Site icon Vistara News

Karnataka Weather : ರಾಜ್ಯದಲ್ಲಿ ಕಡಿಮೆ ಆಯಿತಾ ಚಳಿ ಹವಾ?

Cold wave conditions Reduced in the state

ಬೆಂಗಳೂರು: ರಾಜ್ಯಾದ್ಯಂತ ಒಣಹವೆಯೇ ಮುಂದುವರಿಯಲಿದೆ. ರಾತ್ರಿ ಚಳಿಯಿದ್ದರೂ, ಹಗಲಿನಲ್ಲಿ ಬಿಸಿಲು ಇರಲಿದೆ. ಇಷ್ಟು ದಿನ ಥಂಡಿ ಗಾಳಿ ಬೀಸುತ್ತಿತ್ತು, ಇದೀಗ ಆ ಪ್ರಮಾಣ ಕಡಿಮೆ ಆಗಿದೆ. ಬಿಸಿಲ ತಾಪ ಏರಿಕೆ ಆಗಲಿದೆ.

ಬೆಂಗಳೂರಲ್ಲಿ ಬೆಳಗಿನ ಜಾವ ಮಂಜು ಮುಸುಕಲಿದೆ. ಆಕಾಶವು ನಿರ್ಮಲವಾಗಿರಲಿದ್ದು, ಮಧ್ಯಾಹ್ನದಂದು ಬಿಸಿಲು ಹೆಚ್ಚಿರಲಿದೆ. ಚಳಿಯ ತೀವ್ರತೆಯು ಕಡಿಮೆ ಆಗಿದೆ. ಗರಿಷ್ಠ ಉಷ್ಣಾಂಶ 31 ಹಾಗೂ ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡಿನ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಒಣಹವೆ ಇರಲಿದೆ. ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ, ತುಮಕೂರಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣ ಹವೆ ಇರಲಿದೆ. ಕೆಲವು ಭಾಗಗಳಲ್ಲಿ ಗರಿಷ್ಠ ಉಷ್ಣಾಂಶವು ಏರಿಕೆ ಆಗಲಿದೆ.

ಇದನ್ನೂ ಓದಿ: Abuse case : ಯುವತಿ ಎದುರಿಗೆ ಹಸ್ತಮೈಥುನ ಮಾಡಿಕೊಂಡ ವಿಕೃತಿ ಅರೆಸ್ಟ್‌

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 31 ಡಿ.ಸೆ -17 ಡಿ.ಸೆ
ಮಂಗಳೂರು: 33 ಡಿ.ಸೆ – 21 ಡಿ.ಸೆ
ಚಿತ್ರದುರ್ಗ: 31 ಡಿ.ಸೆ – 14 ಡಿ.ಸೆ
ಗದಗ: 33 ಡಿ.ಸೆ – 18 ಡಿ.ಸೆ
ಹೊನ್ನಾವರ: 35 ಡಿ.ಸೆ- 19 ಡಿ.ಸೆ
ಕಲಬುರಗಿ: 33 ಡಿ.ಸೆ – 19 ಡಿ.ಸೆ
ಬೆಳಗಾವಿ: 31 ಡಿ.ಸೆ – 15 ಡಿ.ಸೆ
ಕಾರವಾರ: 35 ಡಿ.ಸೆ – 19 ಡಿ.ಸೆ

ಇದನ್ನೂ ಓದಿ: Physical Abuse : ಬೆಟ್ಟಿಂಗ್ ಕಟ್ಟಿ ಯುವತಿ ಸೊಂಟ ಮುಟ್ಟಿದವನ ಬೆಂಡೆತ್ತಿದ ಪೊಲೀಸರು

ವಿಂಟರ್‌ ಹಾಲಿಡೇ ಫ್ಯಾಷನ್‌; ಗಮನ ಸೆಳೆದ ಲೂಸ್‌ ಮಾದ ಫ್ಯಾಮಿಲಿಯ ಡ್ರೆಸ್ ಕೋಡ್!

ಸ್ಯಾಂಡಲ್‌ವುಡ್‌ ನಟ ಲೂಸ್‌ ಮಾದ ಯೋಗಿ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಿಂಟರ್‌ ಹಾಲಿಡೇ ಫ್ಯಾಷನ್‌ಗೆ (Star couple winter fashion) ಸೈ ಎಂದಿದ್ದಾರೆ. ಪತ್ನಿ ಸಾಹಿತ್ಯ ಹಾಗೂ ತಮ್ಮ ಮಗಳೊಂದಿಗೆ ವಿಂಟರ್‌ ಹಾಲಿಡೇ ಫ್ಯಾಷನ್‌ವೇರ್‌ನಲ್ಲಿ ಕಾಣಿಸಿಕೊಂಡಿರುವ ಅವರು ಹಿಮಾಚಲ್‌ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಪರ್ಫೆಕ್ಟ್ ಹಾಲಿ ಡೇ ಡ್ರೆಸ್‌ಕೋಡ್‌ ಪಾಲಿಸಿರುವ ಅವರೆಲ್ಲರ ಸೀಸನ್‌ವೇರ್‌ ಬಗ್ಗೆ ಫ್ಯಾಷನ್‌ ವಿಮರ್ಶಕರ ರಿವ್ಯೂ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಸ್ಪಾಟ್‌ಗೆ ತಕ್ಕಂತೆ ಬದಲಾಗುವ ವಿಂಟರ್‌ ಫ್ಯಾಷನ್‌

“ಹಾಲಿ ಡೇ ಟ್ರಾವೆಲ್‌ನಲ್ಲಿ ಅದರಲ್ಲೂ ವಿಂಟರ್‌ ಸೀಸನ್‌ನ ಟ್ರಾವೆಲ್‌ನಲ್ಲಿ ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಕಡ್ಡಾಯ. ಇಲ್ಲವಾದಲ್ಲಿ ಹವಮಾನ ಬದಲಾದಂತೆ ಆರೋಗ್ಯಕ್ಕೂ ಧಕ್ಕೆಯಾಗಬಹುದು. ಹಾಗಾಗಿ ನಾರ್ತ್ ಇಂಡಿಯಾ ಟ್ರಾವೆಲ್‌ ಮಾಡುವವರು ಆದಷ್ಟೂ ಬೆಚ್ಚಗಿನ ಔಟ್‌ಫಿಟ್ ಧರಿಸುತ್ತಾರೆ. ಒಳಗೆ ಥರ್ಮಲ್‌ವೇರ್‌ ಧರಿಸುವುದರ ಜೊತೆಗೆ ಮೇಲುಡುಗೆ ಅಂದರೆ ಇನ್ನಿತರೇ ಔಟ್‌ಫಿಟ್‌ಗಳನ್ನು ಅದರ ಮೇಲೆ ಧರಿಸುತ್ತಾರೆ. ಇನ್ನು ಹಿಮಾಚಲ ಪ್ರದೇಶ ಎಂದಾಕ್ಷಣ ಅಲ್ಲಿ ಚಳಿ ಹೆಚ್ಚಾಗಿರುವುದರೊಂದಿಗೆ ಹಿಮ ಕೂಡ ಬೀಳುತ್ತಿರುತ್ತದೆ. ಇದಕ್ಕೆ ಪೂರಕ ಎಂಬಂತೆ, ಡ್ರೆಸ್‌ಕೋಡ್‌ ಪಾಲಿಸುವುದು ತೀರಾ ಅಗತ್ಯ. ನಟ ಯೋಗಿ ಕುಟುಂಬ ಕೂಡ ಇದನ್ನು ಚಾಚೂ ತಪ್ಪದೇ ಪಾಲಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ನಟ ಯೋಗಿ ವಿಂಟರ್‌ ಫ್ಯಾಷನ್‌

ಲೂಸ್‌ ಮಾದ ಯೋಗಿ ಎಂದೇ ಕರೆಸಿಕೊಳ್ಳುವ ನಟ ಯೋಗಿಯವರು ಧರಿಸಿರುವ ರೆಡ್‌ ಶೇಡ್‌ನ ಹೂಡಿ ಇರುವಂತಹ ಮೆನ್ಸ್ ಬಾಂಬರ್‌ ಜಾಕೆಟ್‌ ಎದ್ದು ಕಾಣುವಂತಿದೆ. ಫ್ರೆಶ್‌ ಲುಕ್‌ ನೀಡಿದೆ. ಅದರೊಂದಿಗೆ ಅವರು ಥರ್ಮಲ್‌ವೇರ್‌ ಮೇಲೆ ಧರಿಸಿರುವ ಟೊರ್ನ್ ಡಾರ್ಕ್ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ , ಬ್ಲಾಕ್‌ ಶೂ ಬೆಚ್ಚಗಿರಿಸಿದೆ. ಬ್ಲ್ಯಾಕ್‌ ಶೇಡ್‌ ಸನ್‌ಗ್ಲಾಸ್‌ ಆಕರ್ಷಕವಾಗಿಸಿದೆ. ಇನ್ನು ಇವರ ಈ ಡ್ರೆಸ್‌ಕೋಡ್‌ಗೆ ಪತ್ನಿ ಸಾಹಿತ್ಯಾ ಅವರ ಗ್ರೇ ಹಾಗೂ ಬ್ಲ್ಯಾಕ್‌ ಬಣ್ಣದ ಬಾಂಬರ್‌ ಜಾಕೆಟ್‌ , ಬ್ಲ್ಯಾಕ್‌ ಪ್ಯಾಂಟ್‌ ಹಾಗೂ ಚಾಕೋಲೆಟ್‌ ಶೇಡ್‌ನ ವಿಂಟರ್‌ ಶೂ ಮ್ಯಾಚ್‌ ಆಗಿದೆ. ಫಂಕಿ ವೈಟ್‌ ಫ್ರೇಮ್‌ ಸನ್‌ಗ್ಲಾಸ್‌ ಫಂಕಿ ಲುಕ್‌ ನೀಡಿದೆ. ಇವರಿಬ್ಬರೊಂದಿಗೆ ಮಗಳ ಫಂಕಿ ಲುಕ್‌ನ ಗ್ಲೌವ್ಸ್, ಜಾಕೆಟ್‌ ಹಾಗೂ ವುಲ್ಲನ್‌ ಕ್ಯಾಪ್‌ ಆಕೆಯನ್ನು ಕ್ಯೂಟ್‌ ಆಗಿಸಿದೆ. ಒಟ್ಟಾರೆ, ಸ್ಟಾರ್‌ ಕಪಲ್‌ ಫ್ಯಾಮಿಲಿಯ ವಿಂಟರ್‌ ಫ್ಯಾಷನ್‌ ಸೀಸನ್‌ಗೆ ತಕ್ಕಂತೆ ಪರ್ಫೆಕ್ಟ್ ಆಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version