ಬೆಂಗಳೂರು: ಬೆಂಗಳೂರಿನ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಅಂಗವಾಗಿ ನಗರದಲ್ಲಿ ತಿರಂಗಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್‌ನ ಸೀನಿಯರ್ ಕೆಡೆಟ್‌ಗಳು ಹಾಗೂ ಏರ್‌ಫೋರ್ಸ್ ಸಿಬ್ಬಂದಿಯಿಂದ ಯುನಿಟ್‌ನ ಕಛೇರಿ ಯುವಿಸಿಇ ಕ್ಯಾಂಪಸ್, ಕೆ.ಆರ್. ಸರ್ಕಲ್‌ನಿಂದ ವಿಧಾನಸೌಧದವರೆಗೂ ಜರುಗಿತು.
ಇದನ್ನೂ ಓದಿ: Independence Day 2024: ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ: ಹೆಬ್ಬಾಳಕರ್
ಭಾರತವು ಸ್ವಾತಂತ್ರ್ಯ ಪಡೆದು 77 ವಸಂತಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಯುನಿಟ್‌ನ ವತಿಯಿಂದ ಪ್ರಧಾನಮಂತ್ರಿಯವರ ಒಂದು ಕೆಡೆಟ್ ಒಂದು ಗಿಡ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜದಲ್ಲಿ ಪರಿಸರ ಕಾಳಜಿಯನ್ನು ಹೆಚ್ಚಿಸುವ ಪ್ರಯುಕ್ತ ವಿವಿಧ ಶಾಲೆಗಳ ಎನ್‌ಸಿಸಿ ಕೆಡೆಟ್‌ಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಪರಿಸರ ಜಾಗೃತಿ ಮೂಡಿಸಲಾಯಿತು. ಯುನಿಟ್‌ನ ಹಲವು ಶಾಲೆಗಳು ಭಾಗವಹಿಸಿ ಸಾವಿರಾರು ಗಿಡಗಳನ್ನು ನೆಟ್ಟು, ಸಮಾಜದಲ್ಲಿ ಪರಿಸರ ಅರಿವನ್ನು ಮೂಡಿಸಲಾಯಿತು.
ಇದನ್ನೂ ಓದಿ: Job Alert: ಹೆಸ್ಕಾಂನ 338 ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ಯೂನಿಟ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ಹಾಗೂ ಇತರರು ಉಪಸ್ಥಿತರಿದ್ದರು.