ಬೆಂಗಳೂರು: ಭಾರತೀಯ ಸೇನೆ ಸಾಕಷ್ಟು ಬಲಿಷ್ಠವಾಗಿದೆ (Independence Day 2024) ಹಾಗೆಯೇ ಅತ್ಯಾಧುನಿಕವಾಗಿದೆ. ಎಂತಹ ಶತ್ರುಗಳ ದಾಳಿಯನ್ನು ಕೂಡ ಹಿಮ್ಮೆಟ್ಟಿಸಬಲ್ಲುದು ಎಂದು ಕರ್ನಲ್ ವೆಂಕಟೇಶ್ ನಾಯಕ್ ಹೇಳಿದರು.
ನಗರದಲ್ಲಿ ಸುದಯ ಫೌಂಡೇಶನ್ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ಸ್ವತಂತ್ರ್ಯವಾದ ನಂತರ ಅನೇಕ ಸಂಘರ್ಷಗಳನ್ನು ದಾಟಿ ಬಂದಿದ್ದರ ಕುರಿತು ಇತಿಹಾಸ ಮೆಲುಕು ಹಾಕಿದರು. ಪಾಕಿಸ್ತಾನದೊಂದಿಗೆ ಮೊದಲ ಯುದ್ಧದಿಂದ ಪ್ರಾರಂಭಿಸಿ ಇತ್ತೀಚಿಗಿನ ಗ್ಯಾಲ್ವಾನ್ ಕಣಿವೆಯಲ್ಲಿನ ಘರ್ಷಣೆವರೆಗಿನ ಸಂಗತಿಗಳನ್ನು ವಿವರವಾಗಿ ಹಂಚಿಕೊಂಡರು.
33 ವರ್ಷಗಳ ತಮ್ಮ ಸೇವೆಯ ಅನುಭವಗಳನ್ನು ವಿವರಿಸುವುದರ ಜತೆಗೆ ಅಂದಿಗೂ ಇಂದಿಗೂ ಭಾರತೀಯ ಸೇನೆ ಅದೆಷ್ಟು ಬಲಿಷ್ಠ ಮತ್ತು ಆಧುನಿಕವಾಗಿದೆ ಎಂಬುದನ್ನು ಅವರು ತಿಳಿಸಿದರು.
ಇದನ್ನೂ ಓದಿ: Independence Day 2024: ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ: ಹೆಬ್ಬಾಳಕರ್
ಈ ವೇಳೆ ಮೀಡಿಯಾ ಕನೆಕ್ಟ್ ಹಾಗೂ ಸುದಯ ಫೌಂಡೇಷನ್ ಸಂಸ್ಥಾಪಕಿ ದಿವ್ಯಾ ರಂಗೇನಹಳ್ಳಿ ಮಾತನಾಡಿ, ಇಂದಿನ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿಕೊಡುವುದು ಅಗತ್ಯವಾಗಿದೆ. ಅದೆಷ್ಟೋ ಬಲಿದಾನಗಳ ನಂತರ ಇಂದು ನಾವು ಸ್ವತಂತ್ರರಾಗಿದ್ದೇವೆ. ಅವರೆಲ್ಲರನ್ನು ನಾವು ಸ್ಮರಿಸುವುದರ ಜತೆಗೆ ಸ್ವಾತಂತ್ರ್ಯದ ಮಹತ್ವವನ್ನು ಸಾರೋಣ ಎಂದು ಹೇಳಿದರು.
ಇದನ್ನೂ ಓದಿ: Job Alert: ಹೆಸ್ಕಾಂನ 338 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.