ಬೆಂಗಳೂರು : ರಿಚ್ಮಂಡ್ ಟೌನ್‌ನ ಫ್ಯಾಮಿಲಿ ಸೂಪರ್ ಮಾರ್ಟ್‌ನಲ್ಲಿ ಬುಧವಾರ ರಾತ್ರಿ 1.30ರ ಸುಮಾರಿಗೆ (ಸೆ.7) ಅಗ್ನಿ ಅವಘಡ (Fire Accident) ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಅಂಗಡಿಯಲ್ಲಿದ್ದ ವಸ್ತುಗಳು ಅಗ್ನಿಗಾಹುತಿ ಆಗಿವೆ.
ನಂಜಪ್ಪ ಸರ್ಕಲ್ ಬಳಿಯ ಶಾಂತಾರಾಮ್ ಕಾಂಪ್ಲೆಕ್ಸ್‌ನಲ್ಲಿದ್ದ ಫ್ಯಾಮಿಲಿ ಶಾಪಿಂಗ್ ಮಾರ್ಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವುಡ್‌ವರ್ಕ್, ಬುಕ್ಸ್ ಸಂಗ್ರಹಣೆ ಜಾಸ್ತಿ ಇದ್ದುದರಿಂದ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ. ಸಂಪೂರ್ಣ ಸೂಪರ್ ಮಾರ್ಕೆಟ್ ಅಗ್ನಿಗಾಹುತಿ ಆಗಿದ್ದು, ಒಂದೇ ರಾತ್ರಿಯಲ್ಲಿ 4 ಕೋಟಿ ರೂ. ನಷ್ಟ ಆಗಿದೆ ಎಂದು ತಿಳಿದು ಬಂದಿದೆ. ಅನ್ವರ್ ಎಂಬುವವರ ಮಾಲಿಕತ್ವದ ಶಾಪಿಂಗ್ ಮಾರ್ಟ್ ರಾತ್ರಿ 1.30ರ ಸುಮಾರಿಗೆ ಕಾಂಪ್ಲೆಕ್ಸ್‌ನ ಒಂದು ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ರವಾನಿಸಿದ್ದರು.
ಇದನ್ನೂ ಓದಿ | Fire Accident | ಆನೇಕಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ವಸತಿಗೃಹ
ಆರಂಭದಲ್ಲಿ ಸ್ಥಳಕ್ಕೆ ಬಂದಿದ್ದ ಏಕೈಕ ಅಗ್ನಿಶಾಮಕ ದಳದ ವಾಹನ ಬೆಂಕಿಯ ಕೆನ್ನಾಲಿಗೆ ಕಂಡು ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಗಿತ್ತು. ಉಳಿದ ವಾಹನಗಳು ತಲುಪುವಷ್ಟರಲ್ಲಿ ಇಡೀ ಕಾಂಪ್ಲೆಕ್ಸ್ ಅಗ್ನಿಗಾಹುತಿ ಆಗಿವೆ. ಶಾಪಿಂಗ್ ಮಾರ್ಟಿನಲ್ಲಿದ್ದ 4 ಲಕ್ಷ ರೂ. ನಗದು 3 ಕೋಟಿ ರೂ.ನಷ್ಟು ವಸ್ತುಗಳು, 1 ಕೋಟಿ ರೂ. ಮೌಲ್ಯದ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಭಸ್ಮಗೊಂಡಿವೆ. 9 ಅಗ್ನಿಶಾಮಕ ವಾಹನಗಳಿಂದ ಬೆಳಗ್ಗಿನ ಜಾವದವರೆಗೂ ಬೆಂಕಿ ನಂದಿಸುವ ಕಾರ್ಯ ಯಶಸ್ವಿ ಆಗಿದೆ.
ಇದನ್ನೂ ಓದಿ | Fire Accident | ತ್ಯಾಗಿ ಸರ್ಕಲ್ವ ಪ್ಯಾಲೇಸ್ ಮಾಲ್‌ನಲ್ಲಿ ಅಗ್ನಿ ಅವಘಡ : ಗಾಜಿನ ಸಾಮಗ್ರಿಗಳು ಬೆಂಕಿಗಾಹುತಿ