Site icon Vistara News

ʼಕರ್ನಾಟಕ ಗತ ವೈಭವʼ ಪುಸ್ತಕವನ್ನು ಜನಪ್ರತಿನಿಧಿಗಳು ಓದಬೇಕು: ಡಾ.ಎಂ.ಎಸ್. ಆಶಾದೇವಿ

Alur Venkata Raos birth anniversary celebration

ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ಜನ್ಮ ದಿನಾಚರಣೆ ಹಾಗೂ ವಚನ ಪಿತಾಮಹ ಡಾ. ಶ್ರೀ ಫ.ಗು.ಹಳಕಟ್ಟಿಯವರ ದಿವ್ಯ ಸ್ಮರಣೆ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

ನಂತರ ಮಹಾರಾಣಿ ಕ್ಲಸ್ಟರ್ ವಿಶ‍್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಎಂ.ಎಸ್ ಆಶಾದೇವಿ ಅವರು ಮಾತನಾಡಿ, ಜನಪ್ರತಿನಿಧಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಆಲೂರು ವೆಂಕಟರಾಯರು ಬರೆದಿರುವ ಕರ್ನಾಟಕದ ಇತಿಹಾಸದ ಬಗ್ಗೆ ಸಮಗ್ರವಾದ ಚಿತ್ರಣ ನೀಡುವ “ಕರ್ನಾಟಕ ಗತ ವೈಭವ” ಪುಸ್ತಕವನ್ನು ಓದಲು ನೀಡಬೇಕು ಎಂದು ತಿಳಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರು ಮಾತನಾಡಿ, ವಿಶ್ವಸಾಹಿತ್ಯದಲ್ಲಿ ವಚನ ಸಾಹಿತ್ಯ ಅತ್ಯುನ್ನತ ಸಾಹಿತ್ಯವಾಗಿದೆ. ಫ ಗು. ಹಳಕಟ್ಟಿಯವರು ಕನ್ನಡದ ಮ್ಯಾಕ್ಸ್ ಮುಲ್ಲರ್, ಬಿ.ಎಲ್.ಡಿ.ಇ ಸಂಸ್ಥೆಯ ಪಿತಾಮಹ ಆಗಿದ್ದಾರೆ. ಅವರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ತಿಳಿಸಿದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಬಡತನ ನಿರ್ಮೂಲನೆಗೆ ವಿಶ್ವ ಸಂಸ್ಥೆ ಶ್ಲಾಘನೆ, ಇನ್ನಷ್ಟು ಹಾದಿ ಕ್ರಮಿಸಬೇಕಿದೆ

ಹಿರಿಯ ಚಿಂತಕರು ಹಾಗೂ ಸಾಹಿತಿ ಪ್ರೊ. ಕೆ.ಇ. ರಾಧಾಕೃಷ್ಣ, ಅವರು ಮಾತನಾಡಿ, ಕರ್ನಾಟಕದಲ್ಲಿ ಭಕ್ತಿ ಪಂಥದ ಜತೆ ಜತೆಯಾಗಿ ವಚನ ಸಾಹಿತ್ಯ ಬೆಳೆದು ಬಂದು ವಿಜೃಂಭಿಸಿತು. ಇದರ ಬಗ್ಗೆ ಅಲ್ಲಮನ ವಚನದಲ್ಲಿ 18 ಉಪನಿಷತ್ತುಗಳ ಉಲ್ಲೇಖವಿದೆ. ವಚನ ಸಾಹಿತ್ಯಕ್ಕೆ ಫ.ಗು. ಹಳಕಟ್ಟಿಯವರ ಕೊಡುಗೆ ಅಪಾರ ಎಂಬುದಾಗಿ ತಿಳಿಸಿದರು

Alur Venkata Raos birth anniversary

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ವೇಳೆ ʼಕರ್ನಾಟಕ ಗತ ವೈಭವʼ ಪುಸ್ತಕ ಜನಪ್ರತಿನಿಧಿಗಳಿಗೆ ನೀಡಬೇಕು ಎಂಬ ಪ್ರಾಧ್ಯಾಪಕಿ ಡಾ.ಎಂ.ಎಸ್ ಆಶಾದೇವಿ ಅವರ ಸಲಹೆ ಬಗ್ಗೆ ಪ್ರತಿಕ್ತಿಯಿಸಿ, ಈ ಕುರಿತು ವಿಧಾನಸಭೆ, ವಿಧಾನ ಪರಿಷತ್‌ ಸಭಾಧ್ಯಕ್ಷರ ಗಮನಕ್ಕೆ ತರುವುದಾಗಿ ತಿಳಿಸಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಜಗತ್ತಿನಲ್ಲಿ ಭರವಸೆ ಸೃಷ್ಟಿಸಿ ; ರೋಟರಿಯ ಈ ವರ್ಷದ ಘೋಷ ವಾಕ್ಯ

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ, ಹಿರಿಯ ಸರ್ಕಾರಿ ಅಭಿಯೋಜಕರಾದ ಸಂತೋಷ್ ಹಾನಗಲ್, ಬಿ.ಎಸ್. ಪಾಟೀಲ್, ಎಫ್‌.ಕೆ.ಸಿ.ಸಿ.ಐ ಮಹಾಸಂಸ್ಥೆ ಅಧ್ಯಕ್ಷ ಗೋಪಾಲ ರೆಡ್ಡಿ, ಸೆಕ್ರಟರಿ ಜನರಲ್ ಲೋಕನಾಥ, ಕಾಸರಗೋಡಿನ ಪತ್ರಕರ್ತ ಸುಬ್ರಮಣ್ಯ, ಗೋನಾಜೆ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಶಾಖಾಧಿಕಾರಿ ಪುಷ್ಪಾ ಹಾಗೂ ವಿಜಯಪುರ, ಕಾಸರಗೋಡು, ಮಹಾರಾಷ್ಟ್ರ ರಾಜ್ಯ ಹಾಗೂ ಇತರೆ ಗಡಿ ಭಾಗದ ಗಣ್ಯರು ಹಾಗೂ ಗಡಿ ಪ್ರಾಧಿಕಾರದ ಸಿಬ್ಬಂದಿ ಭಾಗವಹಿದ್ದರು.

Exit mobile version