ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ವತಿಯಿಂದ ನವೆಂಬರ್ 1 ರಿಂದ ಡಿಸೆಂಬರ್ 3 ರವರೆಗೆ 3ನೇ ʼಕನ್ನಡ ಪುಸ್ತಕ ಹಬ್ಬ – 2023ʼ (Kannada Pustaka Habba-2023) ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ನಡೆಯುವ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ʼಕನ್ನಡ ಪುಸ್ತಕ ಹಬ್ಬʼ ಉದ್ಘಾಟನಾ ಕಾರ್ಯಕ್ರಮವನ್ನು ನ. 1 ರಂದು ಬೆಳಗ್ಗೆ 11 ಗಂಟೆಗೆ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ಆವರಣದ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜನಪ್ರಿಯ ನಟ, ನಿರ್ದೇಶಕ ಹಾಗೂ ಸಂಸ್ಕಾರ ಭಾರತೀ ಪ್ರಾಂತ ಅಧ್ಯಕ್ಷ ಸುಚೇಂದ್ರ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ಪ್ರಜ್ಞಾಪ್ರವಾಹದ ರಾಷ್ಟ್ರೀಯ ಸಹ ಸಂಯೋಜಕ ರಘುನಂದನ್ ಅವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Sahithya Awards : ಡಾ. ಸಂಗಮೇಶ ಸವದತ್ತಿಮಠಗೆ ಆದಿಕವಿ ಪುರಸ್ಕಾರ, ಸತ್ಯನಾರಾಯಣ ಕಾರ್ತಿಕ್‌ಗೆ ವಾಗ್ದೇವಿ ಪ್ರಶಸ್ತಿ
ಕನ್ನಡ ಪುಸ್ತಕ ಹಬ್ಬದಲ್ಲಿ ಹೊಸ ಪುಸ್ತಕಗಳ ಬಿಡುಗಡೆ, ವಾರಾಂತ್ಯದಲ್ಲಿ ವಿಷಯ ತಜ್ಞರಿಂದ ಉಪನ್ಯಾಸ, ವಿಚಾರ ಸಂಕಿರಣ, ಸಂವಾದ, ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸಂಜೆಗಳು ನಡೆಯುತ್ತವೆ. ಪುಸ್ತಕ ಖರೀದಿಸಿದವರಿಗೆ ಶೇ. 50 ರವರೆಗೆ ರಿಯಾಯಿತಿ ಸಿಗಲಿದೆ. ಆನ್‌ಲೈನ್‌ನಲ್ಲಿ ಪುಸ್ತಕ ಖರೀದಿಸಲು www.sahityabooks.com ವೆಬ್‌ಸೈಟ್ಗೆ ಭೇಟಿ ನೀಡಿ.