Site icon Vistara News

Yuva Dasara: ಪ್ರೇಕ್ಷಕರಿಗೆ ಮುದ ನೀಡಿದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

Hindustani classical music

ಬೆಂಗಳೂರು: ಯುವಕ ಸಂಘದಿಂದ ಆಯೋಜಿಸಿರುವ ‘ಯುವ ದಸರಾʼ (Yuva Dasara) ಭಾಗವಾಗಿ ಜಯನಗರದ ವಿವೇಕ ಸಭಾಂಗಣದಲ್ಲಿ ಶನಿವಾರ ಸಂಜೆ ʼಹಿಂದುಸ್ತಾನಿ ಶಾಸ್ತ್ರೀಯ ಸಂಗೀತʼ ಕಾರ್ಯಕ್ರಮ ನೆರವೇರಿತು. ‌ಪಂಡಿತ್ ಕುಮಾರ ಮರಡೂರು ತಂಡದ ಕರ್ಣಾನಂದಕರ ಸಂಗೀತ ಪ್ರೇಕ್ಷಕರಿಗೆ ಮುದ ನೀಡಿತು.

ಯುವ ದಸರಾದ 7ನೇ ದಿನವಾದ ಶನಿವಾರ ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಂಗೀತ ಗಾಯನ, ಶಾಸ್ತ್ರೀಯ ಸಂಗೀತ ಗಾಯನ ಸ್ಪರ್ಧೆ ನಡೆಯಿತು. ಇದರಲ್ಲಿ ವಿವಿಧ ಕಾಲೇಜುಗಳಿಂದ 35 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.

ಸಂಜೆ 6 ಗಂಟೆಗೆ ಪಂಡಿತ್ ಕುಮಾರ ಮರಡೂರು ತಂಡ ʼಹಿಂದುಸ್ತಾನಿ ಶಾಸ್ತ್ರೀಯ ಸಂಗೀತʼ ನಡೆಸಿಕೊಟ್ಟಿತು. ಈ ವೇಳೆ ಠುಮರಿ, ದಾದ್ರಾ ಭಜನೆ, ಕನ್ನಡ ದಾಸ ಸಾಹಿತ್ಯ, ವಚನ ಸಾಹಿತ್ಯ ಹಾಗೂ ಕನ್ನಡ ಭಾವಗೀತೆಗಳನ್ನು ಪ್ರಸ್ತುತಿ ಪಡಿಸಿತು. ಜಯನಗರದ ಸುತ್ತಮುತ್ತಲಿನ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತವನ್ನು ಆನಂದಿಸಿದರು.

ಇದನ್ನೂ ಓದಿ | ವಿಸ್ತಾರ ಅಂಕಣ: ಸಮಾಜಭಂಜಕರನ್ನು ಗುರುತಿಸಿ, ದೂರವಿಡೋಣ

ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಸ್ರೋ ಇಸ್ಟ್ರ್ಯಾಕ್ ಉಪಯೋಜನಾ ನಿರ್ದೇಶಕಿ ರೂಪಾ ಎಂ.ವಿ. ಅವರು ಭಾಗವಹಿಸಿ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ನಂತರ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಂಗಳಯಾನ ಚಂದ್ರಯಾನ 1, 2 ಮತ್ತು 3ರ ಯೋಜನೆಗಳ ಕುರಿತು ಎಲ್ಲರಿಗೂ ವಿವರಿಸಿದರು.

ಅ. 24 ರವರೆಗೆ ವಿವಿಧ ಕಾರ್ಯಕ್ರಮ

ನಾಡಹಬ್ಬ ದಸರಾ ಅಂಗವಾಗಿ ಯುವಕ ಸಂಘದ (Yuvaka Sangha) ವತಿಯಿಂದ ಯುವ ದಸರಾ’ (ಅ.15ರಿಂದ 24ರವರೆಗೆ) ಭಾಗವಾಗಿ ಜಯನಗರದ ಯುವಪಥ ಸಭಾಂಗಣದಲ್ಲಿ ಅ. 24ರವರೆಗೆ ಪ್ರತಿ ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Exit mobile version