Site icon Vistara News

ಪರವಶಗೊಳಿಸುವ ಸಂಗೀತ, ಮಿಕ್ಸಾಲಜಿಯಿಂದ ಮೋಡಿ ಮಾಡಿದ ’ದೇವರ್ಸ್ ಸ್ಟೇ ಕ್ಯೂರಿಯಸ್ ಹೆಚ್ಕ್ಯು’

ಬೆಂಗಳೂರು: ನಗರದಲ್ಲಿ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ʼದೇವರ್ಸ್ ಸ್ಟೇ ಕ್ಯೂರಿಯಸ್ ಹೆಚ್ಕ್ಯುʼ ತನ್ನ ವಿಶಿಷ್ಟವಾದ ಬಹು ಸಂವೇದಿ ವಸ್ತು ಸಂಗ್ರಹ ಮತ್ತು ಪ್ರದರ್ಶನಗಳಿಂದ ಸಿಲಿಕಾನ್‌ ಸಿಟಿಯ ಜನರ ಗಮನ ಸೆಳೆಯಿತು.

ಈ ಅನುಭವದಲ್ಲಿ ವಿಸ್ಮಯಾತ್ಮಕ ಪ್ರದರ್ಶನ ಕಲೆ, ದೃಶ್ಯ ವೈಭವಗಳಿದ್ದವು ಮತ್ತು ಮನಸೂರೆಗೊಳ್ಳುವ ಶ್ರವಣಾನುಭವಗಳಿದ್ದವು. ಜತೆಗೆ, ಕಾರ್ಯಾಗಾರದಲ್ಲಿ ಸ್ವಯಂ-ಅನುಭವಗಳನ್ನು ಹೊಂದಬಹುದಾಗಿತ್ತು. ಸ್ಟ್ಯಾಂಡ್-ಅಪ್ ಕಾಮಿಡಿ ಕೂಡ ಇತ್ತು. ಇವೆಲ್ಲಾ ಎಲ್ಲರ ಅಂತಃಕರಣವನ್ನು ಸೆರೆಹಿಡಿಯುವಂತಿದ್ದವು.

ವಿನೂತನ ಅನುಭವಗಳಿಂದ ಕೂಡಿದ್ದ ಒಂದಷ್ಟು ಅತ್ಯದ್ಭುತ ವಸ್ತುಗಳ ಸಂಗ್ರಹ ಮತ್ತು ಪ್ರದರ್ಶನಗಳನ್ನು ಸವಿಯಲೆಂದು ಬಂದಿದ್ದ ಕಲಾಭಿಮಾನಿಗಳಿಂದ ಹಿಡಿದು ಸಂಗೀತ ಪ್ರೇಮಿಗಳವರೆಗೆ ಎಲ್ಲ ರೀತಿಯ ಉತ್ಸಾಹಿಗಳು ದೇವರ್ಸ್ ಸ್ಟೇ ಕ್ಯೂರಿಯಸ್ ಹೆಚ್ಕ್ಯು ಗೆ ಬಂದಿಳಿದಿದ್ದರು.

ಇದನ್ನೂ ಓದಿ | Ethnic Footwear Fashion: ಹಂಗಾಮ ಎಬ್ಬಿಸಿದ ದೇಸಿ ಲುಕ್‌ ನೀಡುವ ಎಥ್ನಿಕ್‌ ಫುಟ್‌ವೇರ್ಸ್

ಜಾನಿ ಗಂಟಾ ಅವರ ‘SYZYGY’ ಮತ್ತು ಬಿಗ್‌ಫ್ಯಾಟ್ ಮತ್ತು ಮೈಲ್ಸ್‌ನ ‘OVERTURE’ ಎಂಬ ಎರಡು ಪ್ರಮುಖ ಅನುಭವಾತ್ಮಕ ಶ್ರವಣ-ದೃಶ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಬೆರಗುಗೊಳಿಸಿದವು. ಮೊದಲನೆಯದು ಗಂಟಾ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ನಿರೂಪಿಸಿತು. ಅವರ ವೈಶಿಷ್ಟ್ಯವಾದ ರೆಟ್ರೊ-ಭವಿಷ್ಯಗಳ ಸಂಯೋಜನೆ ಬೆರಗುಗೊಳಿಸುವ ರೀತಿಯಲ್ಲಿತ್ತು. ಇನ್ನು ”ಒವರ್ಚರ್” ಹೊಸ ಮಾಧ್ಯಮ ಕಲೆ ಮತ್ತು ಗ್ರಾಫಿಕ್ ವಿನ್ಯಾಸದ ಸಹಯೋಗದೊಂದಿಗೆ ನಿರ್ಮಿಸಲಾದ 14-ನಿಮಿಷಗಳ ಶ್ರವಣ-ದೃಶ್ಯ ಮೇರುಕೃತಿಯಾಗಿತ್ತು. ಈ ತಂತ್ರಜ್ಞಾನ ಆಧರಿತ ಕಲಾ ಪ್ರದರ್ಶನ, ಪ್ರೇಕ್ಷಕರನ್ನು ಮುಗ್ಧಗೊಳಿಸಿತು.

ಸಂಜೆಯ ಆಕರ್ಷಕ ಪ್ರದರ್ಶನಗಳಲ್ಲಿ ಡಿಜೆ ಮೂರ್ತೋವಿಕ್, ನರ್ತಕಿ ಅನಾಹಿತ ಚಲಿಹಾ ಮತ್ತು ಗಾಯಕಿ ಗೋಪಿಕಾ ಜೈರಾಮ್ ಅವರ, ಪ್ರೇಕ್ಷಕರನ್ನು ಬೇರೊಂದೇ ಲೋಕಕ್ಕೆ ಒಯ್ಯುವಂತಹ ಸಮಕಾಲೀನ ರಂಗಭೂಮಿ ಪ್ರಯೋಗ “ಸಸ್ಟೇನ್” ಕೂಡ ಸೇರಿತ್ತು. ಇದೊಂದು, ಪರಿಸರ-ಮಾನವೀಯತೆಗಳ ನಡುವಿನ ಸೂಕ್ಷ್ಮ ಸಂಬಂಧವನ್ನು ಅನ್ವೇಷಿಸುವ ಸಮಕಾಲೀನ ನಾಟಕ.

ಇನ್ನು ಹೊಸಪೀಳಿಗೆಯ ಸಂಗೀತ ಪ್ರತಿಭೆಗಳಾದ ಗಾಯಕ ಮತ್ತು ವಿಷಯ ರಚನೆಕಾರ ಐಶ್ವರ್ಯಾ ಸುರೇಶ್ ಬಿಂದ್ರಾ (ದಿ ಸ್ಟೇಜ್ ಎಸ್ 3 ಖ್ಯಾತಿಯ), ಮತ್ತು ಶಾಸ್ತ್ರೀಯ ಸಂಗೀತಗಾರ್ತಿ ಗೌರಿ ಭಟ್ ಇವರಿಬ್ಬರ, ಪ್ರತ್ಯೇಕವಾಗಿ ಮತ್ತು ಜೊತೆಯಾಗಿ ಪ್ರದರ್ಶಿಸಿದ ವಿಶಿಷ್ಟವಾದ ಅಕೂಸ್ಟಿಕ್ ಸೆಟ್ಸ್ ನೋಡುಗರ ಮನಸೂರೆಗೊಳಿಸಿದವು.

ದೇವರ್ಸ್ ಮಿಕ್ಸಾಲಜಿ ಲ್ಯಾಬ್

ಇವುಗಳಲ್ಲಿ ಅತಿಥಿಗಳನ್ನೆಲ್ಲ ಅಕ್ಷರಶಃ ಹಿಡಿದಿಟ್ಟುಕೊಂಡ ಕಾರ್ಯಕ್ರಮವೆಂದರೆ ದೇವರ್ಸ್ ಮಿಕ್ಸಾಲಜಿ ಲ್ಯಾಬ್. ಇದೊಂದು, ತಮ್ಮ ತಮ್ಮ ನೆಚ್ಚಿನ ಕಾಕ್‌ಟೇಲ್‌ಗಳನ್ನು ತಾವೇ, ವೃತ್ತಿಪರ ಮಟ್ಟದಲ್ಲಿ ಸಿದ್ಧಪಡಿಸಿಕೊಳ್ಳುವುದನ್ನು ಕಲಿಸುವ ಪ್ರಯೋಗ. ಪರಿಣತ ಮಿಕ್ಸಾಲಜಿಸ್ಟ್ ಹಾಗೂ ದೇವರ್ಸ್ ಬ್ರ್ಯಾಂಡ್ ಅಂಬಾಸಿಡರ್‌ಗಳಾದ ಮೈಲ್ಸ್ ಕ್ಯಾರೊಲ್ ಮತ್ತು ಜೇಮ್ಸ್ ಕಾರ್ಡಿನರ್ ಮಾರ್ಗದರ್ಶನದಲ್ಲಿ ಅತಿಥಿಗಳು ತಮ್ಮೊಳಗೆ ಸುಪ್ತವಾಗಿದ್ದ ಕಾಕ್‌ಟೈಲ್ ರಸಿಕನನ್ನು ತೃಪ್ತಿಪಡಿಸಲು ಮತ್ತು ಸಂವಾದಾತ್ಮಕ ಕಾರ್ಯಾಗಾರದ ಮೂಲಕ ಹೊಸದೊಂದು ಕೌತುಕಮಯ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಯಿತು.

ಅಲ್ಲಿ ಹಾಸ್ಯಕ್ಕೂ ಕೊರತೆ ಇರಲಿಲ್ಲ. ಹೆಸರಾಂತ ಹಾಸ್ಯಜ್ಞ ಮತ್ತು ಯೂಟ್ಯೂಬರ್, ರಾಹುಲ್ ಸುಬ್ರಮಣಿಯನ್ ಎಲ್ಲರನ್ನೂ ನಕ್ಕು-ನಲಿಸಿದರು. ಸೂಕ್ಷ್ಮಗಮನಿಕೆ ಮತ್ತು ದೈನಂದಿನ ಜೀವನದಲ್ಲಿ ಬರುವ ಅಸಂಬದ್ಧತೆಗಳಲ್ಲಿನ ಹಾಸ್ಯಕ್ಕೆ ಹೆಸರುವಾಸಿಯಾಗಿರುವ ಲವಲವಿಕೆಯ ರಾಹುಲ್, ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದರು.

ಇದನ್ನೈ ಓದಿ | Graphic Eye Makeup: ಕಂಗಳ ಸೌಂದರ್ಯಕ್ಕೆ ಪ್ರಯೋಗಾತ್ಮಕ ಗ್ರಾಫಿಕ್‌ ಐ ಮೇಕಪ್‌

ದೇವರ್ಸ್ ಸ್ಟೇ ಕ್ಯೂರಿಯಸ್ ಹೆಚ್ಕ್ಯು ಪ್ರಸ್ತುತಪಡಿಸಿದ Xperiences, ಸಭಿಕರನ್ನು ಅದ್ಭುತ ಕಲಾ ಜಗತ್ತೊಂದಕ್ಕೆ ಒಯ್ದುಬಿಟ್ಟಿತು. ಅವರ ಕುತೂಹಲದ ವಿವಿಧ ಆಯಾಮಗಳನ್ನು ಪ್ರಚೋದಿಸಿ, ಕಲೆ- ಅನುಭವಗಳಲ್ಲಿ ಹೊಸದೊಂದು ಆಳವನ್ನು ಅನ್ವೇಷಿಸುವಂತೆ ಮಾಡಿತು. ಒಟ್ಟಾರೆ ಈ ಕಾರ್ಯಕ್ರಮ ಬಹು ವೇದಿಕೆಗಳನ್ನು ಮತ್ತು ರಚನೆಗಳನ್ನು ಒಳಗೊಂಡಿತ್ತು. ಇದು ನಿಜಕ್ಕೂ ಬಹು-ಸಂವೇದನಾ ಶೀಲ ಮಾತ್ರವಲ್ಲದೆ ಭಾಗವಹಿಸಿದ ಎಲ್ಲರ ಚಿತ್ತಾಪಹಾರಿಯಾಗಿತ್ತು.

Exit mobile version