ಬೆಂಗಳೂರು: ಬೆಂಗಳೂರಿನ ಐ.ಟಿ.ಐ ಸೆಂಟ್ರಲ್ ಶಾಲೆಯಲ್ಲಿ ಮಹಾತ್ಮ ಗಾಂಧಿ ಜಯಂತಿಯಂದು (Gandhi Jayanti 2024) ಸ್ವಚ್ಛ ಭಾರತ ಅಭಿಯಾನದಡಿ ಎನ್.ಸಿ.ಸಿ ಕೆಡೆಟ್ಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್.ಸಿ.ಸಿ. ಯೂನಿಟ್ನ ವತಿಯಿಂದ ಪ್ರಧಾನಮಂತ್ರಿ ಸೌಭಾಗ್ಯ (ವಿದ್ಯುತ್) ಯೋಜನೆ , ಜನ್ ಧನ್ ಯೋಜನೆ, ಉಜ್ವಲಾ ಗ್ಯಾಸ್ ಯೋಜನೆ, ಆಯುಷ್ಮಾನ್ ಭಾರತ್ ಮಿಷನ್, ಇಂದ್ರಧನುಷ್ನಂತಹ ಯೊಜನೆಗಳನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಎನ್.ಸಿ.ಸಿ. ಕೆಡೆಟ್ಗಳಿಗೆ ವೆಬಿನಾರ್ಗಳನ್ನು ಆಯೋಜಿಸಲಾಗಿತ್ತು.
ಕೆ.ಆರ್. ಪುರದ ಐ.ಟಿ.ಐ. ಸೆಂಟ್ರಲ್ ಶಾಲೆಯಲ್ಲಿ ಉಜ್ವಲಾ ಗ್ಯಾಸ್ ಯೋಜನೆಯ ವಿಷಯವಾಗಿ ವೆಬಿನಾರ್ ಹಾಗೂ ಮಹಾತ್ಮ ಗಾಂಧಿ ಜಯಂತಿಯಂದು ಮಹಾತ್ಮ ಗಾಂಧೀಜಿಯ ಆಶಯವಾದ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವ ಸಂಬಂಧ ಎನ್.ಸಿ.ಸಿ ಕೆಡೆಟ್ಗಳಿಂದ ಶ್ರಮಧಾನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಪೊನ್ಮಲಾರ್, ಉಪಪ್ರಾಂಶುಪಾಲರಾದ ಶ್ರೀಮತಿ ಶೈಲಜಾ ಆರಾಧ್ಯ, ಮುಖ್ಯಶಿಕ್ಷಕಿ ಅರುಣಾ ಜಾನಕಿರಾಮನ್, ಹಾಗೂ ಹಲವು ಶಿಕ್ಷಕರೊಂದಿಗೆ ಶಾಲೆಯ ಎನ್.ಸಿ.ಸಿ ಅಧಿಕಾರಿ ಸೆಕಂಡ್ ಆಫೀಸರ್ ಬಾಲಕೃಷ್ಣ ವಿ.ಎಚ್. ಕಾರ್ಯಕ್ರಮದಲ್ಲಿ ಹಾಜರಿದ್ದರು.