Site icon Vistara News

Mobile Bus Stop: ಬೆಂಗಳೂರಿನಲ್ಲಿ ಮೊದಲ ಸಂಚಾರಿ ಬಸ್ ನಿಲ್ದಾಣಕ್ಕೆ ಚಾಲನೆ

mobile bus stop

ಬೆಂಗಳೂರು: ಶಕ್ತಿ ಯೋಜನೆಯು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವುದು ಸಕಾರಾತ್ಮಕ ಕ್ರಮವೇ ಆದರೂ, ಅಗತ್ಯವಿರುವ ಪ್ರದೇಶಗಳಿಗೆ ಸಂಪರ್ಕದ ಕೊರತೆಯನ್ನು ನೀಗಿಸಿಲ್ಲ. ಹೀಗಾಗಿ ʼಅಲ್ಲಿ ಸೇರೋಣʼ ತಂಡದಿಂದ ನಗರದಲ್ಲಿ ಮೊದಲ ಸಂಚಾರಿ ಬಸ್ ನಿಲ್ದಾಣಕ್ಕೆ (Mobile Bus Stop) ಚಾಲನೆ ನೀಡಲಾಗಿದೆ.

ಸಂಚಾರಿ ಬಸ್‌ ನಿಲ್ದಾಣವು ಇ-ಮೊಬಿಲಿಟಿಯ ಅಂತರವನ್ನು ನಿವಾರಿಸುವ ಉದ್ದೇಶ ಹೊಂದಿದ್ದು, ಅಸಂಘಟಿತ ವಲಯದ ಅಗತ್ಯಗಳನ್ನು ಹೇಗೆ ಪೂರೈಸಬಹುದು ಎಂದು ತೋರಿಸುತ್ತದೆ. ಮೊಬೈಲ್ ಬಸ್ ನಿಲ್ದಾಣವು ಬೆಂಗಳೂರಿನ ಹೊಸ ನಗರ, ಸೀಗೆಹಳ್ಳಿ, ಗುರುವಾರ ಸಂತೆ ಪ್ರದೇಶ ಮತ್ತು ಬೈರಸಂದ್ರಗಳಿಗೆ ಈ ಅಕ್ಟೋಬರ್‌ನಲ್ಲಿ ಸಂಚರಿಸಲಿದೆ.

ಅಕ್ಟೋಬರ್ 5-7ರವರೆಗೆ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಹಿಂಬದಿಯ ಹೊಸನಗರದಲ್ಲಿ ಇರಲಿದ್ದು, ಅಲ್ಲಿಂದ ಅಕ್ಟೋಬರ್ 9-10ರಂದು ಸೀಗೆಹಳ್ಳಿ ಮತ್ತು ಪ್ರಿಯಾಂಕ ನಗರ, ಅಕ್ಟೋಬರ್ 16-18ರಂದು ಗುರುವಾರ ಸಂತೆ ಪ್ರದೇಶ, ಮತ್ತು ಅಕ್ಟೋಬರ್ 20-21ರಂದು ಬೈರಸಂದ್ರಕ್ಕೆ ಪ್ರಯಾಣಿಸಬಹುದು. ಮರದಲ್ಲಿ ಸಾಮಾನ್ಯ ಬಸ್ ನಿಲ್ದಾಣದಂತೆಯೇ ಇರುವ ಈ ಅನುಸ್ಥಾಪನೆಯಲ್ಲಿ ಟಿಕೆಟ್ ಕೌಂಟರ್, ಸೀಟುಗಳು ಮತ್ತು ಕಾಯುವ ಸ್ಥಳ ಮತ್ತು ನ್ಯೂಸ್ ಸ್ಟಾಂಡ್ ಇರುತ್ತದೆ.

ಜಯನಗರ ವಿಧಾನಸಭಾ ಕ್ಷೇತ್ರದ ಸಮುದಾಯ ಸಂಯೋಜಕರಾದ ಸುರೇಶಾ ಕಾಂತಾ. ಬಿ ಅವರು ಪ್ರತಿಕ್ರಿಯಿಸಿ, ನಾವು ನಗರದ ಅಸಂಘಟಿತ ಉದ್ಯೋಗಿಗಳಿಗೆ ಪ್ಲಾಟ್ ಫಾರಂ ಸೃಷ್ಟಿಸಿದ್ದು, ಇದು ಎಲ್ಲರಿಗೂ ಸುಧಾರಿತ ಸಾರಿಗೆ ಸೇವೆಗಳನ್ನು ಒದಗಿಸಲಿದೆ ಹಾಗೂ ಭಾಗವಹಿಸುವಿಕೆ ಹೆಚ್ಚಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Money Guide: ಪಿಪಿಎಫ್‌, ಅಂಚೆ ಕಚೇರಿ; ಮಧ್ಯಮ ವರ್ಗದವರ ಹೂಡಿಕೆಗೆ ಇವು ಬೆಸ್ಟ್‌ ಪ್ಲಾನ್‌ಗಳು!

ವಿಜಯನಗರ, ವೈಟ್ ಫೀಲ್ಡ್‌ನ ಮಹಿಳಾ ನಾಯಕಿ ಮತ್ತು ಟೈಲರ್ ಆಗಿರುವ ಸುಜಾತ ಮಾತನಾಡಿ, ನಮ್ಮ ಮನೆಯಲ್ಲಿ ನಾಲ್ಕು ಮಂದಿ ಇದ್ದೇವೆ. ನನ್ನ ಪತಿ, ಮಾವ ಮತ್ತು ನಾನು ದ್ವಿಚಕ್ರ ವಾಹನ ಬಳಸುತ್ತೇವೆ. ಪ್ರತಿಯೊಬ್ಬರೂ ವಾಹನ ಬಳಸುವುದು ಇಂಗಾಲ ಹೊರಸೂಸುವಿಕೆಯನ್ನು ಹೆಚ್ಚಿಸುತ್ತದೆ. 50-60 ಜನರನ್ನು ಹೊತ್ತೊ‍ಯ್ಯುವ ಬಸ್‌ಗಳು ಇಂಗಾಲ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವುದಲ್ಲದೆ ಟ್ರಾಫಿಕ್ ಕಡಿಮೆ ಮಾಡುತ್ತದೆ. ಇದು ಪರಿಸರಕ್ಕೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಉತ್ತಮ ಮಳೆ, ಹಸಿರು, ಸುಧಾರಿತ ಗಾಳಿಯ ಗುಣಮಟ್ಟ ದೊರೆಯುತ್ತದೆ ಎಂದು ತಿಳಿಸಿದ್ದಾರೆ.

Exit mobile version