Site icon Vistara News

Gurukula Kala Pratishtana | ಜ.22ರಂದು ಬೆಂಗಳೂರಿನಲ್ಲಿ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನ-2; ವಿವಿಧ ಸಾಧಕರಿಗೆ ಪ್ರಶಸ್ತಿ

Gurukula Kala Pratishtana

ಬೆಂಗಳೂರು: ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ (Gurukula Kala Pratishtana) ವತಿಯಿಂದ ಜನವರಿ ೨೨ ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮುದ್ದಿನಪಾಳ್ಯ ಮುಖ್ಯ ರಸ್ತೆಯ ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಳಿಯ ಸ್ಫೂರ್ತಿಧಾಮದಲ್ಲಿ ʼಗುರುಕುಲ ಕಲಾ ಸಾಹಿತ್ಯ ಸಮ್ಮೇಳನ-೨ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗುರುಕುಲ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಇದೇ ಸಂದರ್ಭದಲ್ಲಿ ದರ್ಶನ್‌ ನರಿಗೇಹಳ್ಳಿ ಸಂಸ್ಮರಣ ಗ್ರಂಥ ಸ್ಮರಣ ಸಂಚಿಕೆ ಬಿಡುಗಡೆ (ಗುರುಕುಲ ರತ್ನ) ಹಾಗೂ ಇನ್ನಿತರ ಕೃತಿಗಳ ಬಿಡುಗಡೆ, ಗುರುಕುಲ ಯಶೋಗಾಥೆ ವಿಜೇತರಿಗೆ ಬಹುಮಾನ ವಿತರಣೆ, ಉಚಿತ ಆರೋಗ್ಯ ತಪಾಸಣೆ ಹಾಗೂ ಕವಿಗೋಷ್ಠಿ ಆಯೋಜಿಸಲಾಗಿದೆ.

ಬೆಳಗ್ಗೆ ೧೦.30ರಿಂದ ೧೨ ಗಂಟೆವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಶಿವಾನಂದ ಮಹಾಸ್ವಾಮಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ, ನಟ ವಿ.ಮನೋಹರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ನ್ಯಾಯಾಧೀಶ, ನಿರ್ಮಾಪಕ, ಸಾಹಿತಿ ರೇವಣ್ಣ ಬಳ್ಳಾರಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಗುರುಕುಲ ಗೌರವಾಧ್ಯಕ್ಷ ವಿದ್ಯಾ ವಾಚಸ್ಪತಿ ಕವಿತಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಗುರುಕುಲ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ.ಶಿವರಾಜ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಖ್ಯಾತ ಗಾಯಕ, ರಂಗಭೂಮಿ ಮತ್ತು ಸಿನಿಮಾ ನಟ ಗುರುರಾಜ ಹೊಸಕೋಟೆ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್‌ ಸ್ವಾಗತ ಭಾಷಣ ಮಾಡಲಿದ್ದು, ಹಿರಿಯ ಸಾಹಿತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದೊಡ್ಡರಂಗೇಗೌಡ ಗುರುಕುಲ ಇತರೆ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.

ಪ್ರಶಸ್ತಿ ಪ್ರದಾನ
ಮಧ್ಯಾಹ್ನ ೧೨ರಿಂದ ೧.೩೦ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಾನಪದ ಖ್ಯಾತ ಗಾಯಕ ಗುರುರಾಜ್‌ ಹೊಸಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಗುರುಕುಲ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಪರಮ್‌ ಗುಬ್ಬಿ ಆಶಯನುಡಿ ಆಡಲಿದ್ದಾರೆ. ಗುರುಕುಲ ಕೇಂದ್ರ ಸಂಘಟನಾ ಕಾರ್ಯದರ್ಶಿ ಡಾ.ಅಪ್ಪಾಜಿಗೌಡ ಅವರು ಸ್ವಾಗತ ಕೋರಲಿದ್ದಾರೆ. ಹಲವು ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗುರುಕುಲ ಪ್ರಶಸ್ತಿ ಪುರಸ್ಕೃತರು

Exit mobile version