ಬೆಂಗಳೂರು: ನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವಿವಿಧ ಲೇಖಕರ 8 ಪುಸ್ತಕಗಳು (Book Release) ಹಾಗೂ 2024ನೇ ಸಾಲಿನ ಕ್ಯಾಲೆಂಡರ್ ಅನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು. ನಾಡೋಜ ಡಾ. ವೂಡೆ ಪಿ.ಕೃಷ್ಣ ಅವರು ಕಾರ್ಯಕ್ರಮ ಉದ್ಘಾಟಿಸಿ, ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಕನ್ನಡ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರು ಪುಸ್ತಕ ಬಿಡುಗಡೆ ಮಾಡಿದರು, ಡಾ.ಶರಣು ಹುಲ್ಲೂರು ಅವರು ಕೃತಿಗಳನ್ನು ಕುರಿತು ಮಾತನಾಡಿದರು. ನಿಡಸಾಲೆ ಪುಟ್ಟಸ್ವಾಮಯ್ಯನವರು ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಲೇಖಕರಾದ ಆರ್.ಕೆ. ಮಧುಕರ್ ಅವರ ʼದೇಶ ವಿದೇಶದ ಅದ್ಭುತ ಲೋಕಕಥೆಗಳುʼ(ಸಪ್ನ ಬುಕ್ ಹೌಸ್), ಕೆ.ನಟರಾಜ್ ಅವರ ʼದುಬೈ ನಾಡಿನಲ್ಲಿ ಇಪ್ಪತ್ತು ದಿನಗಳುʼ (ಸುಧನ್ವ ಪಬ್ಲಿಕೇಷನ್ಸ್), ಎಸ್.ಆರ್. ವಿಜಯಶಂಕರ್ ಅವರ ʼಒಡನಾಟʼ (ವಸಂತ ಪ್ರಕಾಶನ), ಮಂಡಗದ್ದೆ ಶ್ರೀನಿವಾಸಯ್ಯನವರ ʼಸ್ವಾಮಿ ವಿವೇಕಾನಂದʼ (ನಿರಂತರ), ಶ್ರೀಧರ್ ರಾಮಲಿಂಗಪ್ಪನವರ ʼಅಸ್ತಿಯೋ ಅಸ್ತಿತ್ವವವೋʼ(ನಿರಂತರ), ಡಾ. ಶ್ರೀಧರ್ ಎಚ್.ಜಿ. ಇವರ ʼನೆನಪಾಗಿ ಉಳಿದವರುʼ (ಅನ್ನಪೂರ್ಣ ಪಬ್ಲಿಷಿಂಗ್ ಹೌಸ್), ನಿಡಸಾಲೆ ಪುಟ್ಟಸ್ವಾಮಯ್ಯನವರ ʼಬೆಳೆಯೋಣ ಬನ್ನಿʼ (ಗೀತಾಂಜಲಿ ಪಬ್ಲಿಕೇಷನ್ಸ್), ಹಾಗೂ ಬಿ.ದಿವ್ಯಾನಂದಮೂರ್ತಿಯವರ, ʼಅನುಭವದ ಜೇನಹನಿ ಅಮೃತದ ಸಂಜೀವಿನಿʼ (ಸ್ನೇಹ ಬುಕ್ ಹೌಸ್) ಸೇರಿ ಎಂಟು ಪುಸ್ತಕಗಳು ಬಿಡುಗಡೆಯಾದವು.
ಇದನ್ನೂ ಓದಿ | Raja Marga Column : ಗೀತೆ ಶಾಂತಿ ಮಂತ್ರವಲ್ಲ, ಕ್ಷಾತ್ರ ಮಂತ್ರ; ಜಗತ್ತಿನ ಬೆಸ್ಟ್ ಕೌನ್ಸೆಲಿಂಗ್!
ಕಾರ್ಯದರ್ಶಿಗಳಾದ ಆರ್. ದೊಡ್ಡಗೌಡ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಪರಶಿವಪ್ಪನವರು ವಂದನೆ ಸಲ್ಲಿಸಿದರು, ಪ್ರೊ. ಅರ್ಚನಾ ತೇಜಸ್ವಿಯವರು ಸಮಾರಂಭ ಕಾರ್ಯಕ್ರಮಗಳನ್ನು ನಿರೂಪಿಸಿದರು.