ಬೆಂಗಳೂರು: ಸ್ಥಳೀಯರ ಸತತ ಪರಿಶ್ರಮದಿಂದ ಪುನರುಜ್ಜೀವನಗೊಂಡ ಅಕ್ಷಯ ನಗರ ಕೆರೆಗೆ ಕಳೆದ 7 ವರ್ಷಗಳಿಂದ ಗಂಗಾ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ ಡಿಸೆಂಬರ್ 17ರಂದು ಭಾನುವಾರ ಸಂಜೆ 4 ರಿಂದ 7ಗಂಟೆವರೆಗೆ ನಗರದ ಬನ್ನೇರುಘಟ್ಟ ರಸ್ತೆಯ ಅಕ್ಷಯ ನಗರ ಕೆರೆಯ ವಾರ್ಷಿಕ ಗಂಗಾ ಆರತಿ ಕಾರ್ಯಕ್ರಮವನ್ನು (Ganga Aarti) ಹಮ್ಮಿಕೊಳ್ಳಲಾಗಿದೆ.
ಪ್ರಕೃತಿಯನ್ನು ಆರಾಧಿಸುವ ಹಾಗೂ ಜಲವನ್ನು ಪೂಜಿಸುವ ನಿಟ್ಟಿನಲ್ಲಿ ಅಕ್ಷಯ ನಗರ ಜಲನಿಧಿ ತಂಡ ಸ್ಥಳೀಯರ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದೆ.
ಇದನ್ನೂ ಓದಿ | Bhashavidya Kannada: ಡಿ. 17ರಂದು ʼಕನ್ನಡದಲ್ಲಿ ಮಾತಾಡೋಣʼ ಆನ್‌ಲೈನ್ ಕಾರ್ಯಾಗಾರ
ಜಲವನ್ನು ಮತ್ತು ಜಲ ಮೂಲಗಳನ್ನು ಸ್ವಚ್ಛವಾಗಿ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು ಎನ್ನುವುದರ ಸಂಕೇತವಾಗಿ ಸ್ಥಳೀಯರು ಪ್ರಾರಂಭಿಸಿದ ಆಚರಣೆ ಈಗ ವಾರ್ಷಿಕ ಸಂಪ್ರದಾಯವಾಗಿ ಸ್ಥಳೀಯರ ಪರಿಸರ ಸಂರಕ್ಷಣೆ ಕಾಳಜಿಯನ್ನು ಸಂಕೇತಿಸುತ್ತದೆ.
5.5 ಎಕರೆ ವಿಸ್ತೀರ್ಣದ ಕೆರೆಯ ಸುತ್ತ ಹಣತೆ ದೀಪಗಳನ್ನು ಬೆಳಗಿಸಿ , ಪವಿತ್ರ ಜಲಕ್ಕೆ ಆರತಿ ಬೆಳಗುವ ವಿಶೇಷ ಸಂಪ್ರದಾಯ ಇದಾಗಿದೆ. ಕೆರೆಯ ಸುತ್ತಲೂ 1000 ದೀಪಗಳನ್ನು ಬೆಳಗಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆಲ್ಫಿ ಮತ್ತು ತಿಲಕ ಬೂತ್, ಆಕಾಶ ಬುಟ್ಟಿ ಮತ್ತು ಸ್ಕೈ ಶಾಟ್‌ಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ