Site icon Vistara News

International Women’s Day: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ದಿನಾಚರಣೆ: ಎಂ.ಕೀರ್ತನ್‌ ಕುಮಾರ್‌ ನೇತೃತ್ವ

International Women's Day

#image_title

ಬೆಂಗಳೂರು: ನಗರದ ಪೀಣ್ಯ ದಾಸರಹಳ್ಳಿ ಕ್ಷೇತ್ರದ ಹಾವನೂರು ಬಡಾವಣೆಯಲ್ಲಿ ಮಹಿಳಾ ದಿನಾಚರಣೆ (International Women’s Day) ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವೀಲ್ ಚೇರ್, ವಾಕರ್ ಮತ್ತು ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಿ ಸನ್ಮಾನಿಸಲಾಯಿತು.

ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡರಾದ ಸೌಂದರ್ಯ ಪಿ.ಮಂಜಪ್ಪ ಹಾಗೂ ದಾಸರಹಳ್ಳಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಸ್ಥಾನದ ಆಕಾಂಕ್ಷಿಯಾದ ಎಂ. ಕೀರ್ತನ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ನಂತರ ಸೌಂದರ್ಯ ಪಿ. ಮಂಜಪ್ಪ ಮಾತನಾಡಿ, ಮಹಿಳೆಯರಿಗೆ ವಿಶೇಷವಾಗಿ ನಮ್ಮ ಕರೆಗೆ ಓಗೊಟ್ಟು ಬಂದಂತಹ ಎಲ್ಲಾ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಹೇಳಿದರು.

ಪಿ. ಕೀರ್ತನ್ ಕುಮಾರ್‌ ಅವರು ಮಾತನಾಡಿ, ನಮ್ಮ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ ಎಂದರೆ ಅದಕ್ಕೆ ಕಾರಣ ಮಹಿಳೆಯರು. ಸಂಸಾರದ ನೆಲೆಗಟ್ಟಿನಲ್ಲಿ ಜೀವಿಸುವ ನಾವೆಲ್ಲರೂ ಭೂತಾಯಿಯನ್ನು ಪೂಜಿಸಿ ಎಲ್ಲಾ ಕೆಲಸವನ್ನು ಆರಂಭಿಸುವವರು ಆಗಿದ್ದೇವೆ. ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಮಾನತೆ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಹೆಣ್ಣಿಗೂ ಸಮಾನತೆ ಸಿಗಬೇಕು. ಈ ವಿಶೇಷ ದಿನವನ್ನು ನಾನು ಮಹತ್ವದ ದಿನವೆಂದು ಭಾವಿಸುತ್ತೇನೆ ಎಂದರು.

ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸೋದರಿಯಾಗಿ ನಾವು ಹೆಣ್ಣಿಗೆ ಸ್ತ್ರೀ ಎಂದರೆ ಅಷ್ಟೇ ಸಾಕೆ, ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣದಿಂದ ಉನ್ನತ ಹುದ್ದೆಗೇರಿ ಸಂಸಾರ ಮತ್ತು ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿ ಮಹಿಳೆಯರದ್ದಾಗಿದೆ ಎಂದರು.

ಇದನ್ನೂ ಓದಿ | ಬೆಂಗಳೂರಿನಲ್ಲಿ ಮಾರ್ಚ್‌ 12ರಿಂದ ಎರಡು ದಿನಗಳ ಶಿಲ್ಪವಿದ್ಯಾ ಸಮುಚ್ಚಯ ಸಮ್ಮೇಳನ

ಮಹಿಳೆಯರು ಯಾರಿಗೂ ಕಡಿಮೆ ಇಲ್ಲ, ಏಕೆಂದರೆ ನಮ್ಮ ತಂದೆಯವರು ಶುರು ಮಾಡಿದಂತಹ ಒಂದು ಸಣ್ಣ ಸಂಸ್ಥೆ ಸಮಾಜದ ದೊಡ್ಡ ಸಂಸ್ಥೆಯಾಗಿ ನಿರ್ಮಾಣಗೊಂಡು ಸಾವಿರಾರು ಜನರಿಗೆ ಉದ್ಯೋಗ ಅವಕಾಶವನ್ನು ರೂಪಿಸಿದೆ. ಅವರ ಆಸೆಯಂತೆ ದಾಸರಹಳ್ಳಿ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಶಾಸಕ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ತಾವುಗಳು ಕ್ಷೇತ್ರದ ಅಭಿವೃದ್ಧಿಗಾಗಿ ತಮಗೆ ಅವಕಾಶ ನೀಡಬೇಕು ಎಂದು ಎಂ. ಕೀರ್ತನ್ ಕುಮಾರ್ ಕೋರಿದರು.

ಸುನಿತ ಮಂಜಪ್ಪ, ವೃಂದ ಅಡಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Exit mobile version