ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣವೇ (Dry Weather) ಮೇಲುಗೈ ಸಾಧಿಸಲಿದೆ. ರಾಜ್ಯದ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿ ಇರಲಿದೆ. ಇದರಿಂದ ಬಿಸಿಲು ಹೆಚ್ಚಿರಲಿದೆ.
ಬೆಂಗಳೂರಿನ ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ದಾವಣಗೆರೆಯಲ್ಲಿ ಕಡಿಮೆ ಉಷ್ಣಾಂಶ ದಾಖಲು
ರಾಜ್ಯಾದ್ಯಂತ ಭಾನುವಾರವು ಒಣ ಹವೆ ಇತ್ತು. ಅತೀ ಕಡಿಮೆ ಕನಿಷ್ಠ ಉಷ್ಣಾಂಶ 16.0 ಡಿ.ಸೆ. ದಾವಣಗೆರೆಯಲ್ಲಿ ದಾಖಲಾಗಿತ್ತು. ಹಾಸನದಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 17.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 36.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು, ಹಾಸನ, ಬೆಳಗಾವಿ, ಚಿಕ್ಕಬಳ್ಳಾಪುರದಲ್ಲಿ ಕನಿಷ್ಠ ಉಷ್ಣಾಂಶ 14 ರಿಂದ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಕೊಪ್ಪಳ, ಬಾಗಲಕೋಟೆಯ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ನಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ.
ಇದನ್ನೂ ಓದಿ: Medical Negligence : ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಸಿಕೊಂಡಿದ್ದ ಮೂವರು ಒಂದೇ ವಾರಕ್ಕೆ ಸಾವು
ಇದೀಗ ಸಖತ್ ಟ್ರೆಂಡಿ ಜೆಲ್ಲಿ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್ಸ್!
ಟ್ರೆಂಡಿಯಾಗಿರುವ ಜೆಲ್ಲಿಯಂತಿರುವ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್‌ಗಳು (Silicon Mini Handbags Trend) ಪುಟ್ಟ ಹೆಣ್ಣುಮಕ್ಕಳನ್ನು ಸವಾರಿ ಮಾಡತೊಡಗಿವೆ. ನೋಡಲು ಫಂಕಿ ಲುಕ್ ನೀಡುವ ಈ ಕ್ಯೂಟ್ ಮಿನಿ ಹ್ಯಾಂಡ್ ಬ್ಯಾಗ್‌ಗಳು ಇದೀಗ ನಾನಾ ಬಗೆಯ ವಿನ್ಯಾಸದಲ್ಲಿ ಹಾಗೂ ಬಣ್ಣದಲ್ಲಿ ದೊರೆಯುತ್ತಿವೆ.
ಪಾಪ್ಯುಲರ್ ಆದ ಜೆಲ್ಲಿ ಮಿನಿ ಹ್ಯಾಂಡ್ ಬ್ಯಾಗ್ಸ್
“ಹೆಣ್ಣುಮಕ್ಕಳಿಗೆ ಮೊದಲಿನಿಂದಲೂ ನೇತಾಡುವ ಬಗೆಬಗೆಯ ಡಿಸೈನ್‌ನ ಪರ್ಸ್ ಹಾಗೂ ಹ್ಯಾಂಡ್ ಬ್ಯಾಗ್ ಸ್ಲಿಂಗ್ ಬ್ಯಾಗ್‌ಗಳನ್ನು ಹಾಕಿಕೊಳ್ಳುವುದು ಇಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು, ಕೆಲವು ಮಕ್ಕಳಂತೂ ದೊಡ್ಡವರಂತೆ ಸಿಂಗರಿಸಿಕೊಂಡು, ಔಟ್‌ಫೀಟ್‌ನೊಂದಿಗೆ ಹ್ಯಾಂಟ್ ಬ್ಯಾಗ್ ಕೂಡ ಹಾಕಿಕೊಳ್ಳಲು ಬಯಸುತ್ತಾರೆ. ಇಂತಹ ಮಕ್ಕಳಿಗೆ ಇಷ್ಟವಾಗುವಂತೆ, ಇದೀಗ ಬ್ರಾಂಡ್ ಡಿಸೈನ್ ಮೀರಿಸುವಂತಹ ಜೆಲ್ಲಿ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಧರಿಸಿದಾಗ ಆಕರ್ಷಕವಾಗಿ ಕಾಣುವ ಇವುಗಳ ಬೆಲೆಯೂ ಕೂಡ ದೊಡ್ಡ ಬ್ಯಾಗ್‌ಗಳಷ್ಟೇ ಇದೆ. ಟ್ವಿನ್ನಿಂಗ್ ಮಾಡಲು ಬಯಸುವ ಅಮ್ಮ-ಮಗಳು ಕೂಡ ಇವನ್ನು ಕೊಳ್ಳಬಹುದು. ದೊಡ್ಡ ಡಿಸೈನಿಂಗ್ ಬ್ಯಾಗ್‌ನ ರಿಪ್ಲಿಕಾದಂತೆ ಕಾಣಿಸುವ ಈ ಬ್ಯಾಗ್‌ಗಳು ಇದೀಗ ಸಖತ್ ಪಾಪ್ಯುಲರ್ ಆಗಿವೆ” ಎನ್ನುತ್ತಾರೆ ಬ್ಯಾಗ್ ಮಾರಾಟಗಾರರು. ಅವರ ಪ್ರಕಾರ, ಆಫ್‌ಲೈನ್ ಅಂಗಡಿಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ಇವುಗಳ ಮಾರಾಟ ಹೆಚ್ಚಿದೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಜೆಲ್ಲಿ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್ಸ್
ಕ್ಲಚ್ ಜೆಲ್ಲಿ ಫ್ಲಾಪ್ ಹ್ಯಾಂಡ್ ಬಾಗ್, ಜೆಲ್ಲಿ ಕ್ಯಾಂಡಿ ಮಿನಿ ಸ್ಲಿಂಗ್ ಬ್ಯಾಗ್, ಮಿನಿ ಪರ್ಲ್ ಸ್ಲಿಂಗ್ ಬ್ಯಾಗ್, ಜೆಲ್ಲಿ ಕ್ರಾಸ್‌ಬಾಡಿ ಸ್ಲಿಂಗ್ ಬ್ಯಾಗ್, ಕಾರ್ಟೂನ್ ಪ್ಯಾಚ್ ವರ್ಕ್ ಜೆಲ್ಲಿ ಶೇಡ್ ಮಿನಿ ಬ್ಯಾಗ್, ಪರ್ಲ್ ಹ್ಯಾಂಡಲ್ ಮಿನಿ ಜೆಲ್ಲಿ ಬ್ಯಾಗ್, ಕ್ರಿಸ್‌ಕ್ರಾಸ್ ಸ್ಲಿಂಗ್ ಬ್ಯಾಗ್, ಟ್ರೆಂಡಿ ಸಿಲಿಕಾನ್ ಜೆಲ್ಲಿ ಬ್ಯಾಗ್ ಸೇರಿದಂತೆ ನಾನಾ ಡಿಸೈನ್‌ನವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಮಕ್ಕಳಿಗೆ ಪ್ರಿಯವಾಗುವಂತಹ ಕ್ಯಾಂಡಿ ಕಲರ್‌ಗಳು, ಡಾರ್ಕ್ ಶೇಡ್‌ನವು, ಲೈಟ್ ಶೇಡ್‌ನವು ಹೆಚ್ಚು ಪ್ರಚಲಿತದಲ್ಲಿವೆ. ಇನ್ನು ನೋಡಲು ಬ್ರಾಂಡೆಡ್ ಡಿಸೈನರ್ ಬ್ಯಾಗ್‌ಗಳಂತೆಯೇ ಕಾಣಿಸುವ ಈ ಮಿನಿ ಜೆಲ್ಲಿ ಬ್ಯಾಗ್‌ಗಳು ಕಲರ್‌ಫುಲ್ ಶೇಡ್‌ನಲ್ಲಿ ಜನಪ್ರಿಯಗೊಂಡಿವೆ. ಆನ್‌ಲೈನ್‌ನಲ್ಲೂ ಸಾಕಷ್ಟು ಡಿಸೈನ್‌ನಲ್ಲಿ ಲಭ್ಯವಿರುವ ಇವು ಅಂಗಡಿಗಳಲ್ಲೂ ದೊರೆಯುತ್ತಿವೆ. ಬ್ರಾಂಡೆಡ್ ರಿಪ್ಲಿಕಾ ಡಿಸೈನ್‌ನಲ್ಲಿರುವ ಲೋಕಲ್ ಬ್ರಾಂಡ್‌ನವು ಕಡಿಮೆ ದರದಲ್ಲಿ ದೊರೆಯುತ್ತವೆ. ಸುಮಾರು 250 ರೂ.ಗಳಿಂದ ಆರಂಭಗೊಂಡು 700ರೂ.ಗಳವರೆಗೂ ಬೆಲೆ ಇದೆ. ಚೌಕಾಸಿ ಮಾಡಿ ವ್ಯಾಪಾರ ಮಾಡಿ ಎಂದು ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಲಭ್ಯ?
ಉದ್ಯಾನನಗರಿಯ ಮಲ್ಲೇಶ್ವರಂ 8ನೇ ಕ್ರಾಸ್ ಸುತ್ತಮುತ್ತ, ಜಯನಗರ 4ನೇ ಬ್ಲಾಕ್, ಬಿಡಿಎ ಕಾಂಪ್ಲೆಕ್ಸ್, ಕಮರ್ಷಿಯಲ್ ಸ್ಟ್ರೀಟ್ ಅಕ್ಕ-ಪಕ್ಕದ ಅಂಗಡಿಗಳಲ್ಲಿ, ಗಾಂಧೀಬಜಾರ್, ಮೆಜಸ್ಟಿಕ್ ಆಸುಪಾಸಿನ ಅಂಗಡಿಗಳಲ್ಲಿ ಕೈಗೆಟಕುವ ದರದಲ್ಲಿ ದೊರೆಯುತ್ತದೆ. ಮಕ್ಕಳಿಗೆ ಸುಮ್ಮನೆ ಹೆಚ್ಚು ಬೆಲೆಯ ಬ್ರಾಂಡೆಡ್ ಮಿನಿ ಬ್ಯಾಗ್‌ಗಳನ್ನು ಹೆಚ್ಚು ಹಣ ತೆತ್ತು ಕೊಂಡುಕೊಳ್ಳುವ ಬದಲು ರಿಪ್ಲಿಕಾ ಕೊಡಿಸಿದರೇ ಉತ್ತಮ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ