ಬೆಂಗಳೂರು: ರೋಟರಿ ನೀಡೀ ಹಾರ್ಟ್ ಫೌಂಡೇಶನ್ ವತಿಯಿಂದ ಮೇ 4 ಮತ್ತು 5ರಂದು ಗುರುದತ್ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ (Film festival) ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಗುರುದತ್ ಅವರ ಚಲನಚಿತ್ರಗಳ ಕಲೆ ಮತ್ತು ಆತ್ಮಾವಲೋಕನ ನಡೆಯಲಿದೆ.
ಭಾರತೀಯ ವಿದ್ಯಾಭವನದಲ್ಲಿ ಮೇ 4ರಂದು ಬೆಳಗ್ಗೆ 10ಗಂಟೆಯಿಂದ ವಿ.ಕೆ.ಮೂರ್ತಿಯವರ ಛಾಯಾಗ್ರಹಣ ಕುರಿತು ಜಿ.ಎಸ್.ಭಾಸ್ಕರ್ ಅವರ ಸಂವಾದ ಇರಲಿದೆ. ಭಾರತೀಯ ವಿದ್ಯಾಭವನ ಹಾಗೂ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಬೆಳಗ್ಗೆ 10ಗಂಟೆಯಿಂದ ಖ್ಯಾತ ನಟ, ನಿರ್ದೇಶಕ ಗುರುದತ್ ಅವರ ಪ್ಯಾಸಾ, ಕಾಗಜ್ ಕೆ ಫೂಲ್, Mr&Mrs 55, ಆರ್ ಪಾರ್ ಚಿತ್ರಗಳ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ ನೀಡಿದೆ.
ನಿರ್ಗತಿಕರು ಹಾಗೂ ಬಡವರ ಹೃದಯ ಶಸ್ತ್ರಚಿಕಿತ್ಸೆಗಳಿಗೆ ನೆರವಾಗುವ ಉದ್ದೇಶದಿಂದ ರೋಟರಿ ನೀಡೀ ಹಾರ್ಟ್ ಫೌಂಡೇಶನ್ ಈ ಕಾರ್ಯಕ್ರಮ ಆಯೋಜಿಸಿದ್ದು, ಪ್ರವೇಶದ ಡೋನರ್ ಪಾಸ್‌ಗಳ ದರ 2000 ರೂ., 1500 ರೂ. ಹಾಗೂ 800 ರೂ., ಡೆಲಿಗೇಟ್ ಪಾಸ್ 500 ರೂ. ಇರಲಿದೆ.
ಸಂಗೀತ ರಸ ಸಂಜೆ
ಭಾರತೀಯ ವಿದ್ಯಾಭವನದಲ್ಲಿ ಶನಿವಾರ (ಮೇ 4ರಂದು) ಸಂಜೆ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ನಿರ್ವಾಹಕರಾದ ನರಸಿಂಹನ್ ಕಣ್ಣನ್, ಶಾರದಾ ಶೆನೊಯ್, ಗಾಯಕರಾದ ರಾಮ ತೀರಥ್, ಸಮನ್ವಿತಾ ಶರ್ಮಾ, ಶ್ರುತಿ ಬಿಡೆ, ಗೋವಿಂದ್ ಕರ್ನೂಲ್, ನರಸಿಮ್ಮನ್ ಕಣ್ಣನ್, ವಾದ್ಯ ವೃಂದ ಕಲಾವಿದರಾದ ಪ್ರದೀಪ್ ಪಾಟ್ಕರ್ ಮತ್ತು ಸಂಘವು ಕಾರ್ಯಕ್ರಮ ನಡೆಸಿಕೊಡಲಿದೆ. ಕಾರ್ಯಕ್ರಮದ ಡೋನರ್ ಪಾಸ್ ದರ 2000 ರೂ., 1500 ರೂ. ಹಾಗೂ 800 ರೂ. ಇದೆ.
ಕಾರ್ಯಕ್ರಮಕ್ಕೆ ಆಗಮಿಸುವವರು ಪಾಸ್‌ಗಳಿಗಾಗಿ ರೋ.ಮನೋಜ್ ಅಗರ್ವಾಲ್-9845012716, ರೋ. ಹರಿ ಪಬ್ಬತ್ತಿ-9663305911, ರೋ.ರಾಜಾರಾಂ ಕೃಷ್ಣಮೂರ್ತಿ-9980009398 ಸಂಪರ್ಕಿಸಬಹುದು.
ಇದನ್ನೂ ಓದಿ | ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!