ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಾದ ರೇವಾ ಸಂಸ್ಥೆ ಹಾಗೂ ದಿವ್ಯಾ ಇನ್ಸ್ಟಿಟ್ಯೂಟ್ ಸೇರಿ ಗುರುವಾರ 10 ಕಡೆ ಐಟಿ ದಾಳಿ(IT Raid) ನಡೆಸಲಾಗಿದ್ದು, ಇನ್ನೂ ಎರಡು ದಿನ ದಾಳಿ ಮುಂದುವರಿಯುವ ಸಾಧ್ಯತೆಯಿದೆ.
ಗುರುವಾರ ಬೆಳಗಿನ ಜಾವ 6 ಗಂಟೆಯಿಂದ ಪರಿಶೀಲನೆ ಶುರುವಾಗಿದೆ. ಗೋವಾ ಕರ್ನಾಟಕ ಐಟಿ ಅಧಿಕಾರಿಗಳಿಂದ ಜಂಟಿಯಾಗಿ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಸುಮಾರು 70 ವಾಹನಗಳಲ್ಲಿ 250 ಜನ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಾಕಷ್ಟು ಪ್ರಮಾಣದ ತೆರಿಗೆ ವಂಚನೆ ಕಂಡು ಬಂದಿದೆ ಎನ್ನಲಾಗಿದ್ದು, ಇನ್ನೂ ಎರಡು ದಿನಗಳ ಕಾಲ ಐಟಿ ಅಧಿಕಾರಿಗಳ ಪರಿಶೀಲನೆ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ದಿವ್ಯಶ್ರೀ ಡೆವಲಪರ್ಸ್ ಹಾಗೂ ಸಂಸ್ಥೆಯ ಮಾಲೀಕರ ಕುಟುಂಬಸ್ಥರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಉದ್ಯಮಿ ಶ್ಯಾಮ್ ರಾಜು ಹಾಗೂ ಸಹೋದರ ಶ್ರೀನಿವಾಸ್ ರಾಜು ನಿವಾಸ ಸೇರಿದಂತೆ ಬೆಂಗಳೂರಿನ 10 ಕಡೆ ಐಟಿ ದಾಳಿ ಮುಂದುವರಿದಿದೆ. ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಈ ದಾಳಿ ನಡೆಸಲಾಗುತ್ತಿದೆ. ಈ ಹಿಂದೆಯೂ ಐಟಿ ಅಧಿಕಾರಿಗಳು 4 ಬಾರಿ ಐಟಿ ದಾಳಿ ನಡೆಸಿದ್ದರು.
ಇದನ್ನೂ ಓದಿ: IT Raid | ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ