Site icon Vistara News

Empower Her Exhibition: ಬೆಂಗಳೂರಿನಲ್ಲಿ ಫೆ.24ರಂದು ಮಹಿಳಾ ಉದ್ದಿಮೆದಾರರಿಂದ ವಸ್ತು ಪ್ರದರ್ಶನ

Empower Her Exhibition

ಬೆಂಗಳೂರು: ಮಹಿಳಾ ಉದ್ಯಮಿಗಳು, ವ್ಯಾಪಾರಿಗಳ ಸಬಲೀಕರಣ ಉದ್ದೇಶದಿಂದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ವತಿಯಿಂದ ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಫೆಬ್ರವರಿ 24ರಂದು ಬೆಳಗ್ಗೆ 10ರಿಂದ ಸಂಜೆ 5ಗಂಟೆವರೆಗೆ ʼಮಹಿಳಾ ಉದ್ದಿಮೆದಾರರಿಂದ ವಸ್ತು ಪ್ರದರ್ಶನʼವನ್ನು (Empower Her Exhibition) ನಗರದ ಕೆ.ಜಿ.ರಸ್ತೆಯ ಎಫ್‌ಕೆಸಿಸಿಐ ಕ್ಯಾಂಪಸ್‌ನಲ್ಲಿ ಅಯೋಜಿಸಲಾಗಿದೆ.

ವಸ್ತು ಪ್ರದರ್ಶನದಲ್ಲಿ ಸಿಹಿ ತಿನಿಸು ಸೇರಿ ವಿವಿಧ ಬಗೆಯ ತಿಂಡಿಗಳು, ಮಸಾಲೆ ಪದಾರ್ಥಗಳು, ಮಕ್ಕಳು, ಮಹಿಳೆ, ಪುರುಷರ ಉಡುಪುಗಳು, ಸಾವಯವ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳು, ರಿಯಲ್ ಎಸ್ಟೇಟ್ ಮತ್ತು ವಸತಿ ಯೋಜನೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಕರಕುಶಲ ವಸ್ತುಗಳು, ಫ್ಯಾಷನ್&ಅಕ್ಸೆಸರೀಸ್, ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳು, ಕಾರ್ಪೊರೇಟ್ ಉಡುಗೊರೆ ಮತ್ತು ಸೇವೆಗಳು, ಆಹಾರ ಉತ್ಪನ್ನ, ಆಹಾರ ಮಳಿಗೆಗಳು ಇರಲಿವೆ.

ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ, ಹಿರಿಯ ಉಪಾಧ್ಯಕ್ಷ ಎಂ.ಜಿ.ಬಾಲಕೃಷ್ಣ, ಉಪಾಧ್ಯಕ್ಷೆ ಉಮಾ ರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಾಲ್‌ ರೆಡ್ಡಿ, ಮಹಿಳಾ ಉದ್ಯಮಿಗಳ ಸಮಿತಿ ಸಲಹೆಗಾರ ಹಾಗೂ ಮಾಜಿ ಅಧ್ಯಕ್ಷ ಎಂ.ಸಿ. ದಿನೇಶ್, ಮಹಿಳಾ ಉದ್ಯಮಿಗಳ ಸಮಿತಿ ಅಧ್ಯಕ್ಷೆ ತೇಜಶ್ರೀ ಬಿ.ಎ. ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | National Horticulture Fair 2024: ಹೆಸರಘಟ್ಟದಲ್ಲಿ ಮಾ. 5 ರಿಂದ 7 ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ

ಈ ಬಗ್ಗೆ ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಪ್ರತಿಕ್ರಿಯಿಸಿ, ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಎಫ್‌ಕೆಸಿಸಿಐ ವತಿಯಿಂದ 2024ರ ಫೆಬ್ರವರಿ 24ರಂದು ಬೆಂಗಳೂರಿನ ಕೆ.ಜಿ ರಸ್ತೆಯ ಎಫ್‌ಕೆಸಿಸಿಐ ಕ್ಯಾಂಪಸ್‌ನಲ್ಲಿ ನಡೆಯಲಿರುವ ಮಹಿಳಾ ಉದ್ದಿಮೆದಾರರ ವಸ್ತು ಪ್ರದರ್ಶನದಲ್ಲಿ ಹಲವಾರು ವೈವಿಧ್ಯಮಯ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ. ಇದು ಉಚಿತ ಪ್ರದರ್ಶನವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲಾಭ ಪಡೆದುಕೊಳ್ಳಬೇಕು. ಹಾಗೂ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಬೇಕು ಎಂದು ತಿಳಿಸಿದ್ದಾರೆ.

Exit mobile version