Site icon Vistara News

HC Thammesh Gowda | ಬ್ಯಾಟರಾಯನಪುರದಲ್ಲಿ ಎಚ್.ಸಿ.ತಮ್ಮೇಶ್ ಗೌಡ ಜನಾಭಿಪ್ರಾಯ ಯಾತ್ರೆ

HC Thammesh Gowda

ಬೆಂಗಳೂರು: ಕೇಸರಿ ಫೌಂಡೇಶನ್ ಸ್ಥಾಪಿಸಿ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದಲ್ಲಿ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಬಿಜೆಪಿ ಮುಖಂಡ ಎಚ್.ಸಿ.ತಮ್ಮೇಶ್ ಗೌಡ (HC Thammesh Gowda), ನವ ಬ್ಯಾಟರಾಯನಪುರ ನಿರ್ಮಾಣದ ಉದ್ದೇಶದೊಂದಿಗೆ ಜನಾಭಿಪ್ರಾಯ ಸಂಗ್ರಹಿಸುವ ಸಲುವಾಗಿ ಬ್ಯಾಟರಾಯನಪುರ ಜನಾಭಿಪ್ರಾಯ ಯಾತ್ರೆ ಪ್ರಾರಂಭಿಸಿದ್ದಾರೆ.

ಕಳೆದ ವಾರ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಭಾಗವಾದ ಬೆಟ್ಟಹಲಸೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಾಭಿಪ್ರಾಯ ಯಾತ್ರೆ ನಡೆಯಿತು. ಸಾವಿರಾರು ಜನರು ಪಾಲ್ಗೊಂಡಿದ್ದರು. ಮೂರು ದಿನಗಳು ನಡೆ ಈ ಯಾತ್ರೆಯಲ್ಲಿ ತಮ್ಮೆಶ್‌ಗೌಡರು ಗ್ರಾಮ ವಾಸ್ತವ್ಯವಿದ್ದಿದ್ದು ವಿಶೇಷವಾಗಿತ್ತು.

ಎರಡನೇ ಹಂತದ ಜನಾಭಿಪ್ರಾಯ ಯಾತ್ರೆಯು ಕೊಡಿಗೇಹಳ್ಳಿ ವಾರ್ಡ್‌ನಲ್ಲಿ ನಡೆಯಿತು. ಡಿ.25 ರಂದು ಬೆಳಗ್ಗೆ 8.30ಕ್ಕೆ ಕೊಡಿಗೇಹಳ್ಳಿ ವಾರ್ಡ್‌ನ ಲೊಟ್ಟೆ ಗೊಲ್ಲಹಳ್ಳಿಯಲ್ಲಿಯ ಶ್ರೀ ಜಲಗೇರಮ್ಮ ದೇವಸ್ಥಾನದಿಂದ ಪ್ರಾರಂಭವಾಯಿತು. ಯಾತ್ರೆಯು, ದೇವಿನಗರ, ಭದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಟಾಟಾ ನಗರ ಮೂಲಕ ಸಾಗಿ ಕೊಡಿಗೇಹಳ್ಳಿ ಸರ್ಕಲ್‌ಗೆ ತಲುಪಿತು.

ಇದನ್ನೂ ಓದಿ | Janardhan reddy | ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದರೆ ನಾನೇನು ಮಾಡಲಿ?: ಶಾಸಕ ಕರುಣಾಕರ ರೆಡ್ಡಿ

ನಂತರ ಅಲ್ಲಿಂದ ಮುಂದುವರಿದು ಸಹಕಾರನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತಲುಪಿ ಯಾತ್ರೆಯು ಕೊನೆಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ದಾರಿಯುದ್ಧಕ್ಕೂ ಈ ಭಾಗದ ಮುಖಂಡರು ಪಟಾಕಿ ಸಿಡಿಸಿ, ಹಾರ ಹಾಕಿ ಆರತಿ ಮಾಡುವ ಮೂಲಕ ಸ್ವಾಗತ ಕೋರಿದರು. ನವ ಬ್ಯಾಟರಾಯನಪುರ ನಿರ್ಮಾಣಕ್ಕಾಗಿ ಜನರು ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ತಮ್ಮೇಶ್ ಗೌಡ ಮಾತಾನಾಡಿ, ಜನಾಭಿಪ್ರಾಯ ಯಾತ್ರೆಯಲ್ಲಿ ಜನರು ನನ್ನ ಜತೆ ಅನೇಕ ವಿಷಯಗಳನ್ನು ಹಂಚಿಕೊಂಡರು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸರಿಯಾದ ಸರಿಯಾದ ರಸ್ತೆ, ಕುಡಿಯುವ ನೀರು, ಒಳ್ಳೆಯ ಸರ್ಕಾರಿ ಆಸ್ಪತ್ರೆ ಸೇರಿ ಮೂಲ ಸೌಕರ್ಯಗಳಿಲ್ಲ. ಶೈಕ್ಷಣಿಕವಾಗಿ ಈ ಕ್ಷೇತ್ರವು ಬಹಳ ವಂಚಿತವಾಗಿದೆ ಎಂದು ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಕ್ಷೇತ್ರದಲ್ಲಿ ಅತಿ ಕಡಿಮೆ ಸರ್ಕಾರಿ ಪದವಿಪೂರ್ವ, ಪದವಿ ಕಾಲೇಜುಗಳಿವೆ. ಪ್ರಾಥಮಿಕ ಶಾಲೆಗಳು ಹಾಗೂ ಅಂಗನಾವಾಡಿಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಬಡವರು ಈ ಕ್ಷೇತ್ರದಲ್ಲಿ ಜೀವನ ನಡೆಸಲು ಅತ್ಯಂತ ಕಷ್ಟಕರವಾಗಿದೆ ಎಂಬ ಜನರ ಮಾತುಗಳನ್ನು ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಹದಿನೈದು ವರ್ಷಗಳಿಂದ ಶಾಸಕರು, ಕ್ಷೇತ್ರವನ್ನು ತಬ್ಬಲಿಯನ್ನಾಗಿ ಮಾಡಿ ಜನರು ಸಂಕಷ್ಟ ಎದುರಿಸುವಂತೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಈ ಬಾರಿ ಬ್ಯಾಟರಾಯನಪುರದಲ್ಲಿ ನಾವು ಜನರ ಆಶೀರ್ವಾದದೊಂದಿಗೆ ಬದಲಾವಣೆ ತರುತ್ತೇವೆ ಹಾಗೂ ಕ್ಷೇತ್ರದ ಜನರು ನೆಮ್ಮದಿಯಿಂದ ಜೀವನ ನಡೆಸುವಂತಹ ಅಭಿವೃದ್ಧಿಯನ್ನು ಮಾಡುತ್ತೇವೆ. ಬ್ಯಾಟರಾಯನಪುರವನ್ನು ಮಾದರಿ ವಿಧಾನ ಸಭಾ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ | MLAs Poaching Case | ಆಪರೇಷನ್‌ ಕಮಲ ಆರೋಪ, ಸಿಬಿಐ ತನಿಖೆಗೆ ಕೇಸ್‌ ವರ್ಗ, ತೆಲಂಗಾಣ ಸಿಎಂ ಕೆಸಿಆರ್‌ಗೆ ಹಿನ್ನಡೆ

Exit mobile version