Site icon Vistara News

Independence Day : ಆಗಸ್ಟ್ 13ರಂದು ಬೆಂಗಳೂರಿನಲ್ಲಿ ಜಿಯೋಮಾರ್ಟ್ ಫ್ರೀಡಂ ರನ್

Jio Run

ಬೆಂಗಳೂರು : ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮದ ಹಿನ್ನೆಲೆಯಲ್ಲಿ ಜಿಯೋಮಾರ್ಟ್ ಪ್ರಾಯೋಜಕತ್ವದೊಂದಿಗೆ ‘ಅಡಿಡಾಸ್’ ಸಹಯೋಗದ ‘ಜಿಯೋಮಾರ್ಟ್ ಫ್ರೀಡಂ ರನ್’ ಆಗಸ್ಟ್ 13ರ ಭಾನುವಾರದಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದ ಗಂಗಾಧರ ಚೆಟ್ಟಿ ರಸ್ತೆಯ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್​​ನಲ್ಲಿ ನಡೆಯಲಿದೆ. ‘ನಿಮ್ಮ ಸ್ವಂತ ಓಟವನ್ನು ಓಡಿ, ನಿಮ್ಮ ಸ್ವಾತಂತ್ರ್ಯವನ್ನು ಆನಂದಿಸಿ’ ಎಂಬ ಧ್ಯೇಯದೊಂದಿಗೆ ನಡೆಯಲಿರುವ ಓಟದಲ್ಲಿ ಪಾಲ್ಗೊಳ್ಳಲು https://bit.ly/440hYGPನಲ್ಲಿ ಹೆಸರು ನೋಂದಾಯಿಸಿಕೊಳ್ಳಿ ಮತ್ತು ಓಟದ ಸ್ಥಳದಲ್ಲಿ ಸಮುದಾಯವನ್ನು ಸೇರಿಕೊಂಡು ಮೋಜಿನ ಭಾನುವಾರ ಆನಂದಿಸಿರಿ.

ಅಡಿಡಾಸ್ ಸಹಯೋಗದ ‘ಜಿಯೋಮಾರ್ಟ್ ಫ್ರೀಡಂ ರನ್’ ಎರಡು ವಿಭಾಗಗಳಲ್ಲಿ ನಡೆಯಲಿದೆ. ಬೆಳಗ್ಗೆ 5 ಗಂಟೆಯಿಂದ 10ಕೆ ಓಟದ ಸ್ಪರ್ಧೆ ನಡೆದರೆ, ಬೆಳಗ್ಗೆ 6ರಿಂದ 5ಕೆ ಓಟ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಾರದಲ್ಲಿ ನಡೆಯಲಿರುವ ಈ ಕೂಟದಲ್ಲಿ ನೂರಾರು ಫಿಟ್‌ನೆಸ್ ಉತ್ಸಾಹಿಗಳು ಮತ್ತು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಯಾವುದೇ ಶುಲ್ಕವಿಲ್ಲದೆ 18 ವರ್ಷ ಮೇಲ್ಪಟ್ಟ ಎಲ್ಲರೂ ಓಟದಲ್ಲಿ ಪಾಲ್ಗೊಳ್ಳಬಹುದಾಗಿದೆ. https://bit.ly/440hYGP ನಲ್ಲಿ ಸರಳವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು ಮತ್ತು ನಮ್ಮ ಮಹಾನ್ ರಾಷ್ಟ್ರದ ಒಗ್ಗಟ್ಟಿನ ಸಂಭ್ರಮ ಮತ್ತು ಗೌರವವನ್ನು ಜೀವನದ ಹುರುಪು, ಸಾಹಸ ಮತ್ತು ಸ್ವಾತಂತ್ರ್ಯದೊಂದಿಗೆ ಆಚರಿಸೋಣ.

ಇದನ್ನೂ ಓದಿ : World Cup 2023 : ವಿಶ್ವ ಕಪ್​ ನಮ್ಮದೇ; ರೋಹಿತ್ ಶರ್ಮಾ ವಿಶ್ವಾಸ

ಅಡಿಡಾಸ್ ಆ್ಯಪ್​ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಈ ಕೂಟಕ್ಕೆ ಪ್ರವೇಶ ಪಡೆಬಹುದು. ಡಿಜಿಟಲ್ ಫಿಟ್‌ನೆಸ್ ಸಮುದಾಯವನ್ನು ಈ ರನ್‌ಗೆ ಸೇರಲು ಮತ್ತು ಅವರ ಸಕ್ರಿಯ ವಾರಾಂತ್ಯಕ್ಕೆ ಸೇರಿಸಲು ಅನುವು ಮಾಡಿಕೊಡುತ್ತದೆ. ಓಟ ಪೂರ್ಣಗೊಂಡ ನಂತರ ಎಲ್ಲಾ ಓಟಗಾರರಿಗೆ ಪದಕಗಳು ಮತ್ತು ಇ-ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿಜೇತರು ಪದಕಗಳು, ಪ್ರಮಾಣಪತ್ರಗಳು ಮತ್ತು ಅತ್ಯಾಕರ್ಷಕ ಅಡಿಡಾಸ್ ಸರಕುಗಳನ್ನು ಪಡೆಯಲಿದ್ದಾರೆ. ಹೀಗಾಗಿ ಎಲ್ಲರೂ ತಡಮಾಡದೆ ಇಂದೇ ಹೆಸರು ನೋಂದಾಯಿಸಿರಿ.

ಜಿಯೋಮಾರ್ಟ್ ಫ್ರೀಡಂ ರನ್‌ನೊಂದಿಗೆ ಭಾನುವಾರ ಫನ್​ ಡೇ ಆಗಲಿದೆ.

ನೋಂದಣಿ ಲಿಂಕ್: https://bit.ly/440hYGP
ದಿನಾಂಕ: 13 ಆಗಸ್ಟ್, ಭಾನುವಾರ, 2023
ಸಮಯ: ಬೆಳಗ್ಗೆ 4:45ಕ್ಕೆ ಓಟಗಾರರು ಹಾಜರಿರಬೇಕು.
ಸ್ಥಳ: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್, ಗಂಗಾಧರ ಚೆಟ್ಟಿ ರಸ್ತೆ, ಹಲಸೂರು ಕೆರೆ, ಬೆಂಗಳೂರು.

Exit mobile version