ಬೆಂಗಳೂರು: ನವರಾತ್ರಿ ಹಿನ್ನೆಲೆಯಲ್ಲಿ ಯುವಕ ಸಂಘದಿಂದ ‘ಯುವ ದಸರಾʼ (Yuva Dasara) ಭಾಗವಾಗಿ ಜಯನಗರದ ವಿವೇಕ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ʼಭಾರತೀಯ ಶಾಸ್ತ್ರೀಯ ಫ್ಯೂಷನ್ʼ ಸಂಗೀತ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗಿಯಾಗಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ದಸರಾ 4ನೇ ದಿನವಾದ ಬುಧವಾರ ಬೆಳಗ್ಗೆ ಭಾರತೀಯ ಶಾಸ್ತ್ರೀಯ ತಾಳವಾದ್ಯಗಳ ಸ್ಪರ್ಧೆ ನಡೆಯಿತು. ಇದರಲ್ಲಿ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಸಂಜೆ 6 ಗಂಟೆಗೆ ಜಯನಗರದಲ್ಲಿರುವ ವಿವೇಕ ಸಭಾಂಗಣದಲ್ಲಿ ರುದ್ರ ತಂಡದಿಂದ “ಭಾರತೀಯ ಶಾಸ್ತ್ರೀಯ ಫ್ಯೂಷನ್” ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಗೀತ ಕಾರ್ಯಕ್ರಮವನ್ನು ಸರಸ್ವತಿ ಸ್ತುತಿಯೊಂದಿಗೆ ಪ್ರಾರಂಭಿಸಿ, ವಿವಿಧ ಸ್ತುತಿಗಳ ಮೂಲಕ ಪ್ರೇಕ್ಷಕರನ್ನು ರುದ್ರ ತಂಡ ರಂಜಿಸಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಕ್ರೀಡಾಪಟು, ಪದ್ಮಶ್ರೀ ಪುರಸ್ಕೃತ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರು ಭಾಗವಹಿಸಿ, ಯುವಕ ಸಂಘದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜಯನಗರ, ಜೆ.ಪಿ. ನಗರ, ಬಸವನಗುಡಿ ಭಾಗದ ಸುತ್ತಮುತ್ತಲಿನ ನೂರಾರು ಮಂದಿ ಭಾಗವಹಿಸಿದ್ದರು.
ಇದನ್ನೂ ಓದಿ | Navaratri Yellow Colour Fashion Tips: ನವರಾತ್ರಿ 5 ನೇ ದಿನದ ಹಳದಿ ವರ್ಣದ ಎಥ್ನಿಕ್‌ಲುಕ್ ಜಾದೂ
ಅ. 24 ರವರೆಗೆ ವಿವಿಧ ಕಾರ್ಯಕ್ರಮ
ಐತಿಹಾಸಿಕ ನಾಡಹಬ್ಬ ದಸರಾ ನಾಡಿನ ಕಲೆ ಮತ್ತು ಸಂಸ್ಕೃತಿಯ ವೈಭವಕ್ಕೆ ಹೆಸರುವಾಸಿಯಾಗಿದೆ. ಈ ಕಲೆ ಮತ್ತು ಸಂಸ್ಕೃತಿಯ ಪರಂಪರೆಯನ್ನು ಇನ್ನಷ್ಟು ಹೆಚ್ಚಿಸಲು ಯುವಕ ಸಂಘದ (Yuvaka Sangha) ವತಿಯಿಂದ ಜಯನಗರದ ಯುವಪಥ ಸಭಾಂಗಣದಲ್ಲಿ ;ಯುವ ದಸರಾ’ (ಅ.15ರಿಂದ 24ರವರೆಗೆ) ಆಯೋಜಿಸಲಾಗಿದೆ. ಅ.15ರಂದು ಕಾರ್ಯಕ್ರಮವನ್ನು ಉದ್ಘಾಟಿಸಲಾಗಿತ್ತು. ಇನ್ನೂ ಅ. 24ರವರೆಗೆ ಪ್ರತಿ ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಅ.19 – ಭಕ್ತಿ ಗೀತೆಗಳು ಮತ್ತು ತಬಲಾ ತರಂಗ: ಶೋಭಾ ಎನ್.ಎಸ್ ತಂಡದಿಂದ ಭಕ್ತಿ ಗೀತೆಗಳ ಗಾಯನ ಮತ್ತು ಗುರು ಸಮರ್ಥ ಸಂಗೀತ ವಿದ್ಯಾಲಯ ತಂಡದಿಂದ ತಬಲಾ ವಾದನ
ಅ.20 – ಕರುನಾಡ ಕವಯಿತ್ರಿಯರು: ಶ್ರೀ ರುದ್ರಾಕ್ಷ ನಾಟ್ಯಾಲಯ ತಂಡದಿಂದ ಭರತನಾಟ್ಯ ಪ್ರದರ್ಶನ
ಅ. 21 – ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ: ಪಂಡಿತ್ ಕುಮಾರ್ ಮರ್ದೂರು ಅವರಿಂದ ಸಂಗೀತ ಕಛೇರಿ
ಅ. 22 – ಸುಗಮ ಸಂಗೀತ: ನಾದಚೈತನ್ಯ ಅವರಿಂದ ಸುಗಮ ಸಂಗೀತ
ಮಕ್ಕಳ ವಿಶೇಷ ಕಾರ್ಯಕ್ರಮ: ಬೆ.10-12 ಗಂಟೆವರೆಗೆ ಮಕ್ಕಳಿಂದ ನೃತ್ಯ ಪ್ರದರ್ಶನ ಮತ್ತು ತಾಯಿ-ಮಗಳಾದ ಸೋನಾಲಿಕಾ ಮತ್ತು ಶ್ರೀನಿಕಾ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ
ಅ.23 – ದೇವಿ ಭಜನೆ, ನಾಮಾವಳಿ: ಶ್ರೀ ರಾಮಕೃಷ್ಣ ವಿದ್ಯಾರ್ಥಿ ಮಂದಿರದ ಸ್ವಾಮಿ ತದ್ಯುಕ್ತಾನಂದ ಮತ್ತು ತಂಡ
ಅ. 24 – ಸ್ನೇಹ ಮಿಲನ: ಯುವಕ ಸಂಘದ ಸ್ವಯಂ ಸೇವಕರು ಮತ್ತು ಹಿತೈಷಿಗಳ ಸ್ನೇಹ ಮಿಲನ
ಇದನ್ನೂ ಓದಿ | Navaratri Dandiya: ನವರಾತ್ರಿ ದಾಂಡಿಯಾ ಸಂಭ್ರಮಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ಹೇಗೆ ಪ್ರಯೋಜನ ನೋಡಿ!
ವಿವಿಧ ಸ್ಪರ್ಧೆಗಳು
ಯುವ ದಸರಾ ಪ್ರಯುಕ್ತ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 4ಗಂಟೆವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಏಕ ವ್ಯಕ್ತಿ ಸ್ಪರ್ಧೆ ಮತ್ತು ಗುಂಪು ಸ್ಪರ್ಧೆಗಳಿರಲಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಏಕ ವ್ಯಕ್ತಿ ಸ್ಪರ್ಧೆ ವಿಜೇತರಿಗೆ ಪ್ರಥಮ ಸ್ಥಾನ 5000 ರೂ., ದ್ವಿತೀಯ ಸ್ಥಾನ 3000 ರೂ., ತೃತೀಯ ಸ್ಥಾನ 2500 ರೂ. ನಗದು ಬಹುಮಾನ ಇರಲಿದೆ. ಅದೇ ರೀತಿ ಗುಂಪು ಸ್ಪರ್ಧೆಗಳ ವಿಜೇತರಿಗೆ ಪ್ರಥಮ ಸ್ಥಾನ 10,000 ರೂ., ದ್ವಿತೀಯ ಸ್ಥಾನ 8,000 ರೂ., ತೃತೀಯ ಸ್ಥಾನ 7,000 ರೂ. ಇರಲಿದೆ.
ಅ. 19 – ಸ್ಕಿಟ್, ಏಕಪಾತ್ರಾಭಿನಮಯ, ಕವನ ವಾಚನ
ಅ. 20 – ಗಾಯನ (ಗುಂಪು ಸ್ಪರ್ಧೆ)
ಅ.21 – ಶಾಸ್ತ್ರೀಯ ಗಾಯನ, ಅರೆ ಶಾಸ್ತ್ರೀಯ ಗಾಯನ (ಏಕ ವ್ಯಕ್ತ)