Site icon Vistara News

Constitution Day | ಸಂವಿಧಾನದಿಂದಲೇ ದೇಶದ ಆರ್ಥಿಕತೆ ಬೆಳೆದಿದೆ: ಉದ್ಯಮಿ ಅಚ್ಚುತ್ ಗೌಡ

Constitution Day

ಬೆಂಗಳೂರು: ಸಂವಿಧಾನದ ನೈಜ ಉಪಯೋಗದಿಂದ ನಮ್ಮ ಆರ್ಥಿಕತೆ ಬೆಳವಣಿಗೆ ಸಾಧ್ಯ. ಭಾರತೀಯ ಸಂವಿಧಾನದಿಂದಲೇ(Constitution Day) ಇಂದು ನಮ್ಮ ಆರ್ಥಿಕತೆ ಬೆಳೆದು ನಿಂತಿದೆ ಎಂದು ಉದ್ಯಮಿ, ಫಿಡಿಲಿಟಸ್ ಸಂಸ್ಥೆಯ ಸಂಸ್ಥಾಪಕ ಅಚ್ಚುತ್ ಗೌಡ ಹೇಳಿದರು.

ನಗರದ ಸೇಂಟ್ ಜೋಸೆಫ್ಸ್‌ ಶಾಲೆಯಲ್ಲಿ ಬೆಂಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಭಾರತೀಯರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗಿದೆ. ಸಂವಿಧಾನದ ಮೂಲ ತಿರುಳನ್ನು ಅರ್ಥ ಮಾಡಿಕೊಂಡರೆ ಮಾತ್ರ ನಮಗೆ ನೈಜ ಸ್ವಾತಂತ್ರ್ಯದ ಮಹತ್ವ ಗೊತ್ತಾಗುವುದು ಎಂದರು.

ಇದನ್ನೂ ಓದಿ | RBI Report | ತಮಿಳುನಾಡಿನಲ್ಲಿ ಅತಿ ಹೆಚ್ಚು ಫ್ಯಾಕ್ಟರಿ! ಎರಡನೇ ಸ್ಥಾನದಲ್ಲಿ ಯಾವ ರಾಜ್ಯ?

ಸಂವಿಧಾನವನ್ನು ಗೌರವಿಸುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯವಾಗಬೇಕು. ಸಂವಿಧಾನ ಜೀವಿಸುವ ಹಕ್ಕನ್ನು ಮಾತ್ರವಲ್ಲದೇ ಗೌರವಯುತವಾದ ವ್ಯವಹಾರ ಮಾಡುವ ಹಕ್ಕನ್ನೂ ನಮಗೆ ನೀಡಿದೆ. ಇದರಿಂದಲೇ ಭಾರತವು ಇಂದು ಆರ್ಥಿಕ ವಲಯದಲ್ಲಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತಿದೆ ಎಂದು ಹೇಳಿದರು.

ಜಾತಿ ಧರ್ಮಗಳಿಂದ ಕಿತ್ತಾಡುವ ಜನರು, ಎಲ್ಲರಿಗೂ ಸಮಾನ ಸಾಮಾಜಿಕ ಜೀವನದ ಹಕ್ಕನ್ನು ನೀಡಿರುವ ಸಂವಿಧಾನದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನವೂ ಪ್ರತಿಯೊಂದು ವರ್ಗದ ಜನರಿಗೂ ಸಮಾನ ಗೌರವವನ್ನು ನೀಡಿದೆ. ಆ ನಿಟ್ಟಿನಲ್ಲಿ ಸಂವಿಧಾನ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಧಾರ ಸ್ತಂಭಗಳೊಂದಿಗೆ ನಿಲ್ಲಲು ನಾವು ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.

ಇದಕ್ಕೂ ಮೊದಲು ನ್ಯಾಯಮೂರ್ತಿ ಜಾನ್ ಮೈಕಲ್ ಡಿ’ಕುನ್ಹಾ ಅವರು, ಸಂವಿಧಾನ ಪ್ರಸ್ತಾವನೆ ಭಾಗದ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸಿ.ಎನ್.ಎನ್ ರಾಜು, ಅಲ್ಮಿತ್ರಾ ಪಟೇಲ್, ಡಾ ಅಲ್ತಾಫ್ ಸೈಯದ್, ವಾಲ್ಟರ್ ಪ್ರಕಾಶ್ ಡಿಸೋಜಾ, ಡಾ ಶೋಭಾ ಸುದರ್ಶನ್, ಎಸಿಪಿ ರತ್ನಾಕರ ಶೆಟ್ಟಿ, ಎಸಿಪಿ ಮಹಾನಂದ ಮತ್ತಿತರು ಭಾಗವಹಿಸಿದ್ದರು.

ಇದನ್ನೂ ಓದಿ | ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಯೋಜನೆ ಶೀಘ್ರ ಪ್ರಾರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Exit mobile version