Site icon Vistara News

Hamsalekha Birthday | ಚಂದನವನದ ನಾದಬ್ರಹ್ಮನಿಗೆ ಜನುಮದಿನದ ಸಂಭ್ರಮ

Hamsalekha Birthday

ಬೆಂಗಳೂರು : ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ ಹಂಸಲೇಖ ಅವರಿಗೆ ಗುರುವಾರ (ಜೂನ್‌ 23 ) ರಂದು ಹುಟ್ಟುಹಬ್ಬದ ಸಂಭ್ರಮ. ಸಂಗೀತದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ ಹಂಸಲೇಖ ಅವರು 71 ನೇ (Hamsalekha Birthday) ವಸಂತಕ್ಕೆ ಕಾಲಿಟ್ಟಿದ್ದಾರೆ.

ಅಭಿಮಾನಿಗಳು, ಚಿತ್ರರಂಗದ ಗಣ್ಯರು ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರುತ್ತಿದ್ದಾರೆ. ಹಂಸಲೇಖ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ: ಕವಿಶೈಲದಿಂದ ತೀರ್ಥಹಳ್ಳಿ ಪಾದಯಾತ್ರೆಗೆ ಹಂಸಲೇಖ ಚಾಲನೆ

ಹಂಸಲೇಖ ಅವರ ಮೂಲ ಹೆಸರು ಗಂಗರಾಜು. ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ನಂತರ ಕನ್ನಡ ಚಿತ್ರರಂಗದಲ್ಲಿಯೇ ಆಳುವ ನಿರ್ದೇಶಕನಾಗಿ ಬೆಳೆದು ನಿಂತರು. ಬಹುತೇಕ ಎಲ್ಲ ಸ್ಟಾರ್‌ ನಟರ ಸಿನಿಮಾಗಳಿಗೂ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

1986 ರಲ್ಲಿ ʼಹೆಣ್ಣೇ ನಿನಗೇನು ಬಂಧನʼ ಸಿನಿಮಾ ಮೂಲಕ ನಿರ್ದೇಶಕರಾದರು. 1987 ರಲ್ಲಿ ತೆರೆಕಂಡ ʼಪ್ರೇಮಲೋಕʼ ಸಿನಿಮಾ ಹಂಸಲೇಖರ ಕೀರ್ತಿಯನ್ನು ಹೆಚ್ಚಿಸಿತು.

ಸಂಗೀತ ಲೋಕಕ್ಕೆ ಕೊಂಡೊಯ್ದ ನಾದ ಬ್ರಹ್ಮ

ಎಲ್ಲ ಪ್ರಕಾರದ ಸಂಗೀತ ಕಂಪೋಸ್‌ ಮಾಡುವಲ್ಲಿ ಹಂಸಲೇಖ ಅವರು ಎತ್ತಿದ ಕೈ. ʼಇದು ನನ್ನ ನಿನ್ನ ಪ್ರೇಮ ಗೀತೆʼ, ʼಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕುʼ ಮುಂತಾದ ಹಾಡುಗಳನ್ನು ಬರೆದರು. ಇವರು ಕಥೆಗಾರ, ಚಿತ್ರಕಥೆ ಬರಹಗಾರ ಹಾಗೂ ಸಂಭಾಷಣೆಕಾರ ಮತ್ತು ಹಿನ್ನೆಲೆ ಗಾಯಕರೂ ಹೌದು. ಕಿಂದರಿ ಜೋಗಿ ಸಿನಿಮಾದ, “ಬಂದ ಬಂದ ಕಿಂದರಿ ಜೋಗಿʼʼ ಹಾಡಿನಲ್ಲಿ ಹಿನ್ನೆಲೆ ಗಾಯಕಾರಾಗಿದ್ದರು.

https://twitter.com/KSChithra/status/1539810324102127616?s=20&t=YD6eFLaIfSQV7cjjOJLobA

ನಾದ ಬ್ರಹ್ಮನ ಸಂಗೀತ ಕೊಡುಗೆ

3,500 ಹಾಡಿಗೆ ಸಾಹಿತ್ಯ, 375 ಚಿತ್ರಗಳಿಗೆ ಸಂಗೀತ ನೀಡಿದ ಏಕೈಕ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಹಂಸಲೇಖ ಪಾತ್ರರಾಗಿದ್ದಾರೆ. ಅವರ ಸಾಧನೆಗೆ ಸಿಕ್ಕ ಪ್ರಶಸ್ತಿಗಳು ಹಲವು. ರಾಷ್ಟ್ರ ಪ್ರಶಸ್ತಿ, 6 ಬಾರಿ ಫಿಲ್ಮ್‌ ಫೇರ್ ಪ್ರಶಸ್ತಿ, 10 ಬಾರಿ ರಾಜ್ಯ ಪ್ರಶಸ್ತಿ ಪಡೆದ ಪ್ರತಿಭಾವಂತರು. 1995 ರಲ್ಲಿ ಅತ್ತುತ್ತಮ ಸಂಗೀತ ನಿರ್ದೇಶಕನಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ರವಿಚಂದ್ರನ್‌-ಹಂಸಲೇಖ ಕಾಂಬಿನೇಷನ್‌

ಪ್ರೇಮಲೋಕದಿಂದ ಶುರುವಾದ ಇವರಿಬ್ಬರ ಕಾಂಬಿನೇಷನ್‌, ನನ್ನ ಯಶಸ್ಸಿನ ಹಿಂದೆ ಹಂಸಲೇಖರ ಪಾಲು ಇದೆ ಎಂದು ಸ್ವತಃ ರವಿಚಂದ್ರನ್‌ ಹೇಳಿಕೊಂಡಿದ್ದರು. ಎಲ್ಲವೂ ಸರಿಯಾಗಿ ಸಾಗುವಾಗಲೇ ಒಂದು ಹಂತದಲ್ಲಿ ಇದ್ದ ಜೋಡಿ ದೂರವಾಗಿದ್ದು ಮಾತ್ರ ಕನ್ನಡಿಗರಿಗೆ ಇನ್ನಿಲ್ಲದ ನಷ್ಟ ಎಂದರೆ ತಪ್ಪಿಲ್ಲ. ಸದ್ಯ ಅವರು ʼನಡೆದಾಡೋ ದೇವರ ಬಸವ ಭಾರತʼ ಮಿನಿ ಸಿನಿ ಸೀರಿಸ್‌ ಸಾರಥ್ಯ ವಹಿಸಿಕೊಂಡಿದ್ದಾರೆ.

Hamsalekha Birthday

ಇದನ್ನೂ ಓದಿ | ವಿದಾಯದ ವೇಳೆಯಲ್ಲಿ ನೆನಪು; ಗಾಯಕ ಕೆಕೆ ಕಂಠದ ಕನ್ನಡ ಹಾಡು ಕೇಳಿದ್ದೀರಾ?

Exit mobile version