ಬೆಂಗಳೂರು: ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿಗಳ ಎಡವಟ್ಟಿನ ಪರಿಣಾಮ, ಮನೆ ಲೀಸ್‌ಗೆ (home lease) ಪಡೆದಿದ್ದ ಬಾಡಿಗೆದಾರರೊಬ್ಬರು ಮನೆಯೊಳಗೇ ಸೀಜ್ ಆದ ಘಟನೆ ನಡೆದಿದೆ.
ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಂಗೇರಿ ಉಪನಗರದಲ್ಲಿರುವ ಮೂರಂತಸ್ತಿನ ಮನೆಯ ಮೇಲೆ ತುಮಕೂರು ವೀರಶೈವ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಮನೆ ಮಾಲೀಕ 2 ಕೋಟಿ ಸಾಲ ಪಡೆದಿದ್ದರು. ಲೋನ್ ಕಟ್ಟದ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ (court notice) ಅನುಮತಿ ಪಡೆದು ಬ್ಯಾಂಕ್ ಸಿಬ್ಬಂದಿ ಸೀಜ್‌ಗೆ (home seizure) ಬಂದಿದ್ದರು.
ಗ್ರೌಂಡ್ ಫ್ಲೋರ್‌ನಲ್ಲಿ ಮನೆ ಮಾಲೀಕ ವಾಸವಾಗಿದ್ದು, ಎರಡನೇ ಫ್ಲೋರ್ ಮನೆ ಲೀಸ್‌ಗೆ ನೀಡಿದ್ದರು. ಬಾಡಿಗೆದಾರರು ಎರಡು ತಿಂಗಳ ಹಿಂದೆ ಹತ್ತು ಲಕ್ಷಕ್ಕೆ ಮನೆ ಲೀಸ್ ಪಡೆದಿದ್ದರು. ಮನೆ ಸೀಜ್ ಮಾಡುವಾಗ ಬಾಡಿಗೆದಾರ (tenant) ಮನೆಯಲ್ಲಿಯೇ ಮಲಗಿದ್ದರು. ಇದನ್ನು ಗಮನಿಸದೇ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದರು.
ಲೋನ್ ರಿಕವರಿಗೆ ಸಿಬ್ಬಂದಿಗಳು ಸಂಜೆ ಬಂದಿದ್ದು, ಲಾಕ್ ಮಾಡಿಕೊಂಡು ಹೋಗಿದ್ದಾರೆ. ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಬಾಡಿಗೆದಾರ ಯುವಕ ಮನೆಯೊಳಗೆ ಸೀಜ್ ಆಗಿದ್ದಾರೆ. ನಂತರ ಪೋಷಕರು ಠಾಣೆಗೆ ದೂರು ನೀಡಿ, ಮಗನನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ.
ಮನೆ ಮೇಲೆ ಕೇಸ್ ಇರುವ ಬಗ್ಗೆ ಮಾಹಿತಿ ಇಲ್ಲದೆ ಬಾಡಿಗೆದಾರರು ಹತ್ತು ಲಕ್ಷ ಪಾವತಿಸಿ ಓನರ್ ಜತೆಗೆ ಲೀಸ್ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ಯಾಂಕ್‌ವರು ಒಟ್ಟು ಮನೆಯನ್ನು ಸೀಜ್ ಮಾಡುವಾಗ ಬಾಡಿಗೆದಾರರ ಮನೆ ಕೂಡಾ ಸೀಜ್ ಆಗಿದೆ.
ಮನೆ ಮಾಲೀಕನ ಪರ ವಕೀಲರು ಹೇಳಿಕೆ ನೀಡಿದ್ದು, ಕೇಸನ್ನು ವಜಾ ಮಾಡಿದ್ದರೂ ಮನೆ ಸೀಜ್ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಮನೆ ಮಾಲೀಕರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಡಿಗೆದಾರರ ಸಂಬಂಧಿ ಪ್ರಸನ್ನ ಹೇಳಿಕೆ ನೀಡಿದ್ದು, ಮೂರು ತಿಂಗಳ ಹಿಂದೆ ನಮ್ಮ ತಂಗಿ 10 ಲಕ್ಷಕ್ಕೆ ಲೀಸ್ ಹಾಕಿಕೊಂಡಿದ್ದರು. ಯಾವುದೇ ಮಾಹಿತಿ ನೀಡದೇ ಮನೆ ಸೀಜ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Fraud Case: ಬಿಹಾರ ವಿವಿಯಿಂದ ನಕಲಿ ಸರ್ಟಿಫಿಕೇಟ್, ನೇಪಾಳ ಸಂಸದನ ಬಂಧನ