ಬೆಂಗಳೂರು: ಬೆಂಗಳೂರು ದಕ್ಷಿಣದ ಎಸ್. ಕರಿಯಪ್ಪ ರಸ್ತೆಯ ಮುಜರಾಯಿ ಇಲಾಖೆ ಅಧೀನದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಹಾಗೂ ಬನಶಂಕರಿ ದೇವಿಗೆ ಭುವನೇಶ್ವರಿ ಅಲಂಕಾರ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದಲ್ಲಿ ಮೊದಲ ಬಾರಿ ಕನ್ನಡ ರಾಜ್ಯೋತ್ಸವ ಹಾಗೂ ಭುವನೇಶ್ವರಿ ಅಲಂಕಾರ (Karnataka Rajyotsava) ಮಾಡುತ್ತಿರುವುದು ವಿಶೇಷವಾಗಿದೆ.
ಸೇವಾಕರ್ತರು, ಪರಿಕಲ್ಪನೆ ಹಾಗೂ ಪ್ರಾಯೋಜಕರಾದ ಭಾರ್ಗವಿ ಹೇಮಂತ್, ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಹಯೋಗದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ, ವಿಶೇಷ ಅತಿಥಿಗಳಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕರು, ಸಾಹಿತಿ ಡಾ. ಕೆ. ಪಿ. ಪುತ್ತುರಾಯರು, ವೀರಯೋಧರಾದ ಬಿ. ಕುಮಾರಸ್ವಾಮಿ, ಸುಬೇದಾರ್ ಮೇಜರ್ ಮುನಿವೆಂಕಟಪ್ಪ ಹಾಗೂ ವಾಯುಪಡೆ ನಿವೃತ್ತ ಯೋಧ ಸಾರ್ಜೆಂಟ್ ಸುಭಾಷ್ ಭಲೇಖೈ ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ವಿವರ
ಬೆಳಗ್ಗೆ 9 ಗಂಟೆಗೆ – ಮಹಾಮಂಗಳಾರತಿ – ಆಶೀರ್ವಾದ ಪಡೆಯಲು ವಿಶೇಷ ಆಚರಣೆ
ಬೆಳಗ್ಗೆ 10 ಗಂಟೆಗೆ – ಧ್ವಜಾರೋಹಣ – ಕರ್ನಾಟಕದ ಪರಂಪರೆಯ ಏಕತೆ ಮತ್ತು ಹೆಮ್ಮೆಯ ಸಂಕೇತ
ಎಲ್ಲರಿಂದಲೂ ರಾಷ್ಟ್ರಗೀತೆ – ರಾಷ್ಟ್ರವನ್ನು ಗೌರವಿಸುವ ದೇಶಭಕ್ತಿಯ ಕ್ಷಣ
ಎಲ್ಲರಿಂದಲೂ ನಾಡಗೀತೆ – ಉತ್ಸಾಹದಿಂದ ನಾಡಗೀತೆ ಹಾಡುವ ಕ್ಷಣ
ಎಲ್ಲರಿಂದಲೂ ಪಥ ಸಂಚಲನ – ಕನ್ನಡ ಪ್ರೇಮವನ್ನು ಸಾರುವ ಘೋಷಣೆಗಳನ್ನು ಕೂಗುವುದು
ನಾಡಭಕ್ತಿ ಗೀತೆ ಗಾಯನ: ದೀಪಾ ರಾಘವೇಂದ್ರ ಮತ್ತು ತಂಡ ಹಾಗೂ ದಾಕ್ಷಾಯಿಣಿ ಮತ್ತು ತಂಡದಿಂದ ಕನ್ನಡ ನಾಡಭಕ್ತಿ ಗೀತೆಗಳ ಸಮೂಹ ಗಾಯನ ನಡೆಯಲಿದೆ.
ನೃತ್ಯ ಪ್ರದರ್ಶನಗಳು: ವೇದಾಂತ ಮಾಲ ಕಲಾ ಕುಟೀರದ ವಿದ್ಯಾರ್ಥಿಗಳು, ವಿದುಷಿ ಮಾಲ ವೆಂಕಟೇಶ್ ಅವರ ಶಿಷ್ಯರು ಹಾಗೂ ಹೇಮಾ ಗೌರಿ ಮತ್ತು ತಂಡದಿಂದ ನೃತ್ಯ ಪ್ರದರ್ಶನವಿರಲಿದೆ.
ಇದನ್ನೂ ಓದಿ | Kannada Rajyotsava: ಕನ್ನಡ ನಾಡು ʻಕರ್ನಾಟಕʼ ಆಗಿದ್ದು ಹೇಗೆ?
ಮಧ್ಯಾಹ್ನ 1 ಗಂಟೆಗೆ ವಿಶೇಷ ಊಟದ ವ್ಯವಸ್ಥೆ ಇರಲಿದ್ದು, ದೇವಾಲಯದ ಅಧಿಕಾರಿಗಳು ಭಾಗವಹಿಸುವ ಎಲ್ಲರಿಗೂ ವಿಶೇಷ ಊಟದ ವ್ಯವಸ್ಥೆ ಇರಲಿದೆ. ಸಂಜೆ 5 ಗಂಟೆಗೆ ಬನಶಂಕರಿ ಮೈದಾನದಲ್ಲಿ ಗಾಳಿಪಟ ಹಾರಿಸುವುದು, ದೀಪಗಳನ್ನು ಬೆಳಗಿಸುವುದರ ಮೂಲಕ ರಾಜ್ಯೋತ್ಸವ ಸಂಭ್ರಮ ಮಾಡಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ