ಬೆಂಗಳೂರು: ನಗರದ ದೂರವಾಣಿ ನಗರದ ಐ.ಟಿ.ಐ ಸೆಂಟ್ರಲ್ ಶಾಲೆಯ ಎನ್‌ಸಿಸಿ ಟ್ರೂಪ್‌ನ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಮಕ್ಕಳಿಂದ ಕಾರ್ಗಿಲ್ ವಿಜಯ್ ದಿವಸದ (Kargil Vijay Diwas) ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್?
ಎನ್‌ಸಿಸಿ ಕೆಡೆಟ್‌ಗಳಿಂದ ವೀರಯೋಧರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ, ಗೌರವ ನಮನ ಸಲ್ಲಿಸಿ, ಪರೇಡ್ ನಡೆಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ವೇಳೆ ಅಮರರ ಬಗ್ಗೆ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಅಂಕಣಗಳನ್ನು ವಾಚಿಸಿದರು. ಬಳಿಕ ಹಾಡು ಮತ್ತು ನೃತ್ಯದ ಮೂಲಕ ನಮನ ಸಲ್ಲಿಸಿದರು. ಎನ್.ಸಿ.ಸಿ. ಅಧಿಕಾರಿ ಬಾಲಕೃಷ್ಣ ವಿ.ಎಚ್. ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: Bengaluru Power Cut: ಜು.27, 28, 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಪೊನ್ಮಲಾರ್, ಉಪಪ್ರಾಂಶುಪಾಲೆ ಶೈಲಜಾ ಆರಾಧ್ಯ, ಮುಖ್ಯ ಶಿಕ್ಷಕಿ ಅರುಣಾ ಜಾನಕಿರಾಮನ್ ಉಪಸ್ಥಿತರಿದ್ದರು.