ಬೆಂಗಳೂರು: ಪರಿಸರ ಸಂರಕ್ಷಣೆ ಮತ್ತು ಸಾಮರಸ್ಯದ ಧ್ಯೇಯದೊಂದಿಗೆ ಬನ್ನೇರುಘಟ್ಟ ರಸ್ತೆಯ ಅಕ್ಷಯ ನಗರ ಕೆರೆ ಬಳಿ ಭಾನುವಾರ ಸಂಜೆ ವಾರ್ಷಿಕ ಗಂಗಾ ಆರತಿ (Ganga Aarti) ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಪರಿಸರ ಗೀತೆ, ಮಕ್ಕಳಿಂದ ಮೂಡಿಬಂದ ಪರಿಸರ ಸಂರಕ್ಷಣೆ ಜಾಗೃತಿ ಕಿರು ನಾಟಕ, ಪರಿಸರ ಕಾಳಜಿಯ ಚಿತ್ರಗಳ ಪ್ರದರ್ಶನ ಮತ್ತು ಪವಿತ್ರ ಜಲಕ್ಕೆ ಸಾಂಪ್ರದಾಯಿಕ ಪೂಜೆ, ಕಾರ್ಯಕ್ರಮದ ವಿಶೇಷವಾಗಿತ್ತು.
ಕೆರೆಯ ಸುತ್ತ ಮುಸ್ಸಂಜೆಯಲ್ಲಿ ಬೆಳಗಲಾದ ಸಾವಿರಾರು ಹಣತೆಯ ದೀಪ ಕಣ್ಮನ ಸೆಳೆಯಿತು. 2000ಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಪ್ರೀತಿ ಮೆರೆದರು. ನಮ್ಮ ಕೆರೆ ನಮ್ಮ ಹೆಮ್ಮೆ, ಕೆರೆಗಳನ್ನು ಉಳಿಸಿ ಸಂರಕ್ಷಿಸಿ ಎನ್ನುವ ಸೆಲ್ಫಿ ಪಾಯಿಂಟ್ ಸಹ ವಿಶೇಷ ಗಮನ ಸೆಳೆಯಿತು. ಬೆಂಗಳೂರು ದಕ್ಷಿಣ ವಿಧಾನಸಭಾ ಶಾಸಕ ಎಂ. ಕೃಷ್ಣಪ್ಪ ಗಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತೆ ಗಂಗೆಗೆ ಪೂಜೆ ಸಲ್ಲಿಸಿದರು.
ಜಲನಿಧಿ ತಂಡದ ಮುಖ್ಯಸ್ಥರಾದ ರಮೇಶ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವ ಜಲಕ್ಕೆ ವಂದನೆ ಸಲ್ಲಿಸುವುದು ನಮ್ಮ ಸನಾತನ ಸಂಸ್ಕೃತಿಯಲ್ಲಿರುವ ಸಂಪ್ರದಾಯ. ಜಲ ನಮ್ಮ ಜೀವನಾಡಿ ಇದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಾಮೂಹಿಕ ಸಹಭಾಗಿತ್ವದಿಂದ ಸ್ಥಳಿಯ ಜಲಮೂಲಗಳ ಸಂರಕ್ಷಣೆ ಯಶಸ್ವಿಯಾಗುತ್ತದೆ ಪರಿಸರ ರಕ್ಷಣೆಗೆ ಒಕ್ಕೊರಲಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ | Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠೆ; ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ