Site icon Vistara News

Kannada New Movie: ಮುತ್ತುರಾಜ್ ನಿರ್ದೇಶನದ ‘ಲಿಪ್ ಲಾಕ್’ ಚಿತ್ರಕ್ಕೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಚಾಲನೆ

Kannada new movie

ಬೆಂಗಳೂರು: ಒಂದೇ ಟೇಕ್‌ನಲ್ಲಿ ಚಿತ್ರೀಕರಣವಾಗಿದ್ದ “ಯಂಗ್ ಮ್ಯಾನ್” ಚಿತ್ರದ ನಿರ್ದೇಶಕ ಮುತ್ತುರಾಜ್ ನಿರ್ದೇಶನದ ಮುಂದಿನ ಚಿತ್ರ “ಲಿಪ್ ಲಾಕ್”. ಇತ್ತೀಚೆಗೆ ಈ ನೂತನ ಚಿತ್ರದ (Kannada New Movie) ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರ ಸಹೋದರಿ ಸ್ಪೂರ್ತಿ ಕೃಷ್ಣಮೂರ್ತಿ ಆರಂಭ ಫಲಕ ತೋರಿದರು. ನಿರ್ದೇಶಕರ ಪುತ್ರ ಲಿಖಿತ್ ಗೌಡ ಕ್ಯಾಮೆರಾ ಚಾಲನೆ ಮಾಡಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಎಲ್ಲರೂ ಅಂದುಕೊಂಡಿರುವ “ಲಿಪ್ ಲಾಕ್” ಬೇರೆ. ಆದರೆ “ಲಿಪ್ ಲಾಕ್” ನಿಜವಾದ ಅರ್ಥ ಬೇರೆ ಎಂದು ತಿಳಿಸುವ ನಿರ್ದೇಶಕ ಮುತ್ತುರಾಜ್, ಇದೊಂದು ಪರಿಶುದ್ಧ ಪ್ರೇಮಕಥೆ. ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಬಂದು ಎಲ್ಲರೂ ನೋಡಬಹುದಾದ ಕೌಟುಂಬಿಕ ಕಥೆಯೂ ಹೌದು. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತದೆ‌. ಕರಣ್ ಆರ್ಯನ್, ತ್ರಿವಿಕ್ರಮ್ ಹಾಗೂ ಚಿತ್ರದ ನಿರ್ಮಾಪಕರೂ ಆಗಿರುವ ಹೇಮಂತ್ ಕುಮಾರ್ ಈ ಚಿತ್ರದ ನಾಯಕರಾಗಿದ್ದು, ನಾಯಕಿಯರಾಗಿ ದೀಪ, ಜಗದೀಶ್, ಸೃಷ್ಟಿ, ನಿಹಾರಿಕಾ ನಟಿಸುತ್ತಿದ್ದಾರೆ. ಜಗಪ್ಪ, ಆನಂದ್, ಕರಿಬಸವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಲೋಕಿ ತವಸ್ಯ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ‌ ಎಂದರು.

ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಹೇಮಂತ್ ಸಿನಿಮಾಸ್ ಹಾಗೂ ಪರಿ ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ಮಾಣದ ಜತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದೇನೆ ಎಂದರು ಹೇಮಂತ್ ಕೃಷ್ಣಮೂರ್ತಿ.

ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ನನ್ನದು ಈ ಚಿತ್ರದಲ್ಲಿ ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ‌ ಎಂದರು ನಟ ಕರಣ್ ಆರ್ಯನ್.

ಇದನ್ನೂ ಓದಿ: Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

ನನ್ನ ಪಾತ್ರ ಕೂಡ ವಿಭಿನ್ನವಾಗಿದೆ. “ಬ್ಯಾಡ್ ಮ್ಯಾನರ್ಸ್” ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು”ಪದ್ಮಾವತಿ ” ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್. ಈ ವೇಳೆ ನಟಿಯರಾದ ದೀಪ ಜಗದೀಶ್ , ಸೃಷ್ಟಿ ಹಗೂ ನಿಹಾರಿಕಾ ಕೂಡ ಚಿತ್ರದ ಕುರಿತು ಮಾತನಾಡಿದರು.

Exit mobile version