ಬೆಂಗಳೂರು: ಅನ್ವಯಿಕ ವಿಜ್ಞಾನದಲ್ಲಿ ಸುಸ್ಥಿರ ತಂತ್ರಜ್ಞಾನದ ಜಾಗತಿಕ ಪ್ರವೃತ್ತಿ (ಟ್ರೆಂಡ್ಸ್) (GTSTAAS-2023) ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶಕ್ಕೆ ನಗರದ ರೇವಾ ವಿಶ್ವವಿದ್ಯಾನಿಲಯದ (Reva University) ಕ್ಯಾಂಪಸ್‌ನಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಸಮಾವೇಶದಲ್ಲಿ ನೊಬೆಲ್ ಪುರಸ್ಕೃತರಾದ ಡಾ. ಸರ್. ರಿಚರ್ಡ್ ಜೆ ರಾಬರ್ಟ್ಸ್ ಅವರು ಪಾಲ್ಗೊಂಡಿದ್ದದ್ದು ವಿಶೇಷವಾಗಿತ್ತು.
ಉದ್ಘಾಟನಾ ಭಾಷಣ ಮಾಡಿದ ಡಾ. ಸರ್ ರಿಚರ್ಡ್ ಜೆ. ರಾಬರ್ಟ್ಸ್ ಅವರು, ವಿದ್ಯಾರ್ಥಿಗಳು ಕಲಿಕೆ ಬಗ್ಗೆ ಕುತೂಹಲಿಗಳಾಗಿರುವ ಜತೆಗೆ ಪ್ರೀತಿ ಇರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ನೈಜ ವಿಜ್ಞಾನಿಗಳಾಗಿ ಗುರುತಿಸುವುದು ಮುಖ್ಯ. ಹೀಗೆ ಮಾಡುವುದರಿಂದ ಅವರಲ್ಲಿ ಪೂರ್ವಗ್ರಹ ತುಂಬಿಕೊಳ್ಳುವುದರಿಂದ ತಡೆಯಬಹುದು. ವಿದ್ಯಾರ್ಥಿಗಳನ್ನು ಯಾವಾಗಲೂ ಸಹ ಮಾನವರಂತೆ ಘನತೆ ಹಾಗೂ ಗೌರವದಿಂದ ನಡೆಸಿಕೊಳ್ಳಬೇಕು. ಇದು ಹೆಚ್ಚಿನ ಪ್ರಭಾವ ಬೀರುತ್ತದೆ. ಸರಿಯಾದ ಶಿಕ್ಷಣ ನೀಡುವ ಮೂಲಕ ನಾವು ಉತ್ತಮವಾದ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ರೇವಾ ವಿವಿ ಕುಲಪತಿ ಶ್ಯಾಮರಾಜು ಅವರು, ವಿಜ್ಞಾನ ಮತ್ತು ಅದರ ಅನ್ವಯ ಮಾಡುವುದರಿಂದ ಈ ವಿಶ್ವ ಇನ್ನಷ್ಟು ಉತ್ತಮ ಸ್ಥಳವಾಗುತ್ತದೆ. ನೊಬೆಲ್ ಪುರಸ್ಕೃತರಾದ ಡಾ. ಸರ್ ರಿಚರ್ಡ್ ಜೆ ರಾಬರ್ಟ್ಸ್ ಅವರಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆದುಕೊಳ್ಳಬೇಕು. ರೇವಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಗುರುತಿಸಲ್ಪಡುವುದನ್ನು ಮತ್ತು ಮುಂದಿನ ವರ್ಷಗಳಲ್ಲಿ ಪುರಸ್ಕಾರಗಳನ್ನು ಪಡೆಯುವುದನ್ನು ನಾನು ನೋಡಲು ಬಯಸುತ್ತೇನೆ ಎಂದರು.
ಇದನ್ನೂ ಓದಿ | Raja Marga Column: ‘ದ ಲಾಸ್ಟ್ ಲೆಕ್ಚರ್’ ಪುಸ್ತಕ ಬರೆದ ರಾಂಡಿ ಪಾಷ್ ಕಣ್ಣೀರ ಕತೆ!
ದಕ್ಷಿಣ ಕೊರಿಯಾದ ಸಿಯೋಲ್‌ನ ಕೊರಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್, ಗೌರವ ಅತಿಥಿ ಪ್ರೊ. ಜೂನ್ಹೋ ಲೀ ಅವರು, ಕಾರ್ಯಕ್ರಮದಲ್ಲಿ ಮಾತನಾಡುವುದಕ್ಕೆ ಅವಕಾಶ ದೊರೆತಿದ್ದಕ್ಕಾಗಿ ಕೃತಜ್ಞತೆ ಅರ್ಪಿಸಿದರು. ಈ ಎರಡು ದಿನಗಳ ಸಮ್ಮೇಳನದ ಭಾಗ ಆಗಿರುವುದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ, ಇದು ಫಲಪ್ರದ ಉಪನ್ಯಾಸ ಆಗಲಿದೆ ಎಂಬ ಬಗ್ಗೆ ಆಶಾವಾದಿಯಾಗಿದ್ದೇನೆ ಎಂದರು.
ದೊಡ್ಡ ಮಟ್ಟದಲ್ಲಿ ಸಮಾವೇಶವನ್ನು ಆಯೋಜನೆ ಮಾಡಿದ್ದಕ್ಕಾಗಿ ಐಎಎಎಂ ಅಧ್ಯಕ್ಷ ಎ.ಡಬ್ಲ್ಯು. ಸಂತೋಷ್ ಕುಮಾರ್ ಅವರು ರೇವಾ ವಿಶ್ವವಿದ್ಯಾನಿಲಯವನ್ನು ಅಭಿನಂದಿಸಿದರು. ನೊಬೆಲ್ ಪುರಸ್ಕೃತರನ್ನು ಕ್ಯಾಂಪಸ್‌ಗೆ ಕರೆತಂದಿರುವುದಕ್ಕಾಗಿ ರೇವಾ ವಿವಿ ಸ್ಕೂಲ್ ಆಫ್ ಅಪ್ಲೈಡ್ ಸೈನ್ಸಸ್ ಪ್ರಶಂಸಾರ್ಹವಾಗಿದೆ. ಕಾರ್ಯಕ್ರಮದ ಆಯೋಜನೆಯಲ್ಲಿ ಐಎಎಎಂ ಭಾಗವಾಗಿರುವುದಕ್ಕೆ ಹೆಮ್ಮೆ ಆಗಿದೆ, ಇದು ವಿದ್ಯಾರ್ಥಿಗಳು ಹಾಗೂ ಆಕಾಂಕ್ಷಿಗಳಿಗೆ ಸಕ್ರಿಯ ಕಲಿಕಾ ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಭೌತಿಕ, ರಾಸಾಯನಿಕ, ಗಣಿತ, ಜೈವಿಕ, ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯುತ್ತಮ ಫಲಿತಾಂಶಗಳು ಮತ್ತು ಸವಾಲುಗಳನ್ನು ಹೊರತರುವುದಕ್ಕೆ, ಇಂಡಿಯನ್ ಅಸೋಸಿಯೇಷನ್ ಆಫ್ ಅಪ್ಲೈಡ್ ಮೈಕ್ರೋಬಯಾಲಜಿಸ್ಟ್ಸ್ (ಐಎಎಎಂ) ಸಹಯೋಗದಲ್ಲಿ ರೇವಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಪ್ಲೈಡ್ ಸೈನ್ಸಸ್‌ನಿಂದ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಸಮಾವೇಶದ ಮುಖ್ಯ ವಿಷಯ (ಥೀಮ್) “ಸುಸ್ಥಿರ ತಂತ್ರಜ್ಞಾನದಲ್ಲಿನ ಜಾಗತಿಕ ಪ್ರವೃತ್ತಿಗಳು ಮತ್ತು ಅನ್ವಯಿಕ ವಿಜ್ಞಾನಗಳಲ್ಲಿನ ಅದರ ಅನ್ವಯಗಳು (GTSTAAS-2023)”. ಸಮ್ಮೇಳನದ ನಿರ್ದಿಷ್ಟ ಡೊಮೇನ್ಗಳಲ್ಲಿ ಪ್ರಸ್ತುತಿಗಾಗಿ ಗಮನಾರ್ಹ ಸಂಖ್ಯೆಯ ವೈವಿಧ್ಯ ಪಾಂಡಿತ್ಯಪೂರ್ಣ ಕಾರ್ಯಕ್ರಮಗಳನ್ನು ಒಟ್ಟಿಗೆ ತರುವುದಕ್ಕೆ ಇದನ್ನು ಸಮರ್ಪಿಸಲಾಗಿದೆ.
ಅಂದ ಹಾಗೆ ಈ ಸಮ್ಮೇಳನವು ಮೂಲ ಸಂಶೋಧನಾ ತೀರ್ಮಾನಗಳು, ಹೊಸ ವಿಧಾನಗಳು ಮತ್ತು ನೈಜ ಫಲಿತಾಂಶಗಳನ್ನು ನೀಡುವ ಅಭಿವೃದ್ಧಿ ಪದ್ಧತಿಗಳ ಪ್ರಚಾರಕ್ಕಾಗಿ ಅನ್ವಯಿಕ ವಿಜ್ಞಾನಗಳ ಎಲ್ಲ ಕ್ಷೇತ್ರಗಳಲ್ಲಿನ ಸಂಶೋಧಕರು, ವೈದ್ಯಕೀಯ, ಆರೋಗ್ಯ ಕ್ಷೇತ್ರ, ವಿಜ್ಞಾನಿಗಳು, ತಂತ್ರಜ್ಞರು ಮತ್ತು ವಿದ್ವಾಂಸರನ್ನು ಒಟ್ಟುಗೂಡಿಸುತ್ತದೆ. ಭಾಗವಹಿಸುವವರು ವಿವಿಧ ದೇಶಗಳಲ್ಲಿ ತಮ್ಮ ಸಂಶೋಧನಾ ಯೋಜನೆಗಳನ್ನು ನೀಡಲು ತಮ್ಮ ಕ್ಷೇತ್ರಗಳ ಪ್ರಮುಖ ತಜ್ಞರೊಂದಿಗೆ ಸಂವಹನ ನಡೆಸಲು ಅವಕಾಶವಿದೆ.
ಶಿಕ್ಷಣಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಗುರುತಿಸಿ, ಐಎಎಂ ಅಧ್ಯಕ್ಷರಾದ ಎ.ಡಬ್ಲ್ಯು. ಸಂತೋಷ್ ಅವರು ರೇವಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಪಿ.ಶ್ಯಾಮರಾಜು ಅವರಿಗೆ ಅತ್ಯುತ್ತಮ ಶಿಕ್ಷಣತಜ್ಞ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಇದನ್ನೂ ಓದಿ | Raja Marga Column : ಅವನಿಗೆ ಎರಡೂ ಕಾಲಿಲ್ಲ; ಆದರೆ, ಮೌಂಟ್ ಎವರೆಸ್ಟೇ ಅವನ ಪಾದದ ಕೆಳಗಿತ್ತು!
ರೇವಾ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಶ್ಯಾಮರಾಜು ಅವರು ಅಧ್ಯಕ್ಷತೆ ವಹಿಸಿದ್ದರು. ರೇವಾ ವಿವಿ ಪ್ರೊ ಚಾನ್ಸಲರ್ ಉಮೇಶ್ ಎಸ್. ರಾಜು, ಉಪ ಕುಲಪತಿಗಳಾದ ಡಾ. ಎಂ. ಧನಂಜಯ, ಅಸೋಸಿಯೇಟ್ ಡೀನ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಬೋಧಕ ವೃಂದದವರಾದ ಡಾ ಪಿ. ವಿಶ್ವೇಶ್ವರ ರಾವ್ ಭಾಗವಹಿಸಿದ್ದರು.