ಬೆಂಗಳೂರು: ನಾಡಿನ ಸಾಂಸ್ಕೃತಿಕ ಚಳವಳಿಯ ಸಂದರ್ಭದಲ್ಲಿ ಪ್ರಮುಖ ಸಂಸ್ಥೆಯಾದ ಹಂಸಜ್ಯೋತಿ ಟ್ರಸ್ಟ್‌ನ (Hamsajyothi Trust) 48ನೇ ವಾರ್ಷಿಕೋತ್ಸವ, 12 ಸಾಧಕೋತ್ತಮರಿಗೆ ʼಹಂಸ ಸಮ್ಮಾನ್ ಪ್ರಶಸ್ತಿ-2023ʼ ಪ್ರದಾನ ಹಾಗೂ ʼಕೃಷ್ಣಂ ಕಲಯ ಸಖಿʼ ಹಂಸ ಗಾನ, ನಾಟ್ಯ ಸಂಭ್ರಮವನ್ನು ಸೆ.27ರಂದು ಸಂಜೆ 4.30ಕ್ಕೆ ನಗರದ ಮಲ್ಲತ್ತಹಳ್ಳಿಯ ಕಲಾ ಗ್ರಾಮದ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಆಯೋಜಿಸಲಾಗಿದೆ.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ. ಕೃಷ್ಣ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ, ಬೆಂ. ನಗರ ಜಿಲ್ಲೆ ಅಬಕಾರಿ ಇಲಾಖೆ ಉಪ ಆಯುಕ್ತ ಡಾ.ಬಿ.ಆರ್.ಹಿರೇಮಠ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ನಾಡಿನ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಧಾರ್ಮಿಕ, ಸೇವಾ ವಲಯದ 12 ಸಾಧಕರಿಗೆ ʼಹಂಸ ಸಮ್ಮಾನ್ ಪ್ರಶಸ್ತಿ-2023 ಪ್ರದಾನ ಮಾಡಲಾಗುತ್ತದೆ.
ʼಹಂಸ ಸಮ್ಮಾನ್ʼ ಪ್ರಶಸ್ತಿ-2023ಕ್ಕೆ ಆಯ್ಕೆಯಾದವರು
1. ಟಿ.ವಿ.ವಿಶ್ವನಾಥ ಆಯ್ಯರ್, ವೇದ, ಜೋತಿಷ್ಯ, ವಾಸ್ತು ಶಾಸ್ತ್ರ ಪರಿಣತರು, ಬೆಂಗಳೂರು
2. ಡಾ. ಮೀರಾ ಕುಮಾರ್, ಮೈಸೂರು ಸಾಂಪ್ರದಾಯಿಕ ಶೈಲಿಯ ಖ್ಯಾತ ಚಿತ್ರಕಲಾವಿರು, ಬೆಂಗಳೂರು
3. ಎಸ್.ವೀರಭದ್ರಯ್ಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ ಅಭಿವೃದ್ಧಿಯ ಹರಿಕಾರ, ಬೆಂಗಳೂರು
4. ಎಸ್. ಗೀತಾ ಶಂಕರ್, ಭಾರತೀಯ ಸಾರ್ವಜನಿಕ ಸಂಪರ್ಕ ಪರಿಷತ್, ರಾಷ್ಟ್ರೀಯ ಅಧ್ಯಕ್ಷರು, ಬೆಂಗಳೂರು
5. ಆರ್.ಶ್ರೀನಿವಾಸ್, ವಿಕ್ಟೋರಿಯಾ ಆಸತ್ರೆಯ ಸಹಾಯಕ ಆಡಳಿತಾಧಿಕಾರಿ
6. ಡಾ.ಆರ್.ಸರ್ವಮಂಗಳ, ಬೆಂಗಳೂರು ವಿವಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್
7. ಬಿ.ಕೆ.ಮುರಳೀಧರ, ವಾಸ್ತು ಶಿಲ್ಪ ತಜ್ಞ, ಬೆಂಗಳೂರು
8. ಬಿ.ಕೆ.ರವಿಶಂಕರ್, ಶಾಸ್ತ್ರೀಯ ಗಾಯಕರು, ರಂಗ ಸಜ್ಜಿಕೆ, ಬೆಳಕು ಮತ್ತು ಧ್ವನಿ ತಜ್ಞ, ಬೆಂಗಳೂರು
9. ಜಯರಾಂಶೆಟ್ಟಿ, ಕ್ರೀಡಾ ಪಟು, ಕ್ರೀಡಾ ತರಬೇತುದಾರರು
10. ವಿದುಷಿ ರೂಪಶ್ರೀ ಮಧುಸೂಧನ, ನೃತ್ಯ ಕಲಾವಿದೆ, ನೃತ್ಯ ತರಬೇತುದಾರರು, ಬೆಂಗಳೂರು
11. ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕ, ಅಂಕಣಕಾರ, ಪ್ರಣವ ಮೀಡಿಯಾಹೌಸ್ ಪ್ರಕಾಶನ ನಿರ್ದೇಶಕ
12. ಸ್ನೇಹ ಕಪ್ಪಣ್ಣ, ವಚನ, ಜಾನಪದ ನೃತ್ಯ ಸಂಯೋಜಕಿ, ಬೆಂಗಳೂರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ರಂಗ ಸಂಘಟಕ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ, ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಜಿ.ಎಂ ಶಿರಹಟ್ಟಿ, ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ರಾಮಚಂದ್ರ ಹಾಗೂ ಎನ್.ಟಿ.ಪಿ.ಸಿ ಮುಖ್ಯ ಸಲಹೆಗಾರ ಎಂ.ಬಿ.ಜಯರಾಮ್ ಭಾಗವಹಿಸಿಲಿದ್ದಾರೆ.
ಕಳೆದ 48 ವರ್ಷಗಳಿಂದ ಹಲವಾರು ವೈಶಿಷ್ಟಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಹಂಸಜ್ಯೋತಿಯು ಈ ಬಾರಿ ‘ಕೃಷ್ಣಂ ಕಲಯ ಸಖಿ’ ಎಂಬ ಶೀರ್ಷಿಕೆಯಡಿ ನಾಡಿನ ಸುಪ್ರಸಿದ್ಧ ಕಲಾವಿದರಾದ ವಿಜಯ ಹಾವನೂರು , ರವೀಂದ್ರ ಸೊರಗಾವಿ ಗಣೇಶ ದೇಸಾಯಿ, ದಿವಾಕರ ಕಶ್ಯಪ್, ಹರೀಶ ನರಸಿಂಹ, ಗುರುರಾಜ ಹೊಳೆನರಸೀಪುರ, ಮಧುರ ರವಿಕುಮಾರ್ , ಶ್ರೀದೇವಿ ಗರ್ತಿಕೆರೆ , ಚಾಂದಿನಿ ಗರ್ತಿಕೆರೆ ಮತ್ತು ಎಚ್.ಕೆ .ಅನಘ ಅವರು ಶ್ರೀಕೃಷ್ಣ ಸ್ಮರಣೆಯ ವೈವಿಧ್ಯಮಯ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ.
ಡಾ.ಮಾಲಿನಿ ರವಿಶಂಕರ್ ನಿರ್ದೇಶನದ ಲಾಸ್ಯ ವರ್ಧನ ಟ್ರಸ್ಟ್ ನೃತ್ಯ ಶಾಲೆಯ ಕಲಾವಿದರು ಮತ್ತು ರೂಪಶ್ರೀ ಮಧುಸೂಧನ್ ನಿರ್ದೇಶನದ ನೃತ್ಯ ಗಂಗಾ ಪ್ರದರ್ಶನ ಕಲಾಕೇಂದ್ರದಿಂದ ಶ್ರೀಕೃಷ್ಣ ಸ್ಮರಣೆಯ ಶಾಸ್ತ್ರೀಯ ನೃತ್ಯ ನಡೆಯಲಿದೆ ಎಂದು ಹಂಸಜ್ಯೋತಿ ಟ್ರಸ್ಟ್‌ನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಎಂ.ಮುರಳೀಧರ ಮತ್ತು ಹಿರಿಯ ಟ್ರಸ್ಟಿ ಎಂ.ಆರ್.ನಾಗರಾಜ ನಾಯ್ಡು ತಿಳಿಸಿದ್ದಾರೆ.