ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಬುಧವಾರ ಜ್ಯೇಷ್ಠ ಶುದ್ಧ ಬಿದಿಗೆಯ ಪರ್ವ ದಿನದಂದು ಶ್ರೀ ರಾಮನ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿತು. ಶಿಲಾನ್ಯಾಸ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಗಳು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಉಡುಪಿ ಕೃಷ್ಣನ ಪ್ರಸಾದ, ಸಾಲಿಗ್ರಾಮ ಶಿಲೆ, ನವರತ್ನ ಮತ್ತು ಸುವರ್ಣ ನಾಣ್ಯಗಳನ್ನು ಭೂಮಿಗೆ ಅರ್ಪಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರು, ಮಂದಿರ ನಿರ್ಮಾಣ ಉಸ್ತುವಾರಿ ನೃಪೇಂದ್ರ ಮಿಶ್ರಾ ಮುಂತಾದವರು ಪ್ರತ್ಯೇಕವಾಗಿ ನಮೂದಿಸಲಾಗಿದ್ದ ಬೃಹತ್ ಶಿಲೆಗಳಿಗೆ ವಿಧ್ಯುಕ್ತ ಪೂಜೆ ನೆರವೇರಿಸಿ ಶಿಲಾನ್ಯಾಸ ನೆರವೇರಿಸಿದರು.
ಇದನ್ನೂ ಓದಿ | ರಾಮ ಮಂದಿರವೇ ರಾಷ್ಟ್ರ ಮಂದಿರ ಎಂದ ಯೋಗಿ, ಅಯೋಧ್ಯೆಯಲ್ಲಿ ಗರ್ಭಗುಡಿಗೆ ಅಡಿಗಲ್ಲು
ಕಳೆದ ಮೂರು ದಿನಗಳಿಂದ ಈ ಸ್ಥಳದಲ್ಲಿ ವೈದಿಕರಿಂದ ಚತುರ್ವೇದ, ರಾಮಾಯಣಗಳ ಸಾಮೂಹಿಕ ಪಾರಾಯಣ ಹಾಗೂ ಯಜ್ಞಗಳನ್ನು ನೆರವೇರಿಸಲಾಗಿದೆ. ಸಮಾರಂಭದಲ್ಲಿ ನೂರಾರು ಸಂತರು ಮತ್ತು ಭಕ್ತರು ಪಾಲ್ಗೊಂಡಿದ್ದರು.
ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್, ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಮಹಾರಾಜ್ , ಸದಸ್ಯರಾದ ಪೇಜಾವರ ವಿಶ್ವಪ್ರಸನ್ನ ತೀರ್ಥರು, ಉ. ಪ್ರ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಎಲ್ ಆಂಡ್ ಟಿ ಕಂಪನಿಯ ಪ್ರಮುಖರು, ನೃಪೇಂದ್ರ ಮಿಶ್ರಾ , ವಿಹಿಂಪ ಕರ್ನಾಟಕದ ಪ್ರಮುಖರಲ್ಲಿ ಒಬ್ಬರಾದ ಗೋಪಾಲ್ ಜಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಅಯೋಧ್ಯೆಯ ರಾಮ ಮಂದಿರದ ಗರ್ಭ ಗೃಹಕ್ಕೆ ಜೂನ್ 1 ರಂದು ಸಿಎಂ ಯೋಗಿ ಆದಿತ್ಯನಾಥ್ ಶಿಲಾನ್ಯಾಸ