ಬೆಂಗಳೂರು : ಬೆಂಗಳೂರು ಐಟಿ ಹಬ್. ಇಲ್ಲಿಂದ ಅಮೆರಿಕಕ್ಕೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ದಯವಿಟ್ಟು ಇಲ್ಲೊಂದು ಅಮೆರಿಕದ ರಾಯಭಾರ ಕಚೇರಿ ಸ್ಥಾಪಿಸಿ. ಹೀಗೆಂದು ಮನವಿ ಮಾಡಿದ್ದಾರೆ ಭಾರತ ತಂಡದ ಮಾಜಿ ಆಟಗಾರ ಸುನೀಲ್ ಜೋಶಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾ
‘ಐಟಿ ಕ್ಷೇತ್ರ, ಉನ್ನತ ಶಿಕ್ಷಣ, ಅಮೆರಿಕ ವಿಶ್ವವಿದ್ಯಾಲಯಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿಯ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಸವರಾಜ ಬೊಮ್ಮಾಯಿ ಅವರಲ್ಲಿ ನಾನು ವಿನಂತಿ ಮಾಡುತ್ತೇನೆ’ ಎಂದು ಜೋಶಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿ ಬೇಕೆಂಬ ಕೂಗಿನ ಬಗ್ಗೆ ಕಳೆದ ಆಗಸ್ಟ್‌ನಲ್ಲಿ ಪ್ರತಿಕ್ರಿಯಿಸಿದ್ದ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್, ಯಾವ ನಗರದಲ್ಲಿ ರಾಯಭಾರ ಕಚೇರಿ ತೆರೆಯಬೇಕು ಎಂಬುದನ್ನು ನಿರ್ಧಾರ ಮಾಡುವುದು ಅಮೆರಿಕದ ವಿದೇಶಾಂಗ ಇಲಾಖೆ. ನಾವು ಮನವಿ ಮಾತ್ರ ಮಾಡಬಹುದು. ರಾಯಭಾರ ಕಚೇರಿಯ ಅಗತ್ಯವನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಹೇಳಿದ್ದರು.
ಸದ್ಯ ಅಮೆರಿಕದ ವೀಸಾ ಪಡೆಯಲು ಕರ್ನಾಟಕದ ಮಂದಿಗೆ ಚೆನ್ನೈನ ರಾಯಭಾರ ಕಚೇರಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಬೆಂಗಳೂರಿನಲ್ಲೂ ಅಮೆರಿಕ ರಾಯಭಾರ ಕಚೇರಿ ಬೇಕಿದೆ ಎಂದು ಸುನೀಲ್ ಜೋಶಿ ಅವರು ಹೇಳಿದ್ದಾರೆ.
ಇದನ್ನೂ ಓದಿ | Pak Embassy For Sale | ಅಮೆರಿಕ ರಾಯಭಾರ ಕಚೇರಿ ಆಸ್ತಿ ಮಾರಾಟಕ್ಕೆ ಪಾಕ್ ತೀರ್ಮಾನ, ಅದು ಭಾರತದ ಪಾಲು?