Site icon Vistara News

Free Health Checkup Camp | ಸೆ.17ಕ್ಕೆ ಮಾಗಡಿ ಪೊಲೀಸ್‌ ಕಾಲೊನಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Free Health Checkup Camp

ಬೆಂಗಳೂರು: ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬೆಂಗಳೂರು ರೋಟರಿ ಉದ್ಯೋಗ್‌ ಮತ್ತು ರೋಟರಿ ಇನ್ನರ್‌ ವ್ಹೀಲ್‌ ಕ್ಲಬ್‌ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು (Free Health Checkup Camp) ಆಯೋಜಿಸಲಾಗಿದೆ. ಶನಿವಾರ (ಸೆ.17) ಬೆಳಗ್ಗೆ 8.30ರಿಂದ 2.30ರವರೆಗೆ ಮಾಗಡಿ ರಸ್ತೆ ಪೊಲೀಸ್‌ ಕಾಲೊನಿ ಕ.ರಾ.ನಿ.ಪೋ.ಅ.ಕ್ಷೇ ಸಂಘದ ಸಂಭಾಗಣದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಹಲವಾರು ಸೌಲಭ್ಯಗಳು ದೊರೆಯಲಿವೆ. ಬಿ.ಪಿ, ಮಧುಮೇಹ ಪರೀಕ್ಷೆ ಮತ್ತು ಸಲಹೆಗಳು, ಕಂಪ್ಯೂಟರ್‌ ಮೂಲಕ ಕಣ್ಣಿನ ಪರೀಕ್ಷೆ, ವೈದ್ಯರ ಸೂಚನೆ ಮೇರೆಗೆ ಉಚಿತ ಕನ್ನಡಕ ವಿತರಣೆ, ಹೃದಯ ರೋಗ ತಪಾಸಣೆ ಮತ್ತು ಸಲಹೆ, ಇ.ಸಿ.ಜಿ ಮುಂತಾದ ಪರೀಕ್ಷೆಗಳು, ರಕ್ತದಾನ ಶಿಬಿರ, ಸಾಮಾನ್ಯ ಆರೋಗ್ಯ ತಪಾಸಣೆ/ ದಂತ ಆರೋಗ್ಯ ತಪಾಸಣೆ-ಚಿಕಿತ್ಸೆ, ಮಹಿಳೆಯರ ಗರ್ಭಕೋಶ ಪರೀಕ್ಷೆ, ಕ್ಯಾನ್ಸರ್‌ ಪರೀಕ್ಷೆ- ಸಲಹೆ (ಸ್ಕ್ಯಾನಿಂಗ್‌ ರಿಪೋರ್ಟ್‌ ಇದ್ದಲ್ಲಿ ತರಬೇಕು) ದೊರೆಯಲಿವೆ. ಹಳೆಯ ವೈದ್ಯಕೀಯ ದಾಖಲೆ ಇದ್ದಲ್ಲಿ ತರುವಂತೆ ಸೂಚಿಸಲಾಗಿದೆ.

ಸ್ಥಳ: ಮಾಗಡಿ ರಸ್ತೆ ಪೊಲೀಸ್‌ ಕಾಲೊನಿ, ಕ.ರಾ.ನಿ.ಪೋ.ಅ.ಕ್ಷೇ ಸಂಘದ ಸಭಾಂಗಣ

ಸಮಯ: ಬೆಳಗ್ಗೆ ೮.೩೦ರಿಂದ ಮಧ್ಯಾಹ್ನ ೨.೩೦

ಇದನ್ನೂ ಓದಿ | Free Health Camp | ಕೇಸರಿ ಫೌ೦ಡೇಶನ್‌ನಿಂದ ಆ.26ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Exit mobile version