Site icon Vistara News

Geethotsava: ಬಸವನಗುಡಿಯಲ್ಲಿ ಡಿ. 23, 24ರಂದು ಗೀತೋತ್ಸವ

Geethotsava

ಬೆಂಗಳೂರು: ಭಗವದ್ಗೀತೆಯ ಸಾರವನ್ನು ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ಕೋಟಿ ಗೀತಾ ಲೇಖನ ಯಜ್ಞ ಸಮಿತಿ ವತಿಯಿಂದ ಡಿಸೆಂಬರ್‌ 23 ಮತ್ತು 24 ರಂದು ʼಗೀತೋತ್ಸವʼ ಕಾರ್ಯಕ್ರಮವನ್ನು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.

ಉಡುಪಿಯ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಪೀಠಾಧೀಶರಾದ ಶ್ರೀಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶೀರ್ವಾದ ಹಾಗೂ ಶ್ರೀ ಗೋವರ್ಧನಗಿರಿ ಕ್ಷೇತ್ರದ ಆಶ್ರಯದಲ್ಲಿ ಗೀತೋತ್ಸವ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಲಿದ್ದಾರೆ.

ಕೃಷ್ಣ ಪರಮ ಭಕ್ತರ ಮೂಲಕ ಒಂದು ಕೋಟಿಗೂ ಅಧಿಕ ಜನರಿಂದ ಭಗವದ್ಗೀತೆಯನ್ನು ಬರೆಸಿ ಉಡುಪಿಯ ಶ್ರೀಕೃಷ್ಣನಿಗೆ ಸಮರ್ಪಿಸುವುದು. ಜಾತಿ, ಮತ ಭೇದವಿಲ್ಲದೆ ಶ್ರೀ ಕೃಷ್ಣನ ಭಕ್ತಿಯನ್ನು, ಭಗವದ್ಗೀತೆಯ ಸಾರವನ್ನು ತಿಳಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಇದನ್ನೂ ಓದಿ | Bhagavad Gita Abhiyan: ಬೆಳಗಾವಿಯಲ್ಲಿ ಡಿ.23ರಂದು ಭಗವದ್ಗೀತೆ ಮಹಾಸಮರ್ಪಣೆ

ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪುಸ್ತಕ ಮಳಿಗೆಗಳು ಇರಲಿವೆ. ಭಾನುವಾರ ನಡೆಯುವ ಸಮಾರೋಪ ಸಮಾರಂಭಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಶಾಸಕರಾದ ಉದಯ ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಲಿದ್ದರೆ.

Exit mobile version