Site icon Vistara News

ಹಿಂದು ಧರ್ಮದ ಮೇಲಿನ ದಾಳಿಗಳಿಗೆ ಹಿಂದು ರಾಷ್ಟ್ರದ ಸ್ಥಾಪನೆಯೇ ಪರಿಹಾರ: ಶರತ್ ಕುಮಾರ್

Hindu Janajagruti Samiti

ಬೆಂಗಳೂರು: ಹಿಂದು ರಾಷ್ಟ್ರದ ಬೇಡಿಕೆಯನ್ನು ಸಶಕ್ತವಾಗಿ ಮಾಡುವ ಅವಶ್ಯಕತೆಯಿದೆ. ಈ ದೇಶದ ಪ್ರಾಣವಾಗಿರುವ ಸನಾತನ ಧರ್ಮದ ಮೂಲವನ್ನು ಕಿತ್ತೆಸೆಯಲು ಅನೇಕ ಜನರು ಶ್ರಮಿಸುತ್ತಿದ್ದಾರೆ. ಆದರೆ, ಹಿಂದು ಧರ್ಮದ ಮೇಲಾಗುತ್ತಿರುವ ನಿರಂತರ ದಾಳಿ, ವಿವಿಧ ಸಮಸ್ಯೆಗಳಿಗೆ ಹಿಂದು ರಾಷ್ಟ್ರದ ಸ್ಥಾಪನೆಯೊಂದೇ ಪರಿಹಾರವಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕ ಶರತ್ ಕುಮಾರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆಯ ಶ್ರೀ ಶಿರಡಿ ಸಾಯಿಬಾಬಾ ಸೇವಾ ಕೇಂದ್ರದಲ್ಲಿ ಹಿಂದು ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಹಿಂದು ರಾಷ್ಟ್ರ-ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆಯ ಚುನಾವಣೆ ನಡೆಯುವುದರಿಂದ ರಾಜಕೀಯ ನಾಯಕರು ವಿವಿಧ ಆಶ್ವಾಸನೆ ನೀಡುತ್ತಾರೆ. ಆದರೆ ನಮಗೆ ಯಾವುದೇ ಆಶ್ವಾಸನೆ ಬೇಡ, ಬದಲಾಗಿ ಹಿಂದು ರಾಷ್ಟ್ರದ ನಕಾಶೆ ಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Lord Ram: ಮದರಸಾಗಳಲ್ಲೂ ನಡೆಯಲಿದೆ ಇನ್ನು ರಾಮನ ಕುರಿತು ಅಧ್ಯಯನ; ಏನಿದು ಯೋಜನೆ?

ನಮಗೆ ಫ್ರೀ ವಿದ್ಯುತ್ ಬೇಡ, ಸಾಲ ಮನ್ನಾ ಬೇಡ, ನಮಗೆ ಕೇವಲ ಎಲ್ಲರ ಉದ್ಧಾರ ಮಾಡುವ ಹಿಂದು ರಾಷ್ಟ್ರ ಬೇಕು. ಭಾರತವನ್ನು ಸಂವಿಧಾನಾತ್ಮಕ ದೃಷ್ಟಿಯಲ್ಲಿ ಹಿಂದು ರಾಷ್ಟ್ರವೆಂದು ಘೋಷಣೆ ಮಾಡಬೇಕು. ದೇಶದಾದ್ಯಂತ ಗೋಹತ್ಯಾ ನಿರ್ಬಂಧ, ಲವ್ ಜಿಹಾದ್ ವಿರೋಧಿ ಕಾನೂನು ಜಾರಿ, ಮತಾಂತರ ನಿರ್ಬಂಧ, ಜನಸಂಖ್ಯಾ ನಿಯಂತ್ರಣ ಕಾನೂನು ಮಾಡಬೇಕು. ಪರಕೀಯ ಆಕ್ರಮಣಕಾರರು ವಶಪಡಿಸಿಕೊಂಡಿರುವ ದೇವಸ್ಥಾನಗಳನ್ನು ತಕ್ಷಣ ಮುಕ್ತಗೊಳಿಸಿ, ಸರ್ಕಾರ ವಶಪಡಿಸಿಕೊಂಡಿರುವ ದೇವಸ್ಥಾನಗಳನ್ನು ಭಕ್ತರಿಗೆ ಒಪ್ಪಿಸಬೇಕು. ಇವು ಹಿಂದುಗಳ ಒಕ್ಕೊರಳ ಬೇಡಿಕೆಯಾಗಿದೆ ಎಂದು ತಿಳಿಸಿದರು.

ಹಿಂದು ಹುಡುಗಿಯರನ್ನು ‘ಲವ್ ಜಿಹಾದ್‌’ ಜಾಲದಲ್ಲಿ ಸಿಲುಕದಂತೆ ತಡೆಯುವುದು ನಮ್ಮ ಕರ್ತವ್ಯವಾಗಿದೆ. ಈ ಷಡ್ಯಂತ್ರದ ವಿರುದ್ಧ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಅನೇಕ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಈ ಭಾರತ ವಿರೋಧಿ ಷಡ್ಯಂತ್ರದ ವಿರುದ್ಧ ಕಾನೂನು ಮಾಡಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ, ‘ಕೇರಳ ಸ್ಟೋರಿ’ಯಂತಹ ‘ಕರ್ನಾಟಕ ಸ್ಟೋರಿ’ ಆಗುವವರೆಗೆ ನಾವು ಸುಮ್ಮನೆ ಕುಳಿತುಕೊಳ್ಳಬೇಕೇ ? ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸಾದರಪಡಿಸಿದ ಎನ್.ಸಿ.ಆರ್.ಬಿ. (ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೋದ) ವರದಿಗನುಸಾರ ದೇಶದಾದ್ಯಂತ ಕಳೆದ 3 ವರ್ಷಗಳಲ್ಲಿ 10 ಲಕ್ಷ ಹುಡುಗಿಯರು ಕಾಣೆಯಾದರೂ, ಶ್ರದ್ಧಾ ವಾಲಕರಳ ಶರೀರ 35 ತುಂಡುಗಳಾದರೂ ಇದುವರೆಗೆ ‘ಲವ್ ಜಿಹಾದ್ ವಿರೋಧಿ ಕಾನೂನು’ ಜಾರಿಯಾಗದಿರುವುದು ವಿಪರ್ಯಾಸ ! ನಮ್ಮ ಹಿಂದು ಹುಡುಗಿಯರ ರಕ್ಷಣೆಗಾಗಿ ನಾವೇ ಮುಂದಾಳತ್ವ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ | Ram Mandir: ಅಯೋಧ್ಯೆಯಲ್ಲಿ ಇನ್ನು ಮುಂದೆ ರಾಮ ದರ್ಶನಕ್ಕೆ ಹೆಚ್ಚುವರಿ ಸಮಯಾವಕಾಶ

ಬೂದಿಗೆರೆಯ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಮುರಳಿ ಅವರು ಮಾತನಾಡಿ, ಸನಾತನ ಧರ್ಮದ ಆಚರಣೆಗಳು ಕೇವಲ ಆಚರಣೆಯಾಗಿರದೇ ಆಧ್ಯಾತ್ಮಿಕ ವಿಜ್ಞಾನವೇ ಆಗಿದೆ. ಅದು ಸಾಮಾಜಿಕ ಭದ್ರತೆಯೂ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದು ಸಮಾಜವು ಈ ಆಚರಣೆಗಳನ್ನು ಮರೆತಂತಾಗಿದೆ, ಈ ಪರಿಸ್ಥಿತಿ ಬದಲಾಗಬೇಕು ಎಂಬ ಉದ್ದೇಶದಿಂದ ಹಿಂದು ಜನಜಾಗೃತಿ ಸಮಿತಿಯಿಂದ ಹಿಂದು ರಾಷ್ಟ್ರ-ಜಾಗೃತಿ ಸಭೆಯ ಆಯೋಜಿಸಲಾಗುತ್ತಿದೆ. ಹಿಂದುಗಳು ನಮ್ಮ ಧರ್ಮದಲ್ಲಿ ಹೇಳಿರುವಂತೆ ಧರ್ಮಾಚರಣೆಯನ್ನು ಮಾಡಬೇಕು ಎಂದರು.

Exit mobile version