Site icon Vistara News

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nadaprabhu Kempegowda

ಬೆಂಗಳೂರು (bengaluru) ಹೆಸರೆತ್ತಿದ್ದ ತಕ್ಷಣ ನೆನಪಾಗುವುದು (Essay on Kempegowda in Kannada) ನಾಡಪ್ರಭು ಕೆಂಪೇಗೌಡರು ಆಧುನಿಕ (kempegowda jayanthi) ಬೆಂಗಳೂರಿನ ಮೂಲ ಶಿಲ್ಪಿ! ನಾಡಪ್ರಭು ಕೆಂಪೇಗೌಡ (Nadaprabhu Kempegowda). ಬೆಂಗಳೂರಿನ ನಿರ್ಮಾತೃ ಆಗಿರುವ ಇವರು ವಿಜಯನಗರ ಸಾಮ್ರಾಜ್ಯದಲ್ಲಿ (vijayanagara empire) ಮುಖ್ಯಸ್ಥರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಗೌಡ ವಂಶಸ್ಥರಾದ ಇವರು ಆ ಕಾಲದಲ್ಲಿ ಅತ್ಯಂತ ವಿದ್ಯಾವಂತ ಯಶಸ್ವಿ ಆಡಳಿತಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದರು.

ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜ್ಯಧಾನಿ ಬೆಂಗಳೂರು ಇವತ್ತು ಕೋಟ್ಯಂತರ ಜನರ ಆಶ್ರಯತಾಣವಾಗಿದೆ. ಇಲ್ಲಿನವರಿಗಿಂತ ಹೆಚ್ಚು ಮಂದಿ ಹೊರಗಿನಿಂದ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅತ್ಯಂತ ಸುರಕ್ಷಿತ, ಸುಂದರ ಮತ್ತು ಸುಸಜ್ಜಿತ ನಗರವಾಗಿ ಬೆಂಗಳೂರು ಬೆಳೆಯಲು ಕೆಂಪೇಗೌಡ ಅವರ ವಿವೇಚನೆ ಮತ್ತು ದೂರದೃಷ್ಟಿಯೇ ಮುಖ್ಯಕಾರಣ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡ ಅವರು 1537ರಲ್ಲೇ ಬೆಂಗಳೂರು ನಗರವನ್ನು ಕಟ್ಟಿದರು. ಬಳಿಕ ಕೆಂಪೇಗೌಡರ ರಾಜಧಾನಿಯನ್ನು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಎಲ್ಲ ಕುಲ ಕಸುಬುದಾರರಿಗೂ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟ ಅವರು, ಬೆಂಗಳೂರು ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಕಾರಣರಾದರು.

ಕೆಂಪೇಗೌಡ ಅವರ ಹಿನ್ನೆಲೆ ಏನು?

ಶಾಸನಗಳ ಪ್ರಕಾರ ನಾಡಪ್ರಭು ಕೆಂಪೇಗೌಡರ ಪೂರ್ವಜರು ತಮಿಳುನಾಡಿನಿಂದ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮಕ್ಕೆ ವಲಸೆ ಬಂದಿದ್ದರು ಎನ್ನಲಾಗುತ್ತದೆ. ರಣಭೈರೇಗೌಡ ಅವರು ಏಳು ತಮ್ಮಂದಿರಾದ ಮಲ್ಲಭೈರೇಗೌಡ, ಸಣ್ಣ ಭೈರೇಗೌಡ, ವೀರೇಗೌಡ, ಮರೀಗೌಡ, ಗಿಡ್ಡೇಗೌಡ, ತಮ್ಮೇಗೌಡ ಮತ್ತು ಗಿಟ್ಟಪ್ಪಗೌಡ ಅವರೊಂದಿಗೆ ಮಕ್ಕಳು ಜಯಗೌಡ, ಸಣ್ಣ ಭೈರೇಗೌಡ, ಹಾವಳಿ ಬೈರೇಗೌಡ ಅವರೊಂದಿಗೆ ಬಂದು ಇಲ್ಲಿ ನೆಲೆಯಾದರು. ತಮ್ಮ ಒಬ್ಬಳೇ ಮಗಳು ದೊಡ್ಡಮ್ಮಳನ್ನು ಆ ಪ್ರಾಂತ್ಯದ ಯಾಕಿಲ ದೊರೆ ಸೆಲ್ವ ನಾಯಕ ಸೊಸೆ ಮಾಡಿಕೊಂಡಿದ್ದರಿಂದ ಅವರೆಲ್ಲ ಇಲ್ಲಿಗೆ ಬಂದರು ಎನ್ನಲಾಗುತ್ತದೆ.

ಮಾಗಡಿ ಕೆಂಪೇಗೌಡ, ಯಲಹಂಕ ಕೆಂಪೇಗೌಡ, ನಾಡಪ್ರಭು ಕೆಂಪೇಗೌಡರು ಬೇರೆ ಬೇರೆಯೇ ಅಥವಾ ಎಲ್ಲರೂ ಒಬ್ಬರೇ ಎನ್ನುವ ಪ್ರಶ್ನೆಗಳು ಈಗಲೂ ಇವೆ. ಕ್ರಿ.ಶ.1420ರಲ್ಲಿ ಅಧಿಕಾರಕ್ಕೆ ಏರಿದ ಯಲಹಂಕ ಕೆಂಪೇಗೌಡ ರಣಭೈರೇಗೌಡ ಅವರ ಹಿರಿಯ ಮಗ ಜಯಗೌಡ ಎನ್ನಲಾಗುತ್ತದೆ. 13 ವರ್ಷಗಳ ಕಾಲ ಆಡಳಿತ ನಡೆಸಿ 1433ರಲ್ಲಿ ಮೃತಪಟ್ಟಿದ್ದರು. ಅವರಿಗೆ ಇಬ್ಬರು ಮಕ್ಕಳು. ಗಿಡ್ಡೇಗೌಡ ಮತ್ತು ಮಾಚಯ್ಯಗೌಡ. ಹಿರಿಯನಾದ ಗಿಡ್ಡೇಗೌಡ, ತಂದೆಯ ಅನಂತರ ಅಧಿಕಾರಕ್ಕೆ ಏರಿದರು.

ಮನೆದೇವರು ಕರಗದಮ್ಮನಿಗೆ ಕೆಂಪಮ್ಮಹರಕೆ ಹೊತ್ತಿದ್ದರಿಂದ ಹಲವು ವರ್ಷಗಳ ಅನಂತರ ಅವರಿಗೆ ಗಂಡು ಮಗು ಹುಟ್ಟಿದ್ದು, ಆ ಮಗುವಿಗೆ ಕೆಂಪನಂಜೇಗೌಡ ಎಂದು ನಾಮಕರಣ ಮಾಡಲಾಯಿತು. 10 ವರ್ಷಗಳ ಕಾಲ ಆಡಳಿತ ನಡೆಸಿದ ಗಿಡ್ಡೇಗೌಡ ಅವರ ಬಳಿಕ ಅಧಿಕಾರಕ್ಕೆ ಬಂದವರು ಕೆಂಪನಂಜೇಗೌಡ. ಇವರು 70 ವರ್ಷಗಳ ಕಾಲ ಯಲಹಂಕವನ್ನು ಆಳಿದ್ದರು. ಇವರ ಹಿರಿಯ ಪುತ್ರ ನಾಡಪ್ರಭು ಕೆಂಪೇಗೌಡ. ಕೆಂಪೇಗೌಡ ಅವರು ಹೆಸರಘಟ್ಟ ಸಮೀಪದ ಐವರುಕಂದಪುರದ (ಐಗೊಂಡಾಪುರ) ಗುರುಕುಲದಲ್ಲಿದ್ದಾಗ ತಮ್ಮ ನಾಯಕತ್ವದ ಕೌಶಲ್ಯವನ್ನು ಪ್ರದರ್ಶಿಸಿದರು.

ವಿಜಯನಗರದೊಂದಿಗೆ ಸಂಬಂಧ

ಕೆಂಪೇಗೌಡರಿಗೆ 1513ರಲ್ಲಿ ಪಟ್ಟಾಭಿಷೇಕ ನಡೆದಿತ್ತು. ಇವರ ಅಧಿಕಾರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಶ್ರೀಕೃಷ್ಣದೇವರಾಯ ಮತ್ತು ಅಚ್ಯುತರಾಯ ಆಳಿದರು. ಸಣ್ಣ ಗ್ರಾಮವಾಗಿದ್ದ ಬೆಂಗಳೂರನ್ನು ಕೆಂಪೇಗೌಡರು ವಿಸ್ತರಿಸುತ್ತಾ ಬೆಳೆಸಿದರು. ಕ್ರಿ.ಶ.1537ರ ವೇಳೆಗೆ ಬೆಂಗಳೂರಿಗೆ ಕೋಟೆ ಕಟ್ಟಿಸಿ ಅದನ್ನು ರಾಜಧಾನಿಯನ್ನಾಗಿ ಮಾಡಿದರು.

ಬೆಂಗಳೂರಿನ ಕಲ್ಪನೆ

ಕೆಂಪೇಗೌಡ ಅವರು ತಮ್ಮ ಮಂತ್ರಿ ವೀರಣ್ಣ ಮತ್ತು ಸಲಹೆಗಾರ ಗಿಡ್ಡೆ ಗೌಡ ಅವರೊಂದಿಗೆ ಶಿವನಸಮುದ್ರದ ಕಡೆಗೆ ಬೇಟೆಯಾಡಲು ಹೋಗಿದ್ದಾಗ ಬೆಂಗಳೂರನ್ನು ಸುಂದರ ನಗರವನ್ನಾಗಿ ನಿರ್ಮಿಸುವ ಯೋಜನೆ ಮಾಡಿಕೊಂಡರು ಎನ್ನಲಾಗುತ್ತದೆ.

ಹೇಗಿತ್ತು ಪ್ರಾರಂಭ?

ಪ್ರಾರಂಭದಲ್ಲಿ ಕೆಂಪೇಗೌಡ ಅವರು ಬೆಂಗಳೂರು ನಗರದಲ್ಲಿ ಕೋಟೆ, ಕಂಟೋನ್ಮೆಂಟ್, ನೀರಿನ ಜಲಾಶಯಗಳು, ದೇವಾಲಯಗಳು ಮತ್ತು ಎಲ್ಲಾ ವ್ಯಾಪಾರ ಮತ್ತು ವೃತ್ತಿಯ ಜನರು ವಾಸಿಸಲು ಇರಬೇಕು ಎಂದು ಬಯಸಿ ಬೆಂಗಳೂರು- ಪುಣೆ ಹೆದ್ದಾರಿಯಲ್ಲಿ ಬೆಂಗಳೂರಿನಿಂದ 48 ಕಿಲೋಮೀಟರ್ ದೂರದಲ್ಲಿರುವ ಶಿವಗಂಗಾ ಸಂಸ್ಥಾನವನ್ನು ವಶಪಡಿಸಿಕೊಂಡರು. ವಿಜಯನಗರ ಚಕ್ರವರ್ತಿ ಅಚ್ಯುತರಾಯರ ಅನುಮತಿ ಪಡೆದು ಕ್ರಿ.ಶ. 1537ರಲ್ಲಿ ಬೆಂಗಳೂರು ಕೋಟೆ ಮತ್ತು ಪಟ್ಟಣವನ್ನು ನಿರ್ಮಿಸಿದ ಅವರು ಬಳಿಕ ತಮ್ಮ ರಾಜಧಾನಿಯನ್ನು ಯಲಹಂಕದಿಂದ ಹೊಸ ಬೆಂಗಳೂರು ಪೇಟೆಗೆ ಸ್ಥಳಾಂತರಿಸಿದರು.

ಜೈಲು ಸೇರಿದ್ದರು

ಅವಿವಾಹಿತ ಮಹಿಳೆಯರ ಎಡಗೈಯ ಕೊನೆಯ ಎರಡು ಬೆರಳುಗಳನ್ನು ಕತ್ತರಿಸುವ ಪದ್ಧತಿಯನ್ನು ನಿಷೇಧಿಸಿದ ಕೀರ್ತಿ ಇವರದ್ದು. ಬಹುಭಾಷಾ ಮತ್ತು ತೆಲುಗು ಭಾಷೆಯಲ್ಲಿ ಯಕ್ಷಗಾನ ನಾಟಕವಾದ ಗಂಗಾಗೌರಿ ವಿಲಾಸದ ರಚನೆ ಮಾಡಿರುವ ಕೆಂಪೇಗೌಡ ಅವರನ್ನು ನೆರೆಯ ಪಾಳೇಗಾರರ ದೂರಿನ ಬಳಿಕ ಜೈಲಿಗೆ ಹಾಕಲಾಯಿತು ಎನ್ನಲಾಗುತ್ತದೆ. ಐದು ವರ್ಷಗಳ ಕಾಲ ಜೈಲಿನಲ್ಲಿದ್ದ ಅವರು ಬಳಿಕ ಸುಮಾರು 56 ವರ್ಷಗಳ ಕಾಲ ಆಳ್ವಿಕೆ ನಡೆಸಿ 1569ರಲ್ಲಿ ನಿಧನರಾದರು.


54 ಪೇಟೆಗಳ ನಗರ ಬೆಂಗಳೂರು

ಇವತ್ತು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಐಟಿ ಬಿಟಿ ಕಂಪನಿಗಳ ತವರಾಗಿರುವ ಬೆಂಗಳೂರಿನಲ್ಲಿ ಕೆಂಪೇಗೌಡರು 54 ಪೇಟೆಗಳು ನಿರ್ಮಿಸಿದ್ದರೆಂದು ಹೇಳಲಾಗುತ್ತದೆ. ಎಲ್ಲ ಜಾತಿ, ಸಮುದಾಯದವರಿಗೆ ವಾಸಿಸಲು ಯೋಗ್ಯವಾದ ನಗರವನ್ನು ನಿರ್ಮಿಸಿದ ಅವರ ಸರ್ವಧರ್ಮ ಸಹಿಷ್ಣುತೆಯು ಪ್ರಜೆಗಳ ಮನಗೆದ್ದಿತ್ತು.

ಇದನ್ನೂ ಓದಿ: Bengaluru News: ಗೋ ಶಾಲೆಗಳಿಗೆ 51 ಲಕ್ಷ ರೂ. ದೇಣಿಗೆ ನೀಡಿದ ಗೋಪ್ರೇಮಿ ಮಹೇಂದ್ರ ಮುನ್ನೋತ್

ಕೆರೆಗಳ ನಿರ್ಮಾಣ

ನದಿ ಮೂಲಗಳೇ ಇರದ ಬೆಂಗಳೂರಿನ ಜನರ ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಇವರ ಕಾಲದಲ್ಲಿ 347 ದೊಡ್ಡ ಕೆರೆಗಳು, 1200ಕ್ಕೂ ಅಧಿಕ ಸಣ್ಣ ಕೆರೆ-ಕಟ್ಟೆಗಳಿದ್ದವು ಎನ್ನಲಾಗಿದೆ.

ದೇವಾಲಯ ನಿರ್ಮಾಣ

ಕೆಂಪೇಗೌಡರು ಬೆಂಗಳೂರಿನಲ್ಲಿ ಹಲಸೂರಿನ ಸೋಮೇಶ್ವರ, ಗವಿಪುರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ, ಧರ್ಮರಾಯಸ್ವಾಮಿ ದೇವಾಲಯಗಳನ್ನು ನಿರ್ಮಿಸಿದ್ದರು ಎನ್ನಲಾಗುತ್ತದೆ. ಕೇಂಪೇಗೌಡರು ಬೆಂಗಳೂರಿನ ಶಿಲ್ಪಿ ಎಂದು ಇಂದಿಗೂ ಜನಜನಿತರಾಗಿದ್ದಾರೆ.

Exit mobile version