Site icon Vistara News

International Yoga day 2024 : ಅಕ್ಷರ ಯೋಗ ಕೇಂದ್ರದಿಂದ ಅಂತರಾಷ್ಟ್ರೀಯ ಯೋಗ ದಿನದಂದು 5 ಗಿನ್ನೆಸ್ ದಾಖಲೆ

International Yoga day 2024

ಬೆಂಗಳೂರು: ಖ್ಯಾತ ಯೋಗಿ ಮತ್ತು ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕ ಸಿದ್ದಾ ಅಕ್ಷರ ಅವರು ಅಂತಾರಾಷ್ಟ್ರೀಯ ಯೋಗ ದಿನದಂದು (International Yoga day 2024) 5 ಹೊಸ ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿ ಇತಿಹಾಸ ದಾಖಲಿಸಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳ ಸಾವಿರಾರು ಯೋಗಾಭ್ಯಾಸಿಗಳು ಮತ್ತು ಉತ್ಸಾಹಿಗಳು ನೌಕಾಸನ, ಕೌಂಡಿನ್ಯಾಸನ, ಹನುಮಾನಾಸನ, ಚಕ್ರಾಸನ, ನಟರಾಜಾಸನ, ಏಕಪಾದಾಸನ ಮತ್ತು ಸೂರ್ಯ ನಮಸ್ಕಾರ ಒಳಗೊಂಡು 5 ಆಸನಗಳನ್ನು ಬೆಂಗಳೂರಿನ ಅಕ್ಷರ ಯೋಗ ಕೇಂದ್ರದಲ್ಲಿ ಪ್ರದರ್ಶಿಸಿದರು. ಭಾರತೀಯ ಸೇನೆ, ಎನ್.ಸಿ.ಸಿ., ವಾಯುಪಡೆ, ಕರ್ನಾಟಕ ರಾಜ್ಯ ಪೊಲೀಸ್ ಅಲ್ಲದೆ ವಿಶೇಷ ಚೇತನ ವ್ಯಕ್ತಿಗಳು, ಅನಾಥಾಶ್ರಮದ ಮಕ್ಕಳು ಮತ್ತು ಉದ್ಯಮ ಹಾಗೂ ಕಾರ್ಪೊರೇಟ್ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

“ಆಸನಗಳು ಮತ್ತು ತಂತ್ರಗಳಲ್ಲದೆ ಯೋಗವು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದೊಂದಿಗೆ ಒಟ್ಟಾರೆ ಸ್ವಾಸ್ಥ್ಯದ ಪರಿಕಲ್ಪನೆಯಲ್ಲಿ ಯೋಗ ಮುಖ್ಯವಾಗಿದೆ. ಪ್ರಾಚೀನ ಯೋಗಾಭ್ಯಾಸವನ್ನು ಹೊಸ ಉತ್ಸಾಹದೊಂದಿಗೆ ಅಭ್ಯಾಸ ಮಾಡುವುದು ಮತ್ತು ವಿಶ್ವದಾದ್ಯಂತ ಮನೆ ಮನೆಯ ಅಭ್ಯಾಸವಾಗಿಸಲು ನಾವು ಸತತ ಪ್ರಯತ್ನ ನಡೆಸುತ್ತಿದ್ದೇವೆ. ವಿಶ್ವ ಯೋಗ ದಿನದಂದು ಭಾರತವಲ್ಲದೆ 20 ವಿವಿಧ ದೇಶಗಳ ಜನರನ್ನು ಒಳಗೊಂಡ 5 ಹೊಸ ಗಿನ್ನೆಸ್ ದಾಖಲೆಗಳನ್ನು ನಿರ್ಮಿಸಿರುವುದು ಯೋಗದ ಸರಿಸಾಟಿ ಇರದ ಶಕ್ತಿಗೆ ಸಲ್ಲಿಸಿದ ಗೌರವವಾಗಿದೆ. ಪ್ರದರ್ಶಿಸಿದ ಎಲ್ಲ ಆಸನಗಳೂ ಪ್ರತಿಯೊಬ್ಬರಿಗೂ ಮುಖ್ಯವಾಗಿ ಪ್ರತಿನಿತ್ಯದ ಜೀವನದಲ್ಲಿ ಅಸಂಖ್ಯ ಸವಾಲುಗಳನ್ನು ಎದುರಿಸುವ ಮಹಿಳೆಯರಿಗೆ ಅಸಂಖ್ಯ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತವೆ” ಎಂದು ಹಿಮಾಲಯದ ಸಿದ್ದಾ ಅಕ್ಷರ ಅವರು ಹೇಳಿದರು.

ಈ ಕಾರ್ಯಕ್ರಮದ ಹಿಂದಿನ ಆಲೋಚನೆಯು ಜಾಗತಿಕ ಒಗ್ಗಟ್ಟಿನ ಭಾವನೆ ಮೂಡಿಸುವುದು ಮತ್ತು ಯೋಗದ ಬಹುಮುಖಿ ಪ್ರಯೋಜನಗಳ ಕುರಿತು ಅರಿವನ್ನು ಮೂಡಿಸುವುದು. 5 ಗಿನ್ನೆಸ್ ವಿಶ್ವ ದಾಖಲೆಗಳ ಪ್ರಮಾಣವನ್ನು ಅಧಿಕೃತ ಪ್ರಕಟಣೆ ನಂತರ ಸಂವಹನಗಳ ಸಚಿವಾಲಯಗಳ ಅಡಿಯಲ್ಲಿ ಬರುವ ವಿಶೇಷ ಕವರ್ ಮತ್ತು ಅಂಚೆ ಇಲಾಖೆಗಳ ವಿಶೇಷ ಪೋಸ್ಟ್ ಮಾರ್ಕ್ ಮೂಲಕ ನೀಡಲಾಗುತ್ತದೆ. ಹಲವು ವಾರಗಳ ಸಮಗ್ರ ತರಬೇತಿ ನಂತರ ಭಾಗವಹಿಸಿದವರು 30 ಸೆಕೆಂಡುಗಳಿಂದ 5 ನಿಮಿಷಗಳವರೆಗೆ 7 ವಿಭಿನ್ನ ಆಸನಗಳನ್ನು ಪ್ರದರ್ಶಿಸಿದರು.

ಇದನ್ನೂ ಓದಿ: International Yoga day 2024: ಎಚ್ಚರವಾಗಿದ್ದೇ ನಿದ್ದೆ ಮಾಡಬಹುದೆ? ಯೋಗನಿದ್ರೆ ತಂತ್ರ ಕಲಿಯಿರಿ!

ಈ ಯಶಸ್ವಿ ಕಾರ್ಯಕ್ರಮವು ಅಕ್ಷರ ಯೋಗ ಕೇಂದ್ರದ ಯೋಗದ ಬದ್ಧತೆಗೆ ಸಾಕ್ಷಿಯಾಗಿದ್ದು ಅದರಲ್ಲಿ ಪರಿಣಾಮಕಾರಿ ಬೋಧನೆ ಮತ್ತು ವಿಶ್ವದಾದ್ಯಂತ ಉತ್ಸಾಹಕರ ಭಾಗವಹಿಸುವಿಕೆ ಒಳಗೊಂಡಿತ್ತು. ಇದಲ್ಲದೆ 10ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಐತಿಹಾಸಿಕ ದಾಖಲೆ ಬರೆಯಲು ಅಕ್ಷರ ಯೋಗ ಕೇಂದ್ರವು ಸರಣಿ ಚಟುವಟಿಕೆಗಳನ್ನು ಕೈಗೊಂಡಿದ್ದು ಅದು ಯೋಗದ ಪರಿವರ್ತನೀಯ ಶಕ್ತಿಯನ್ನು ಎತ್ತಿ ತೋರಿಸಲು ವಿನ್ಯಾಸಗೊಳಿಸಲಾಗಿದೆ. ಅಕ್ಷರ ಯೋಗ ಕೇಂದ್ರವು ಕಳೆದ ವರ್ಷ ವಶಿಷ್ಟಾಸನ, ಉಷ್ಟ್ರಾಸನ ಮತ್ತು ಹಲಾಸನಗಳನ್ನು ಕ್ರಮವಾಗಿ 45 ಸೆಕೆಂಡುಗಳು, 60 ಸೆಕೆಂಡುಗಳು ಮತ್ತು 90 ಸೆಕೆಂಡುಗಳು ಪ್ರದರ್ಶಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿತ್ತು.

Exit mobile version