದೇಶ್ ಅಪ್ನಾಯೆನ್ ಸಹಯೋಗ್ ಫೌಂಡೇಶನ್‌ನ ಆ್ಯಕ್ಟಿಜೆನ್ ಕ್ಲಬ್ ವತಿಯಿಂದ ಫೆಬ್ರವರಿ 20ರಂದು ʼ1ನೇ ದೇಶ್ ಅಪ್ನಾಯೆನ್ ವಾರ್ಷಿಕ ಪ್ರಶಸ್ತಿʼ (1st Desh Apnayen Annual Awards) ಪ್ರದಾನ ಸಮಾರಂಭವನ್ನು (Award ceremony) ನಗರದ ಬಿಟಿಎಂ ಲೇಔಟ್ 2ನೇ ಹಂತದ ಬಿಟಿಎಂ ಕೇಂದ್ರ ಗ್ರಂಥಾಲಯ ಹತ್ತಿರದ ಇಂಡಿಯನ್ ವಾಟರ್ ವರ್ಕ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮಂಗಳವಾರ ಬೆಳಗ್ಗೆ 9ರಿಂದ 1.30ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ DSERT ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ.ಕೆ.ವಿ, ಗೌರವ ಅತಿಥಿಗಳಾಗಿ ಬೆಂಗಳೂರು ದಕ್ಷಿಣದ ಡಿಡಿಪಿಐ ನಿಂಗರಾಜಪ್ಪ .ಕೆ.ಬಿ, ಬೆಂಗಳೂರು ದಕ್ಷಿಣ ವಿಭಾಗ 3ರ ಬಿಇಒ ಡಾ. ಆರ್.ಎನ್.ಶಶಿಕಲಾ, ವಿಶೇಷ ಆಹ್ವಾನಿತರಾಗಿ ಬಿಆರ್‌ಸಿ ಚಂದಪ್ಪ ನಾಯಕ, ಎಸ್‌ಪಿಡಿ, ಎನ್‌ಎಸ್‌ಎಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ದೇಶ್ ಅಪ್ನಾಯೆನ್ ಸಹಯೋಗ್ ಫೌಂಡೇಶನ್ ಸ್ಥಾಪಕ ಮತ್ತು ಮಾರ್ಗದರ್ಶಕ ವಲ್ಲಭ ಬನ್ಶಾಲಿ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | National Horticulture Fair 2024: ಹೆಸರಘಟ್ಟದಲ್ಲಿ ಮಾ. 5 ರಿಂದ 7 ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ