ಬೆಂಗಳೂರು: ಕನ್ನಡ ರಾಜ್ಯೋತ್ಸವದ (Kannada Rajyotsava) ಅಂಗವಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿರುವ ಅವಳ ಹೆಜ್ಜೆ ಸಂಸ್ಥೆಯ 6ನೇ ವಾರ್ಷಿಕ ಹಬ್ಬ ʼಕನ್ನಡತಿ ಉತ್ಸವ-2022ʼ ಕಾರ್ಯಕ್ರಮವನ್ನು ನವೆಂಬರ್ 13ರಂದು ಬೆಳಗ್ಗೆ 10.30ಕ್ಕೆ ನಗರದ ಮಹಾಲಕ್ಷ್ಮಿ ಲೇಔಟ್ ಗೆಳೆಯರ ಬಳಗದ ಡಾ.ರಾಜಕುಮಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಾರಿಯ ಕನ್ನಡತಿ ಉತ್ಸವದಲ್ಲಿ ಎರಡು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ʼಮಿಸ್ ಮಹಾಲಕ್ಷ್ಮೀʼ ಒಂದು ವಿನೂತನ ರ‍್ಯಾಂಪ್ ವಾಕ್ ಅನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಇದರಡಿ “ಇದು ಫ್ಯಾಷನ್ ಶೋ ಅಲ್ಲ, ಪ್ಯಾಷನ್ ಶೋ” ಎಂಬ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದರಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಮ್ಮ ವೈಯಕ್ತಿಕ ಕನಸು, ಕಸುಬು ಮತ್ತು ಕಲೆಯನ್ನು ಉಡುಗೆ-ತೊಡುಗೆ, ವೇಷಭೂಷಣಗಳ ಮೂಲಕ ವೇದಿಕೆ ಮೇಲೆ ಪ್ರದರ್ಶಿಸಲು 30 ಸೆಕೆಂಡ್‌ಗಳ ಕಾಲಾವಕಾಶವಿರುತ್ತದೆ.
ನಂತರ “ಹಳೇ ಬೇರು, ಹೊಸ ಚಿಗುರು-ಇದು ತಲೆಮಾರುಗಳ ಬಾಂಧವ್ಯದ ನಡಿಗೆ” ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಒಂದು ತಲೆಮಾರು ಒಂದು ತಂಡವಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಬೇಕು. ಪ್ರತಿ ತಂಡಕ್ಕೆ 1 ನಿಮಿಷ ಕಾಲಾವಕಾಶವಿದ್ದು, ಬಾಂಧವ್ಯವನ್ನು ಒಂದು ವಿಶೇಷ ಥೀಮ್ ಮೂಲಕ ಪ್ರದರ್ಶಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಅಕ್ಟೋಬರ್ 31ರೊಳಗೆ ಗೂಗಲ್ ಫಾರ್ಮ್ ಲಿಂಕ್ ಮೂಲಕ
ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ನಿರ್ದೇಶಕಿ ದೀಪಾ ಅವರ ಮೊ. 9740022909ಕ್ಕೆ ಸಂಪರ್ಕಿಸಬಹುದು.
ಇದನ್ನೂ ಓದಿ | Aggregator App | ಓಲಾ, ಉಬರ್, ರ‍್ಯಾಪಿಡೋ ಸಹವಾಸ ಕೈಬಿಟ್ಟ 30 ಸಾವಿರ ಆಟೋ ಚಾಲಕರು!